ಮುಂಗಾರು ಹಂಗಾಮು: ಬರ ಪರಿಹಾರ ವಿತರಣೆ

| Published : May 15 2024, 01:35 AM IST

ಸಾರಾಂಶ

ಬಾಗಲಕೋಟೆ: ಜಿಲ್ಲೆಯ ಎಲ್ಲ 9 ತಾಲೂಕುಗಳನ್ನು ತೀವ್ರ ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಈಗಾಗಲೇ ಸರ್ಕಾರದಿಂದ 1 ರಿಂದ 9ನೇ ಹಂತದವರೆಗೆ ಜಿಲ್ಲೆಯ ಒಟ್ಟು 169175 ರೈತರಿಗೆ ತಲಾ ₹ 2 ಸಾವಿರರಂತೆ ಒಟ್ಟು ₹ 33.53 ಕೋಟಿ ಪರಿಹಾರ ವಿತರಿಸಲಾಗಿದೆ.

ಪ್ರಸಕ್ತ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ 149262 ರೈತರಿಗೆ ಎಸ್‌ಡಿಆರ್‌ ಎಫ್, ಎನ್‌ಡಿಆರ್‌ಎಫ್‌ ನಿಯಮಾನುಸಾರ ಬಾಕಿ ಪಾವತಿಸಬೇಕಾದ ಮೊತ್ತ ಒಟ್ಟು ₹ 195.55 ಕೋಟಿ ಅನುದಾನವನ್ನು ಪಾವತಿಗೆ ಸರ್ಕಾರಕ್ಕೆ ಸಲ್ಲಿಸಿದ್ದು, ಅರ್ಹ ರೈತರಿಗೆ ಪರಿಹಾರ ನೇರವಾಗಿ ಜಮೆ ಆಗುತ್ತಿರುತ್ತಿದೆ. ರೈತರ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ 12406 ರೈತರಿಗೆ ಪರಿಹಾರ ಜಮೆಯಾಗದಿರುವ ಬಗ್ಗೆ ಈಗಾಗಲೇ ಎಲ್ಲ ತಹಸೀಲ್ದಾರರಿಗೆ ಅಂತಹ ರೈತರ ಪಟ್ಟಿಯನ್ನು ಗ್ರಾಮವಾರು ವಿಂಗಡಿಸಿ ಕಳುಹಿಸಲಾಗಿದ್ದು, ಅಂತಹ ಖಾತೆಗಳನ್ನು ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.