ಮೂಡುಬಿದಿರೆ ಎಕ್ಸಲೆಂಟ್ಟ್‌ ಕಾಲೇಜ್ ಪ್ರತಿಭಾ ಪುರಸ್ಕಾರ

| Published : Jan 02 2024, 02:15 AM IST

ಸಾರಾಂಶ

ಮೂಡುಬಿದಿರೆಕಲ್ಲಬೆಟ್ಟುಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವಾರ್ಷಿಕ ಸಂಭ್ರಮದ ಪ್ರತಿಭಾ ಪುರಸ್ಕಾರಕಾರ್ಯಕ್ರಮದಲ್ಲಿ ಖ್ಯಾತ ಇಸ್ರೋ ವಿಜ್ಞಾನಿ ಚೈತನ್ಯ ಡಿ ಜೈನ್ ಪಾಲ್ಗೊಂಡು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಜೀವನ ಏರು ಪೇರಿನ ಗಾಯನ, ಸೋಲು ಗೆಲವುಗಳಿಂದ ಕೂಡಿದ ಪ್ರಯಾಣ. ಸ್ಪರ್ಧೆಗಳು ಬದುಕನ್ನುಎದುರಿಸಲು ಕಲಿಸುತ್ತವೆ. ಆದ್ದರಿಂದ ಸೋಲೆನ್ನುವುದು ಸಾವಲ್ಲಅದು ಗೆಲುವಿನ ಕಡೆ ನಡೆಯಲುಇನ್ನೊಂದುಅವಕಾಶದ ಬಾಗಿಲನ್ನುತೆರೆಯುತ್ತದೆ. ಸೋಲುಗಳನ್ನು ಮುಕ್ತವಾಗಿ ಸ್ವೀಕರಿಸಲು ದೈರ್ಯಬೇಕು ಆ ಧೈರ್ಯ ಗೆಲುವಿನತ್ತ ಮುನ್ನಡೆಯಲು ಆತ್ಮವಿಶ್ವಾಸ ತುಂಬುತ್ತದೆ. ಸೋಲಿರಲಿ ಗೆಲುವಿರಲಿ ಪ್ರಯತ್ನಶೀಲತೆಯನ್ನು ಬಿಡಕೂಡದು. ಪ್ರಯತ್ನವೇ ಪರಮೇಶ್ವರ. ಗೆಲುವುಗಳು ನಮ್ಮ ಯಶಸ್ಸಿನ ಯೋಚನೆಗಳನ್ನು ತಡೆಯಕೂಡದು ಪ್ರತಿಯೊಂದು ಗೆಲುವುಗಳು ನನಗಿನ್ನೂ ಹೊಣೆಗಾರಿಕೆಇದೆ ಎಂಬ ಜಾಗೃತಪ್ರಜ್ಞೆಯನ್ನು ಒಳಗೊಂಡಿರಬೇಕು ಆಗ ನಮ್ಮೊಳಗಿನ ಚೇತನಇನ್ನೂಎತ್ತರಕ್ಕೆಏರುತ್ತದೆಎಂದು ಖ್ಯಾತ ಇಸ್ರೋ ವಿಜ್ಞಾನಿ ಚೈತನ್ಯ ಡಿ ಜೈನ್ ಹೇಳಿದರು. ಅವರು ಮೂಡುಬಿದಿರೆಕಲ್ಲಬೆಟ್ಟುಎಕ್ಸಲೆಂಟ್ ವಿದ್ಯಾಸಂಸ್ಥೆಗಳ ವಾರ್ಷಿಕ ಸಂಭ್ರಮದ ಪ್ರತಿಭಾ ಪುರಸ್ಕಾರಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ. ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ಶ್ರೀಮತಿ ಅಶ್ವಿತಾ ರೈ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ವೈಶಾಲಿ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಶಿಕ್ಷಕಿ ರಕ್ಷಿತಾ ಸ್ವಾಗತಿಸಿ ಉಪನ್ಯಾಸಕಚಂದ್ರಶೇಖರ ಶೆಟ್ಟಿ ವಂದಿಸಿದರು. ಶ್ರೀಮತಿ ವೆನೆಸ್ಸಾಕಾರ್ಯಕ್ರಮ ನಿರೂಪಿಸಿದರು.