ಸಾರಾಂಶ
ಕಾರ್ಕಳ ಹೆಬ್ರಿ ತಾಲೂಕುಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಕಾರ್ಕಳ ಪಟ್ಟಣದಲ್ಲಿ 105.2 ಮಿ.ಮೀ., ಕೆದಿಂಜೆ (123.6 ಮಿ.ಮೀ), ಮುಳಿಕಾರು (120.2 ಮಿ.ಮೀ), ಇರ್ವತ್ತೂರು (103.4 ಮಿ.ಮೀ), ಅಜೆಕಾರು (95.8 ಮಿ.ಮೀ), ಸಾಣೂರು (96.8 ಮಿ.ಮೀ) ಹಾಗೂ ಕೆರ್ವಾಶೆ (92.0 ಮಿ.ಮೀ), ಹೆಬ್ರಿ ತಾಲೂಕಿನಲ್ಲಿ 85.5 ಮಿ.ಮೀ. ಮಳೆ ವರದಿಯಾಗಿದೆ.
ಬುಧವಾರ ರಾತ್ರಿ ಹಾಗೂ ಗುರುವಾರ ಸುರಿದ ಗಾಳಿ ಮಳೆಗೆ ಕಾರ್ಕಳ ತಾಲೂಕಿನ ಹಲವು ಕಡೆ ಅಪಾರ ಹಾನಿಯಾಗಿದೆ. ಕುಕ್ಕುಂದೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದಲ್ಲಿರುವ ಉದಯ ಆಚಾರ್ಯ ಅವರ ಮನೆಗೆ ಹಾನಿಯಾಗಿ ಅಂದಾಜು 1 ಲಕ್ಷ ರು. ನಷ್ಟ ಸಂಭವಿಸಿದೆ.ಬೋಳ ಗ್ರಾಮದ ಜೋರಾ ಪ್ರದೇಶದಲ್ಲಿ ಪ್ರಸಾದ್ ಶೆಟ್ಟಿ ಅವರ ಮನೆಗೆ ತಾಳೆ ಮರ ಬಿದ್ದು 10,000 ರು. ನಷ್ಟ ಉಂಟಾಗಿದೆ.