ಸಾರಾಂಶ
ವಿಘ್ನೇಶ್ವರ ಕಲಾ ಬಳಗದ ನೂತನ ಯೂಟ್ಯೂಬ್ ಚಾನೆಲ್ ಬಿಡುಗಡೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ರೇಣುಕನಗರದ ವಿಘ್ನೇಶ್ವರ ಕಲಾ ಬಳಗ ಮುಂದಿನ ದಿನಗಳಲ್ಲಿ ಸಾಮಾಜಿಕ ಕಳಕಳಿ ನಾಟಕ ಪ್ರದರ್ಶನದಿಂದ ಬಂದ ಹಣವನ್ನು ದೇವಾಲಯಗಳ ಜೀರ್ಣೋದ್ಧಾರ, ಪೂಜಾ ಸಾಮಾಗ್ರಿಗಳಿಗೆ ಬಳಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಲಾ ಬಳಗದ ನಿರ್ದೇಶಕ ಬಿ.ಜಗದೀಶ್ಚಂದ್ರ ತಿಳಿಸಿದರು.ರೇಣುಕನಗರದ ವಿಘ್ನೇಶ್ವರ ಕಲಾ ಬಳಗದಿಂದ ಆರಂಭಿಸಿರುವ ನೂತನ ಯೂಟ್ಯೂಬ್ ಚಾನೆಲ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ರಂಗಭೂಮಿ ಕಲೆಯನ್ನು ಜನರು ತಿರಸ್ಕಾರ ಮಾಡುತ್ತಿರುವ ಈ ದಿನಗಳಲ್ಲಿ ವಿಘ್ನೇಶ್ವರ ಕಲಾ ಬಳಗ ವಿನೂತನ ಪ್ರಯೋಗಗಳೊಂದಿಗೆ ಸಾಮಾಜಿಕ ಕಳಕಳಿ, ಹಿಂದೂ ಸಮಾಜದ ಜಾಗೃತಿಗೆ ವಿಶೇಷ ನಾಟಕಗಳನ್ನು ವಿವಿಧೆಡೆ ಪ್ರದರ್ಶನ ಮಾಡಿ ಅದರಿಂದ ಬಂದ ಹಣವನ್ನು ದೇವಾಲಯಗಳಿಗೆ ವಿನಿಯೋಗಿಸಿ ದೇವಾಲಯ ಅಭಿವೃದ್ಧಿಗೆ ಕೈಜೋಡಿಸ ಲಾಗುವುದು ಎಂದರು.ಈಗಾಗಲೇ ಕಲಾಬಳಗ ಈ ಬಾರಿ ಜೈ ಶ್ರೀರಾಮ್ ಎಂಬ ನಾಟಕವನ್ನು ಯಶಸ್ವಿಯಾಗಿ ಎರಡು ಪ್ರದರ್ಶಿಸಿದ್ದು, ಇದರಿಂದ ಬಂದ ಹಣ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಸಾಮಾಜಿಕ ಕಾರ್ಯ ಕೈಗೊಳ್ಳುವುದರೊಂದಿಗೆ ರಂಗಭೂಮಿ ಕಲೆಯನ್ನು ಸಹ ಮುಂದೆ ತರುವ ಪ್ರಯತ್ನ ಮಾಡಲಾಗುವುದು ಎಂದರು.ಕಲಾಬಳಗದ ಅಧ್ಯಕ್ಷ ಆರ್.ಡಿ.ಮಹೇಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಕಳೆದ 30 ವರ್ಷಗಳಿಂದ ಹೆಸರು ಮಾಡಿರುವ ತಂಡ ವಿಘ್ನೇಶ್ವರ ಕಲಾ ಬಳಗವಾಗಿದ್ದು, ತಂಡದ ಎಲ್ಲಾ ಕಲಾವಿದರು ಯಾವುದೇ ಬೇಧ ಭಾವವಿಲ್ಲದೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿರುವ ಕಾರಣ ಉತ್ತಮ ನಾಟಕ ಪ್ರದರ್ಶನವನ್ನು ವೇದಿಕೆಗಳಲ್ಲಿ ನೀಡುತ್ತಿದೆ.ಕಳೆದ ಕೆಲ ವರ್ಷಗಳಿಂದ ಕೇವಲ ನವರಾತ್ರಿ ಉತ್ಸವಕ್ಕೆ ಸೀಮಿತವಾಗಿದ್ದ ನಾಟಕ ಪ್ರದರ್ಶನವನ್ನು ಈ ಬಾರಿ ಇತರೆ ವೇದಿಕೆ ಗಳಿಗೂ ವಿಸ್ತರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದರ್ಶನ ನೀಡುವುದರೊಂದಿಗೆ ಅಭಿಮಾನಿಗಳಿಗೆ ರಂಗಭೂಮಿ ರಸದೌತಣ ನೀಡಲಾಗುವುದು ಎಂದರು.ಹಿರಿಯ ಕಲಾವಿದ ಸಿ.ಎಸ್.ಮಹೇಶ್ಚಂದ್ರ ಮಾತನಾಡಿ, ಮುಂದುವರಿದ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅತ್ಯವಶ್ಯಕ. ಈ ನಿಟ್ಟಿನಲ್ಲಿ ವಿಘ್ನೇಶ್ವರ ಕಲಾ ಬಳಗ ಈ ಬಾರಿ ನೂತನ ಯೂಟ್ಯೂಬ್ ಚಾನೆಲ್ ಮೂಲಕ ಸಾರ್ವಜನಿಕರು, ರಂಗಪ್ರೇಮಿಗಳ ಮನಮುಟ್ಟುವ ಪ್ರಯತ್ನ ಮಾಡುತ್ತಿದೆ. ಕಲಾಬಳಗದಿಂದ ಇಷ್ಟು ವರ್ಷಗಳ ಕಾಲ ಪ್ರದರ್ಶನ ಗೊಂಡ ನಾಟಕವನ್ನು ಇನ್ನು ಮುಂದೆ ಯೂಟ್ಯೂಬ್ ಚಾನೆಲ್‌ನಲ್ಲಿ ದಾಖಲಿಸಲಿದ್ದು, ಅದು ಶಾಶ್ವತವಾಗಿ ಉಳಿಯಲಿದೆ. ಈ ಮೂಲಕ ರಂಗ ಕಲೆ, ಕಲಾಬಳಗದ ಪ್ರದರ್ಶನ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಲಾಗುವುದು ಎಂದರು.
ಹಿರಿಯ ಕಲಾವಿದ ರವೀಂದ್ರಾಚಾರ್ ಮಾತನಾಡಿ, ಈ ಬಾರಿ ನವರಾತ್ರಿ ಉತ್ಸವದ ಮೂಲಕ ಆರಂಭಗೊಂಡ ಜೈ ಶ್ರೀರಾಮ್ ನಾಟಕ ಅತ್ಯಂತ ಯಶಸ್ವಿಯಾಗಿದ್ದು, ಎರಡು ಪ್ರದರ್ಶನ ನೀಡಲಾಗಿದೆ. ಈ ನಾಟಕವನ್ನು ಕನಿಷ್ಠ 15 ಪ್ರದರ್ಶನ ಮಾಡಬೇಕು ಎಂಬ ಉದ್ದೇಶ ಕಲಾ ಬಳಗಕ್ಕೆ ಇದೆ. ಕಲಾವಿದರ ಶ್ರಮದ ಪರಿಣಾಮ ನಾಟಕ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ವಿಘ್ನೇಶ್ವರ ಕಲಾ ಬಳಗದಿಂದ ರಂಗಭೂಮಿಗೆ ಮಹಿಳಾ ತಂಡ ಕಟ್ಟುವ ಉದ್ದೇಶ ಸಹ ಹೊಂದಲಾಗಿದೆ ಎಂದರು.ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸಚಿನ್‌ಕುಮಾರ್ ವಿಘ್ನೇಶ್ವರ ಕಲಾ ಬಳಗದ ನೂತನ ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜಭಟ್, ಕಲಾ ಬಳಗದ ಸದಸ್ಯರಾದ ಕಿರಣ್‌ಕುಮಾರ್, ಅರುಣ್‌ಕುಮಾರ್, ಪ್ರಕಾಶ್ ಬನ್ನೂರು, ಭೂಮಿಕಾ, ಚಂದನಾ, ದೀಕ್ಷಿತಾ, ಸ್ಫೂರ್ತಿ, ಇಂದುಜಾ, ಇಶಾನ್, ಕಾರ್ತಿಕ್, ಪ್ರತೀಕ್ ಮತ್ತಿತರರು ಹಾಜರಿದ್ದರು.೦೩ಬಿಹೆಚ್‌ಆರ್ ೧:
ಬಾಳೆಹೊನ್ನೂರು ರೇಣುಕನಗರದ ವಿಘ್ನೇಶ್ವರ ಕಲಾ ಬಳಗ ನೂತನವಾಗಿ ಆರಂಭಿಸಿರುವ ಯೂಟ್ಯೂಬ್ ಚಾನೆಲ್ ಅನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸಚಿನ್‌ಕುಮಾರ್ ಬಿಡುಗಡೆಗೊಳಿಸಿದರು. ಮಹೇಂದ್ರ, ಜಗದೀಶ್ಚಂದ್ರ, ಮಹೇಶ್ಚಂದ್ರ, ರವೀಚಿದ್ರಾಚಾರ್, ಕಿರಣ್‌ಕುಮಾರ್, ಭೂಮಿಕಾ, ಚಂದನಾ ಇದ್ದರು.