ಪ್ರವಾಸಿಗರ ಭದ್ರತೆ ಬಗ್ಗೆ ನಿಗಾ ವಹಿಸಿ: ಸಿಪಿಐ ಸಂತೋಷ ಕಾಯ್ಕಿಣಿ

| Published : Mar 14 2025, 12:33 AM IST

ಪ್ರವಾಸಿಗರ ಭದ್ರತೆ ಬಗ್ಗೆ ನಿಗಾ ವಹಿಸಿ: ಸಿಪಿಐ ಸಂತೋಷ ಕಾಯ್ಕಿಣಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರವಾಸಿ ಕೇಂದ್ರ ಆಗಿರುವುದರಿಂದ ಇಲ್ಲಿಗೆ ದಿನಂಪ್ರತಿ ಸಾವಿರಾರು ಜನರು ಪ್ರವಾಸಿಗರು ಆಗಮಿಸುತ್ತಾರೆ.

ಭಟ್ಕಳ: ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಗುರುವಾರ ಗ್ರಾಮಾಂತ ಸಿಪಿಐ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ ಹೋಮ್ ಸ್ಟೇ ಮತ್ತು ವಸತಿ ಗೃಹ ಮಾಲೀಕ ಸಭೆ ಕರೆದು ವಾಸ್ತವ್ಯಕ್ಕೆ ಬರುವ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಚರ್ಚಿಸಿ ಕೆಲವು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸಿಪಿಐ ಸಂತೋಷ ಕಾಯ್ಕಿಣಿ, ಮುರುಡೇಶ್ವರ ಪ್ರಖ್ಯಾತ ಪ್ರವಾಸಿ ಕೇಂದ್ರ ಆಗಿರುವುದರಿಂದ ಇಲ್ಲಿಗೆ ದಿನಂಪ್ರತಿ ಸಾವಿರಾರು ಜನರು ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಅವರು ವಸತಿಗೃಹ, ಹೋಂಸ್ಟೇನಲ್ಲಿ ವಾಸ್ತವ್ಯ ಹೂಡುತ್ತಿದ್ದು, ಅವರ ಭದ್ರತೆ ಮತ್ತು ಸುರಕ್ಷತೆ ತುಂಬ ಮುಖ್ಯವಾಗಿದೆ. ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಗಮನ ಹರಿಸಬೇಕಾಗಿದೆ. ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಪೊಲೀಸರಿಂದ ಅಥವಾ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶ ಅಥವಾ ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಪ್ರವಾಸಿಗರನ್ನು ಕರೆದೊಯ್ದಲ್ಲಿ ದುಷ್ಕರ್ಮಿಗಳಿಂದ ಅಥವಾ ಕಾಡು ಪ್ರಾಣಿಗಳಿಂದ ಸಂಭವಿಸುವ ದುರ್ಘಟನೆಗಳಿಗೆ ಆಯಾ ಹೋಂ ಸ್ಟೇ ಮಾಲೀಕರೇ ಜವಾಬ್ದಾರರು ಎಂದರು.

ಮುರುಡೇಶ್ವರ ಪಿಎಸೈ ಹನುಮಂತ ಬಿರಾದಾರ, ವಸತಿಗೃಹ, ಹೋಂ ಸ್ಟೇ ಮಾಲೀಕರು ಇದ್ದರು.

ಮುರುಡೇಶ್ವರ ಠಾಣೆಯಲ್ಲಿ ಗ್ರಾಮಾಂತರ ಸಿಪಿಐ ಸಂತೋಷ ಕಾಯ್ಕಿಣಿ ಸಭೆ ನಡೆಸಿದರು.