ಸಾರಾಂಶ
ಶಿವಣ್ಣ ದ್ವಿಚಕ್ರ ವಾಹನದಲ್ಲಿ ಹಣ ಇಟ್ಟು ಇತರಡೆ ಹೋದ ವೇಳೆ ಇದನ್ನು ಗಮನಿಸಿದ ದುಷ್ಕಮಿಗಳು ಬ್ಯಾಗಿನಲ್ಲಿರುವ ಹಣವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಪಾವಗಡ:
ರೈತನೊಬ್ಬ ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದ 12 ಲಕ್ಷದ ಮೊತ್ತದ ಹಣ ಕಳ್ಳತನವಾಗಿರುವ ಘಟನೆ ಪಟ್ಟಣದ ಅನಿತಾ ಲಕ್ಷ್ಮೀ ಮದ್ಯದ ಅಂಗಡಿಯ ಬಳಿ ಸೋಮವಾರ ನಡೆದಿದೆ.ತಾಲೂಕಿನ ಕ್ಯಾತಗಾನಕೆರೆ ಗ್ರಾಮದ ಶಿವಣ್ಣ ಎಂಬುವರು ಪಟ್ಟಣದ ಕೆಜಿಬಿವಿ ಬ್ಯಾಂಕ್‌ನಲ್ಲಿ ಜಮೀನು ಮಾರಾಟ ಮಾಡಿ ಬಂದ ಹಣವನ್ನು ಠೇವಣಿ ಇಡಲು ಬ್ಯಾಂಕ್‌ಗೆ ಹೋಗಿ ಕ್ಯಾಷಿಯರ್‌ಗೆ ಹಣವನ್ನು ನೀಡಿದ್ದು, ಈ ವೇಳೆ ಹಣದ ಕಟ್ಟುಗಳಲ್ಲಿ ವ್ಯತ್ಯಾಸವಿರುವುದರಿಂದ ಸರಿಪಡಿಸಿಕೊಂಡು ಬರುವಂತೆ ತಿಳಿಸಿರುತ್ತಾರೆ.ನಂತರ ಅಲ್ಲಿಂದ ವಾಪಸ್ ಆದ ಶಿವಣ್ಣ ದ್ವಿಚಕ್ರ ವಾಹನದಲ್ಲಿ ಹಣ ಇಟ್ಟು ಇತರಡೆ ಹೋದ ವೇಳೆ ಇದನ್ನು ಗಮನಿಸಿದ ದುಷ್ಕಮಿಗಳು ಬ್ಯಾಗಿನಲ್ಲಿರುವ ಹಣವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.ಇದರಿಂದ ಕಂಗಾಲಾದ ರೈತ ಶಿವಣ್ಣ ಕೂಡಲೇ ಪಟ್ಟಣದ ಠಾಣೆಗೆ ತೆರಳಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡಿರುವ ಸಿಪಿಐ ಎಂ.ಆರ್.ಸುರೇಶ್ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲಸುವ ಮೂಲಕ ತನಿಖೆ ಆರಂಭಿಸಿದ್ದಾರೆ.