ಬಿಜೆಪಿಯಿಂದ ಮೊಂಬತ್ತಿ ಮೆರವಣಿಗೆ

| Published : Apr 24 2025, 12:06 AM IST

ಸಾರಾಂಶ

ಭಾರತದ ಮೇಲೆ ಇಂಥ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ. ಇಂಥ ಘಟನೆಗೆ ಕಾರಣವಾದವರನ್ನು ಹುಡುಕಿ ಹೊಡೆಯಬೇಕು ಮತ್ತು ಇಂಥ ದುಷ್ಟ ಶಕ್ತಿಗಳ ಸಂಹಾರ ಮಾಡಬೇಕು.

ಕೊಪ್ಪಳ:

ಕಾಶ್ಮೀರದ ನರಮೇಧದಲ್ಲಿ ಮೃತಪಟ್ಟವರಿಗೆ ಬಿಜೆಪಿ ವತಿಯಿಂದ ನಗರದಲ್ಲಿ ಮೇಣದ ಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಬಸವೇಶ್ವರ ದೇವಸ್ಥಾನದಿಂದ ಅಶೋಕ ವೃತ್ತದ ವರೆಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಕೈಯಲ್ಲಿ ಮೇಣಬತ್ತಿ ಹಿಡಿದು ಹೆಜ್ಜೆ ಹಾಕಿದರು.

ಭಯೋತ್ಪಾದಕರು ಹಾಗೂ ಪಾಕಿಸ್ತಾನ ವಿರುದ್ಧ ಘೋಷಣೆ ಹಾಕಲಾಯಿತು. ಭಾರತದ ಮೇಲೆ ಇಂಥ ಘಟನೆಗಳು ನಡೆಯುತ್ತಲೇ ಇವೆ. ಅದರಲ್ಲೂ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ. ಇಂಥ ಘಟನೆಗೆ ಕಾರಣವಾದವರನ್ನು ಹುಡುಕಿ ಹೊಡೆಯಬೇಕು ಮತ್ತು ಇಂಥ ದುಷ್ಟ ಶಕ್ತಿಗಳ ಸಂಹಾರ ಮಾಡಬೇಕು ಎಂದು ಆಗ್ರಹಿಸಲಾಯಿತು.

ಈ ವೇಳೆ ಡಾ. ಬಸವರಾಜ ಕ್ಯಾವಟರ, ನೀಲಕಂಠಯ್ಯ ಹಿರೇಮಠ, ಮಹಾಲಕ್ಷ್ಮಿ ಕಂದಾರಿ, ವೀಣಾ ಬನ್ನಿಗೋಳ, ಗಣೇಶ, ಉಮೇಶ ಕುರಡೇಕರ, ಸುನಿಲ ಹೆಸರೂರು, ಶರಣಯ್ಯ ಹಿರೇಮಠ, ಪ್ರದೀಪ ಹಿಟ್ನಾಳ, ವಕೀಲರಾದ ಪರ್ವತ ಗೌಡ, ಸೋಮಣ್ಣ ಹಳ್ಳಿ, ಮಹೇಶ ಹಾದಿಮನಿ, ಗೀತಾ ಮುತ್ತಾಳ, ಜಯಶ್ರೀ ಗೊಂಡಬಾಳ, ಚನ್ನಬಸು ಗಾಳಿ, ಮಲ್ಲಿಕಾರ್ಜುನ ಹಟ್ಟಿ, ರವಿ ಪಾಟೀಲ್, ರಮೇಶ ಕವಲೂರ, ರಾಜು ವಸ್ತ್ರದ ಸೇರಿದಂತೆ ಮೊದಲಾದವರು ಇದ್ದರು.