ಸಾರಾಂಶ
- ಮಾಮ್ಕೋಸ್ ಶೇರುದಾರರ ಸಮಾಲೋಚನಾ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆಮಾಮ್ಕೋಸ್ ಪ್ರಸಕ್ತ ಸಾಲಿನ ವಹಿವಾಟಿನಲ್ಲಿ ₹5.52 ಕೋಟಿ ಲಾಭಾಂಶ ಗಳಿಸಿ ಅಗ್ರ ಸ್ಥಾನ ಉಳಿಸಿಕೊಂಡಿದೆ ಎಂದು ಮಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕುಳಿ ಹೇಳಿದರು.ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಾಮ್ಕೋಸ್ ಶೇರುದಾರರ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು. 1939ರಲ್ಲಿ ಪ್ರಾರಂಭವಾದ ಈ ಸಂಸ್ಥೆ 2006ರಲ್ಲಿ ಸಹಕಾರ ಭಾರತಿ ನೇತೃತ್ವದಲ್ಲಿ ಸಂಸ್ಥೆ ಆಡಳಿತ ಚುಕ್ಕಾಣಿ ಹಿಡಿದಿತ್ತು. ಅಂದು 16,778 ಸದಸ್ಯರಿದ್ದರೆ, ಪ್ರಸಕ್ತ ಸಾಲಿನಲ್ಲಿ 30,624 ಸದಸ್ಯರನ್ನು ಒಳಗೊಂಡು 3 ಲಕ್ಷ ಕ್ವಿಂಟಾಲಿಗೂ ಅಧಿಕ ಅಡಕೆ ವ್ಯವಹಾರ ಮಾಡುತ್ತಿದೆ. ಇದಕ್ಕೆ ಸಂಸ್ಥೆ ಶೇರುದಾರರ ಅಚಲ ವಿಶ್ವಾಸ ಮತ್ತು ವ್ಯವಹಾರ ಕಾರಣ ಎಂದು ಹೇಳಿದರು.ಶಿವಮೊಗ್ಗ ನಗರದಲ್ಲಿ ಸಂಸ್ಥೆ ಸುಸಜ್ಜಿತ ಕಟ್ಟಡವನ್ನು 2023ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದು, 3 ಜಿಲ್ಲೆಗಳ ವ್ಯಾಪ್ತಿಯ ಈ ಸಂಸ್ಥೆ ಎಲ್ಲಾ ಕೇಂದ್ರ ಮತ್ತು ಶಾಖಾ ಕಚೇರಿಗಳು ಸ್ವಂತ ಕಟ್ಟಡ ಹೊಂದಿವೆ. ಎಲ್ಲಿಯೂ ಬಾಡಿಗೆ ಕಟ್ಟಡಗಳಿಲ್ಲ, ಕೊರೋನ ಸಂದರ್ಭದಲ್ಲಿ ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲ ದಿನಗಳಲ್ಲಿ ಕಚೇರಿ ತೆರೆದಿದ್ದು ಸಂಸ್ಥೆಯ ಶೇರುದಾರರಿಂದ ಅಡಕೆ ಖರೀದಿಸುವ ಮೂಲಕ ಶೇರುದಾರರ ಸಂಕಷ್ಟಗಳಿಗೆ ಸ್ಪಂಧಿಸಿದೆ ಎಂದು ಹೇಳಿದರು.ಅದೇ ರೀತಿ ಶೇರುದಾರರು ಸಹ ಗುಣಮಟ್ಟದ ಅಡಕೆಯನ್ನೇ ಸಂಸ್ಥೆಗೆ ಬಿಡುವ ಮೂಲಕ ಸಂಸ್ಥೆ ಗೌರವ ಕಾಪಾಡಿಕೊಳ್ಳ ಬೇಕು. ನಮ್ಮ ಸಂಸ್ಥೆ ಅಡಕೆಗೆ ದೇಶದಾಂದ್ಯಂತ ಉತ್ತಮ ಬೇಡಿಕೆ ಇದೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜೊತೆ ಉತ್ತಮ ಭಾಂಧವ್ಯಹೊಂದಿದ್ದು, ಅಡಕೆ ಬೆಲೆ ಕುಸಿಯದಂತೆ ಅಡಕೆ ಬೆಳೆಗಾರರ ಹಿತಕಾಯುತ್ತಿದೆ ಎಂದರು. ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಪಾರದರ್ಶಕವಾಗಿ ನೇಮಕಾತಿ ನಡೆಸಲಾಗಿದೆ. ಶೇರುದಾರರಿಗೆ ಆರೋಗ್ಯ ವಿಮೆ, ಕುಟುಂಬ ಮತ್ತು ಅವರ ತೋಟಗಳಲ್ಲಿ ಕೆಲಸ ಕಾರ್ಯ ಮಾಡುವ ಸಂದರ್ಭದಲ್ಲಿ ಉಂಟಾಗಬಹುದಾದ ಅವಘಡಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಸಾಲ ಪಡೆದ ಶೇರುದಾರರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಬೇಕು. ಸದಸ್ಯರು ಮಾಡುವ ಯಾವುದೇ ವ್ಯವಹಾರ ಅವರವರ ಮೊಬೈಲ್ನಲ್ಲೇ ಸಂಪೂರ್ಣ ಮಾಹಿತಿ ರವಾನಿಸಲಾಗುತ್ತಿದೆ ಎಂದರು.ಸಭೆಯಲ್ಲಿ ಅಗಲಿದ ಶೇರುದಾರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಮಾಲೋಚನಾ ಸಭೆ ಅಧ್ಯಕ್ಷತೆಯನ್ನು ಸಹಕಾರ ಭಾರತೀ ಸಂಸ್ಥೆ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ವಹಿಸಿದ್ದರು. ಸಂಸ್ಥೆ ನಿರ್ದೇಶಕರಾದ ಬಿ.ಸಿ.ನರೇಂದ್ರ, ಸುರೇಂದ್ರ, ಟಿ.ಎಲ್.ರಮೇಶ್, ಸಹನಾ ಸುಭಾಶ್, ಜಯಶ್ರೀ, ರತ್ನಾಕರ, ಕೆ.ವಿ. ಕೃಷ್ಣಮೂರ್ತಿ, ವಿರೂಪಾಕ್ಷ, ಸತೀಶ್, ಧಮೇಂದ್ರ, ಕೀರ್ತಿರಾಜ್, ವಿರೇಶ್, ಕುಬೇಂಧ್ರಪ್ಪ, ಟಿ.ವಿ. ಶಿವಶಂಕರಪ್ಪ, ಲೋಕೇಶ್, ಶಿವಮೂರ್ತಿ, ತಮ್ಮಯ್ಯ, ಪಾಂಡರಂಗ, ಮೊದಲಾದವರು ಪಾಲ್ಗೊಂಡಿದ್ದರು. ಟಿ.ಜಿ. ಸದಾನಂದ ಪ್ರಾರ್ಥಿಸಿದರು. ಮ್ಯಾಮ್ ಕೋಸ್ ನಿರ್ದೇಶಕ ಟಿ.ಎಲ್. ರಮೇಶ್ ಸ್ವಾಗತಿಸಿದರು. 22ಕೆಟಿಆರ್.ಕೆ.25ಃ
ತರೀಕೆರೆಯಲ್ಲಿ ನಡೆದ ಮಾಮ್ಕೋಸ್ ಶೇರುದಾರರ ಸಮಾಲೋಚನಾ ಸಭೆಯಲ್ಲಿ ಉಪಾಧ್ಯಕ್ಷ ಎಚ್.ಎಸ್. ಮಹೇಶ್ ಹುಲ್ಕುಳಿ, ಸಹಕಾರ ಭಾರತೀ ಸಂಸ್ಥೆಯ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ನಿರ್ದೇಶಕ ಟಿ.ಎಲ್.ರಮೇಶ್ ಮತ್ತಿತರರು ಭಾಗವಹಿಸಿದ್ದರು.