ಮೂಡುಬಿದಿರೆ ಸೊಸೈಟಿ ಚುನಾವಣೆ: ಈಗಿನ ಆಡಳಿತ ಮಂಡಳಿ ಪುನರಾಯ್ಕೆ

| Published : Jan 09 2024, 02:00 AM IST

ಸಾರಾಂಶ

ಮೂಡುಬಿದಿರೆ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ 13 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಂ. ಬಾಹುಬಲಿ ಪ್ರಸಾದ್ ನೇತೃತ್ವದ ಹಾಲಿ ಆಡಳಿತ ಮಂಡಳಿಯ ನಿರ್ದೇಶಕರು ಪುನರಾಯ್ಕೆಯಾಗಿದ್ದಾರೆ. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಮುಖವಾಗಿದ್ದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಕೂಡ ಗೆಲುವು ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಅವಿಭಜಿತ ದ.ಕ ಜಿಲ್ಲೆಯಲ್ಲಿ ಶತಮಾನ ಪೂರೈಸಿದ ಹಿರಿಯ ಸಹಕಾರಿ ಸೊಸೈಟಿಯಾಗಿರುವ ಮೂಡುಬಿದಿರೆ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರ 13 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಎಂ. ಬಾಹುಬಲಿ ಪ್ರಸಾದ್ ನೇತೃತ್ವದ ಹಾಲಿ ಆಡಳಿತ ಮಂಡಳಿಯ ನಿರ್ದೇಶಕರು ಪುನರಾಯ್ಕೆಯಾಗಿದ್ದಾರೆ.

ಈ ತಂಡದಲ್ಲಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಹೊಸ ಮುಖವಾಗಿದ್ದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಕೂಡ ಗೆಲುವು ದಾಖಲಿಸಿ ಈ ಬಾರಿ ಆಡಳಿತ ಮಂಡಳಿ ಪ್ರವೇಶಿಸಿರುವುದು ವಿಶೇಷತೆ.

ಸಾಮಾನ್ಯ ಸ್ಥಾನದ ಸ್ಪರ್ಧಿಗಳಾಗಿದ್ದ ಅಶೋಕ್ ಕಾಮತ್ ಎಂ.ಪಿ (3085ಮತಗಳು), ಎಂ ಬಾಹುಬಲಿ ಪ್ರಸಾದ್(2956) , ಮನೋಜ್ ಕುಮಾರ್(2952), ಜಯರಾಮ ಕೋಟ್ಯಾನ್ (2801), ಎಂ.ಜ್ಞಾನೇಶ್ವರ ಕಾಳಿಂಗ ಪೈ(2774), ಅಭಯಚಂದ್ರ ಕೆ.(2620) ಸಿ.ಹೆಚ್. ಅಬ್ದುಲ್ ಗಫೂರ್ (2283) ಜಯಗಳಿಸಿದ್ದಾರೆ.

ಮಹಿಳಾ ಮೀಸಲು ಸ್ಥಾನದಲ್ಲಿ ಪ್ರೇಮಾ ಎಸ್.ಸಾಲ್ಯಾನ್(2847) ಹಾಗೂ ಅನಿತಾ ಪಿ.ಶೆಟ್ಟಿ (2700)ಗೆಲುವು ದಾಖಲಿಸಿದ್ದಾರೆ.

ಮಹೇಶ್ ಕುಮಾರ್ (1276), ಸತೀಶ್ ಎನ್. ಬಂಗೇರ (936), ಸುಜಾತಾ ಮಲ್ಯ (1106) ಸ್ಪರ್ಧಾ ಕಣದಲ್ಲಿದ್ದು ಪರಾಭವಗೊಂಡಿದ್ದಾರೆ.ಒಟ್ಟು ಅರ್ಹ 7217 ಮತದಾರರ ಪೈಕಿ 4220 ಮಂದಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಒಟ್ಟು 389 ಮತಗಳು ಅಸಿಂಧುವಾಗಿವೆ. ಹಾಲಿ ನಿರ್ದೇಶಕರಾಗಿದ್ದ ಗಣೇಶ್ ನಾಯಕ್ ಎಂ.( ಪ್ರವರ್ಗ ಎ) ಜಾರ್ಜ್ ಮೋನಿಸ್( ಪ್ರವರ್ಗ ಬಿ), ಪದ್ಮನಾಭ (ಪ.ಜಾತಿ), ದಯಾನಂದ ನಾಯ್ಕ (ಪ.ಪಂಗಡ) ಅವಿರೋಧವಾಗಿ ಆಯ್ಕೆಯಾಗಿದ್ದರು.ಚುನಾವಣಾಧಿಕಾರಿಯಾಗಿದ್ದ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ವಿಲಾಸ್ ಕುಮಾರ್ ಭಾನುವಾರ ರಾತ್ರಿ ವೇಳೆಗೆ ಫಲಿತಾಂಶ ಪ್ರಕಟಿಸಿದರು. ಸೊಸೈಟಿಯ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರ ಶೇಖರ್ ಎಂ., ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.