ಕೌಶಲ್ಯ ಬೆಳೆಸಿಕೊಳ್ಳುವಲ್ಲಿ ಮಾಂಟೆಸ್ಸರಿ ಶಿಕ್ಷಣ ಸಹಕಾರಿ

| Published : Mar 04 2024, 01:18 AM IST

ಸಾರಾಂಶ

ರಾಮನಗರ: ಸುದೀರ್ಘ‌ ಇತಿಹಾಸ ಹೊಂದಿರುವ ಮಾಂಟೆಸ್ಸರಿ ಶಿಕ್ಷಣ ಪದ್ಧತಿ ಮಕ್ಕಳಲ್ಲಿ ಸಂಘಟನೆ, ಮನೋಬಲದ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಕಲೆಯನ್ನು ಕಲಿಸಲಿದ್ದು, ಮಾಂಟೆಸ್ಸರಿ ಶಿಕ್ಷಣ ಸರಳತೆ ಮತ್ತು ಸಹಜತೆಯ ಪ್ರತೀಕವಾಗಿದೆ ಎಂದು ಮಾಂಟೆಸ್ಸರಿ ಕೇಂದ್ರದ ಸಂಯೋಜಕಿ ಕಂಚನ್ ರೆಡ್ಡಿ ಹೇಳಿದರು.

ಮಾಂಟೇಸ್ಸರಿ ಆಡಿಟೋರಿಯಂನಲ್ಲಿ ನೇಟಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಾಂಟೆಸ್ಸರಿ ಕೇಂದ್ರ ಹಾಗೂ ನೇಟಸ್ ಮಾಂಟೆಸ್ಸರಿ ತರಬೇತಿ ಕೇಂದ್ರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಮಾಂಟೆಸ್ಸರಿ ಶಿಕ್ಷಣವು ಅಷ್ಟೇನೂ ಪ್ರಾಮುಖ್ಯತೆ ಇರಲಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಈ ಶಿಕ್ಷಣ ಪದ್ಧತಿಯನ್ನು ನೋಡಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ನಗರಗಳಲ್ಲಿಯೂ ಮಾಂಟೆಸ್ಸರಿ ಶಿಕ್ಷಣ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ಶಾಲೆ ಮುಖ್ಯ ಶಿಕ್ಷಕಿ ಅನಿತಾಲಕ್ಷ್ಮಿ ಮಾತನಾಡಿ, ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೆ ಕ್ರೀಯಾಶೀಲತೆ, ಸೃಜನಶೀಲತೆ, ಕಲಿಕೆಯಲ್ಲಿ ಆಸಕ್ತಿ ಸೇರಿದಂತೆ ಇತರೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ಮಾಂಟೆಸ್ಸರಿ ಶಿಕ್ಷಣ ಸಹಕಾರಿಯಾಗಲಿದೆ. ಶಿಕ್ಷಕರು ತಾಯಂದಿರ ಸ್ಥಾನದಲ್ಲಿರುವುದರಿಂದ ಮಕ್ಕಳೊಂದಿಗೆ ಮಕ್ಕಳಾಗಿ ಆಟ-ಪಾಠವನ್ನು ಹೇಳಿಕೊಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಂಟೆಸ್ಸೊರಿ ಶಿಕ್ಷಕಿಯರಾದ ಶಶಿಕಲಾ, ಪಾರ್ವತಿ, ಮೈತ್ರಿ, ಶಿಲ್ಪಾ, ಸುಸ್ಮಿತಾ, ತೇಜಸ್ವಿನಿ, ಸೇರಿದಂತೆ ಮಾಂಟೆಸ್ಸರಿ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಮಕ್ಕಳು ಭಾಗವಹಿಸಿದ್ದರು.2ಕೆಆರ್ ಎಂಎನ್ 2.ಜೆಪಿಜಿ

ಮಾಂಟೇಸ್ಸರಿ ಆಡಿಟೋರಿಯಂನಲ್ಲಿ ನೇಟಸ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಾಂಟೆಸ್ಸರಿ ಕೇಂದ್ರ ಹಾಗೂ ನೇಟಸ್ ಮಾಂಟೆಸ್ಸರಿ ತರಬೇತಿ ಕೇಂದ್ರದ ಸಮಾರೋಪ ಸಮಾರಂಭ ನಡೆಯಿತು.