ಬಾಲಕಿಯನ್ನು ತಾನು ವಾಸ್ತವ್ಯ ಮಾಡಿದ ರೂಮಿಗೆ ಕರೆಯಿಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಹೊನ್ನಾವರದ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್ ಗೌಡ ಅವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಲಕಿಗೆ ದೂರವಾಣಿ ಕರೆ, ಚಾಟ್, ಹಣಕಾಸಿನ ನೆರವು

ಭಟ್ಕಳದಲ್ಲಿ ಲಾಡ್ಜ್‌ಗೆ ಕರೆಸಿಕೊಂಡಿದ್ದ ಆರೋಪಿಕನ್ನಡಪ್ರಭ ವಾರ್ತೆ ಭಟ್ಕಳ

ಬಾಲಕಿಯನ್ನು ತಾನು ವಾಸ್ತವ್ಯ ಮಾಡಿದ ರೂಮಿಗೆ ಕರೆಯಿಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಹೊನ್ನಾವರದ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಅಭಿನಂದನ್ ಗೌಡ ಅವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜು. ೪ರಂದು ೧೬ ವರ್ಷದ ಬಾಲಕಿ ನಗರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಕಾನೂನು ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗತಿಯಲ್ಲಿ ಆರಂಭಿಸಲಾಗಿದೆ. ಅಪ್ರಾಪ್ತಳಾಗಿರುವುದು ತಿಳಿದಿದ್ದರೂ ಆರೋಪಿತ ಪಿಎಸ್‌ಐ ದೂರವಾಣಿ ಕರೆ, ಚಾಟ್ ಹಾಗೂ ಹಣಕಾಸಿನ ನೆರವು ನೀಡುವ ಮೂಲಕ ಆಕೆಯ ವಿಶ್ವಾಸ ಗಳಿಸಿದ್ದಾನೆ ಎನ್ನಲಾಗಿದೆ. ಮೇ ೩೧ರಂದು ಹೊನ್ನಾವರದ ಅಪ್ಪರಕೊಂಡದಲ್ಲಿ ಸಂಬಂಧಿಯ ಮಗಳ ಹುಟ್ಟುಹಬ್ಬವಿದೆ ಎಂದು ಹೇಳಿ ಬಾಲಕಿಯನ್ನು ಹೊನ್ನಾವರಕ್ಕೆ ಕರೆಸಿಕೊಂಡು, ಅಲ್ಲಿಂದ ತನ್ನ ಕಾರಿನಲ್ಲಿ ಭಟ್ಕಳಕ್ಕೆ ಕರೆತಂದು ತಾನು ವಾಸ್ತವ್ಯ ಮಾಡಿರುವ ಲಾಡ್ಜ್‌ಗೆ ಸಂಜೆ ಸುಮಾರು ೬.೩೦ಕ್ಕೆ ಕರೆದುಕೊಂಡು ಹೋಗಿ, ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ. ಮುರಿನಕಟ್ಟೆ ವಿವಾದದ ಸಂದರ್ಭ ಭಟ್ಕಳದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪಿಎಸ್‌ಐಗೆ ಪಟ್ಟಣದ ಲಾಡ್ಜ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಇದೇ ಅವಧಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ತನಿಖೆಯ ವೇಳೆ ಲಭ್ಯವಾದ ಕೆಲವು ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಭಟ್ಕಳ ನಗರ ಠಾಣೆ ಪೊಲೀಸರು ಆರೋಪಿತ ಪಿಎಸ್‌ಐಯನ್ನು ಭಾನುವಾರ ವಶಕ್ಕೆ ಪಡೆದು ನಂತರ ಬಂಧಿಸಿದ್ದಾರೆ. ಭಟ್ಕಳ ನಗರ ಠಾಣೆ ಪೊಲೀಸರು ಈ ಕುರಿತು ತನಿಖೆ ತೀವ್ರಗತಿಯಲ್ಲಿ ಮುಂದುವರಿಸಿದ್ದಾರೆ.