ಮುಂಗಾರು ಸಾಂಸ್ಕೃತಿಕ ಬೆಳ್ಳಿ ಹಬ್ಬ ಅದ್ಧೂರಿ ಆಯೋಜನೆಗೆ ನಿರ್ಧಾರ

| Published : Apr 08 2025, 01:46 AM IST

ಮುಂಗಾರು ಸಾಂಸ್ಕೃತಿಕ ಬೆಳ್ಳಿ ಹಬ್ಬ ಅದ್ಧೂರಿ ಆಯೋಜನೆಗೆ ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಚೂರು: ಮುನ್ನೂರು ಕಾಪು ಸಮಾಜದಿಂದ ಆಯೋಜಿಸುವ ಈ ಭಾರಿ 25ನೇ ವರ್ಷದ ಮುಂಗಾರು ಸಾಂಸ್ಕೃತಿಕ ಬೆಳ್ಳಿ ತೆರೆ ಹಬ್ಬವನ್ನು ಜೂ.8 ರಿಂದ 12ರ ವರೆಗೆ ಅದ್ಧೂರಿಯಾಗಿ ಆಯೋಜಿನೆಗೆ ನಿರ್ಧರಿಸಲಾಗಿದೆ ಎಂದು ಸಮುದಾಯದ ಮುಖಂಡರು ಮಾಜಿ ಶಾಸಕ ಹಾಗೂ ಹಬ್ಬದ ರೂವಾರಿ ಎ.ಪಾಪಾರೆಡ್ಡಿ ತಿಳಿಸಿದರು.

ಸ್ಥಳೀಯ ಶ್ರೀ ಲಕ್ಷ್ಮಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ 24 ವರ್ಷಗಳಿಂದ ರಾಯಚೂರಿನಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಮೂರು ದಿನ ಕಾಲ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಬಾರಿ 25ನೇ ವರ್ಷದ ಮುಂಗಾರು ಸಾಂಸ್ಕೃತಿಕ ಬೆಳ್ಳಿತೆರೆ ಹಬ್ಬ ಜಿಲ್ಲೆ ಸೇರಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಮೂಲಕ 25ನೇ ವರ್ಷದ ಬೆಳ್ಳಿ ಹಬ್ಬಕ್ಕೆ ಮುನ್ನೂರು ಕಾಪು ಸಮಾಜ ಮತ್ತಿಷ್ಟು ಮೆರಗು ತರಬೇಕು ಎಂಬ ಉದ್ದೇಶದಿಂದ ಜೂ.8, 9, 10, 11 ಹಾಗೂ 12 ರಂದು 5 ದಿನ ಕಾಲ ಅದ್ಧೂರಿ ಆಯೋಜನೆಗೆ ನಿರ್ಧರಿಸಲಾಗಿದೆ. ಮೂರು ದಿನ ಭಾರದ ಕಲ್ಲು ಎಳೆಯುವ ಎತ್ತುಗಳ ಸ್ಪರ್ಧೆ ಮತ್ತು ಇನ್ನು ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾರಿ ವೆಚ್ಚದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಿರ್ವಹಿಸಲು ನಿರ್ಧರಿಸಲಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಮುದಾಯದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ವಹಿಸಿದ್ದರು. ಕಾರ್ಯಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಜಿ.ಬಸವರಾಜ ರೆಡ್ಡಿ, ಉಪಾಧ್ಯಕ್ಷ ಬಿ.ಆಂಜನೇಯ, ಎನ್.ಶೇಖರರೆಡ್ಡಿ, ಕಾರ್ಯದರ್ಶಿ ಎಸ್.ವೆಂಕಟ, ಕೋಶಾಧ್ಯಕ್ಷ ಜಿ.ಶೇಖರರೆಡ್ಡಿ, ಪಿ.ನರಸರೆಡ್ಡಿ ಹಾಗೂ ಸಮಾಜದ ಮುಖಂಡರು ಯುವಕರು ಪಾಲ್ಗೊಂಡಿದ್ದರು.