ಮೂಡುಬಿದಿರೆ ಪುರಸಭೆ ನೂತನ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ

| Published : Aug 22 2024, 12:45 AM IST / Updated: Aug 22 2024, 12:46 AM IST

ಮೂಡುಬಿದಿರೆ ಪುರಸಭೆ ನೂತನ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಯ 23 ಸದಸ್ಯ ಬಲದಲ್ಲಿ ಬಿಜೆಪಿ 13, ಕಾಂಗ್ರೆಸ್ 12 ಸದಸ್ಯ ಬಲ ಹೊಂದಿರುವುದರಿಂದ ಬಿಜೆಪಿ ಸರಳ ಬಹುಮತದೊಂದಿಗೆ ನಿರೀಕ್ಷೆಯಂತೆ ಮತ್ತೊಮ್ಮೆ ಅಧಿಕಾರಕ್ಕೇರಿದೆ.

ಮೂಡುಬಿದಿರೆ: ಮೂಡುಬಿದಿರೆ ಪುರಸಭೆಯ ನೂತನ ಅಧ್ಯಕ್ಷೆಯಾಗಿ ಬಿಜೆಪಿಯ ಜಯಶ್ರೀ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ್ ಪೂಜಾರಿ ಆಯ್ಕೆಯಾಗಿದ್ದಾರೆ.

ಪುರಸಭಾ ಕಚೇರಿಯಲ್ಲಿ ನೂತನ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಮಮತಾ ಆನಂದ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಕೊರಗಪ್ಪ ಸ್ಪರ್ಧಿಸಿದ್ದರು.

ಪುರಸಭೆಯ 23 ಸದಸ್ಯ ಬಲದಲ್ಲಿ ಬಿಜೆಪಿ 13, ಕಾಂಗ್ರೆಸ್ 12 ಸದಸ್ಯ ಬಲ ಹೊಂದಿರುವುದರಿಂದ ಬಿಜೆಪಿ ಸರಳ ಬಹುಮತದೊಂದಿಗೆ ನಿರೀಕ್ಷೆಯಂತೆ ಮತ್ತೊಮ್ಮೆ ಅಧಿಕಾರಕ್ಕೇರಿದೆ.

ಮೂಡುಬಿದಿರೆಯಲ್ಲಿ ಕಳೆದ ಐದು ದಶಕಗಳ ಪುರಸಭಾ ಆಡಳಿತದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದ್ದು ಎರಡನೇ ಅವಧಿಯಲ್ಲಿ ಮತ್ತೆ ಆಡಳಿತ ಸೂತ್ರ ತನ್ನದಾಗಿಸಿಕೊಂಡಿದೆ. ಜಯಶ್ರೀ ಪ್ರಥಮ ಬಾರಿಗೆ , ನಾಗರಾಜ್ ಪೂಜಾರಿ ದ್ವಿತೀಯ ಬಾರಿಯ ಪುರಸಭಾ ಸದಸ್ಯರಾಗಿದ್ದಾರೆ. ನಾಗರಾಜ್ ಕಳೆದ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು.

ಚುನಾವಣಾಧಿಕಾರಿ, ಮೂಡುಬಿದಿರೆ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಚುನಾವಣೆ ನಡೆಸಿಕೊಟ್ಟರು. ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಸಂಸದ ಬ್ರಿಜೇಶ್ ಚೌಟ ಮತ ಹಾಕಿದರು. ಪುರಸಭಾ ಮುಖ್ಯಧಿಕಾರಿ ಇಂದು ಎಂ. ಚುನಾವಣೆಯಲ್ಲಿ ಸಹಕರಿಸಿದರು. ಚುನಾವಣೆ ನಂತರ ನಡೆದ ಅಭಿನಂದನಾ ಕಾರ್ಯಕ್ರಮ ನಡೆಯಿತು.