ಮೂಡುಬಿದಿರೆ: ರಾಜ್ಯಮಟ್ಟದ ಕಬ್ಸ್-ಬುಲ್‌ಬುಲ್ಸ್ ಉತ್ಸವ ಸಮಾರೋಪ

| Published : Jan 29 2024, 01:30 AM IST

ಮೂಡುಬಿದಿರೆ: ರಾಜ್ಯಮಟ್ಟದ ಕಬ್ಸ್-ಬುಲ್‌ಬುಲ್ಸ್ ಉತ್ಸವ ಸಮಾರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ೪೩ನೇ ರಾಜ್ಯಮಟ್ಟದ ಕಬ್ಸ್ - ಬುಲ್‌ಬುಲ್ಸ್ ಉತ್ಸವ ಸಮಾರೋಪ ಸಮಾರಂಭ ನಡೆಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಭಾರತದ ಕರ್ನಾಟಕ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ, ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಸಹಭಾಗಿತ್ವದಲ್ಲಿ ಮೂಡಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ೪೩ನೇ ರಾಜ್ಯಮಟ್ಟದ ಕಬ್ಸ್ - ಬುಲ್‌ಬುಲ್ಸ್ ಉತ್ಸವ ಸಮಾರೋಪ ಸಮಾರಂಭ ನಡೆಯಿತು.ಸ್ಕೌಟ್ಸ್ ಮತ್ತು ಗೈಡ್ಸ್ ಭಾರತದ ಕರ್ನಾಟಕ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಮಾತನಾಡಿ, ಸಮಾಜದಲ್ಲಿರುವ ಅತಿದೊಡ್ಡ ಸಮಸ್ಯೆ ಧಾರ್ಮಿಕ ಒಡಕು. ಯುವಜನತೆ ಧರ್ಮಾಂದತೆ ಮುಕ್ತರಾಗಬೇಕು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗಿರದೇ, ಸಂಸ್ಕೃತಿ, ಕಲೆ, ನಾಯಕತ್ವದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಡಾ.ಎಂ. ಮೋಹನ ಆಳ್ವ ಅವರು ಜಾತಿ ಮತದ ಭೇದ ಭಾವಗಳನ್ನು ದೂರವಿರಿಸಿ ಸರ್ವರನ್ನು ಬೆಳೆಸಿ ಅಂತಾರಾಷ್ಟ್ರೀಯ ‘ಜಾಂಬೂರಿ’ಯನ್ನು ಅದ್ವಿತೀಯವಾಗಿ ನಡೆಸಿದ್ದಾರೆ. ಮೂಡುಬಿದಿರೆಯನ್ನು ವಿದ್ಯಾಕಾಶಿ, ಸ್ಕೌಟ್ಸ್ ಗೈಡ್ಸ್ ಕಾಶಿಯನ್ನಾಗಿ ಬೆಳೆಸಿದ್ದಾರೆ. ವಿದ್ಯಾರ್ಥಿಗಳು ಈ ತರಬೇತಿಯಿಂದ ಶಿಸ್ತು ಸಂಯಮಗಳನ್ನು ಕಲಿತುಕೊಳ್ಳಬೇಕು ಎಂದರು.ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ ಮಾತನಾಡಿ, ವಿದ್ಯಾಥಿಗಳು ತಮ್ಮಲ್ಲಿರುವ ವೈವಿಧ್ಯ ಕಲೆಗಳನ್ನು ಪ್ರಸ್ತುತಪಡಿಸುತ್ತಿರಬೇಕು. ತಮ್ಮ ಆಸಕ್ತಿ ವಿಷಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ ನಿರೂಪಿಸಿದರು. ಜಿಲ್ಲಾ ಸಹಾಯಕ ಕಾರ್ಯದರ್ಶಿ ವಸಂತ್ ದೇವಾಡಿಗ ಸ್ವಾಗತಿಸಿದರು. ಜಿಲ್ಲಾ ಸ್ಕೌಟ್ಸ್ ತರಬೇತಿ ಆಯುಕ್ತ ಪ್ರತೀಮ್ ಕುಮಾರ್ ವಂದಿಸಿದರು.ಮೂಡಬಿದಿರೆ ಪುರಸಭಾ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಕುಮಾರ್, ರಾಜ್ಯ ಗೈಡ್ಸ್ ಆಯುಕ್ತೆ ರಾಧಾ ವೆಂಕಟೇಶ್, ರಾಜ್ಯ ವಯಸ್ಕ ಗೈಡ್ಸ್ ಆಯುಕ್ತೆ ರಾಮಲತ, ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ್ ಭಟ್, ರಾಜ್ಯ ಪರೀಕ್ಷಾ ಮೇಲ್ವಿಚಾರಕಿ ಹೊನ್ನಮ್ಮ, ಜಿಲ್ಲಾ ಜಂಟಿ ಕಾರ್ಯದರ್ಶಿ ಜಯವಂತಿ ಸೋನ್ಸ್, ಜಿಲ್ಲಾ ಸಂಘಟನಾ ಆಯುಕ್ತ ಶಾಂತರಾಮ ಪ್ರಭು, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ., ಉಡುಪಿ ಜಿಲ್ಲಾ ಸಂಸ್ಥೆಯ ಗೈಡ್ಸ್ ಆಯುಕ್ತೆ ಜ್ಯೋತಿ ಪೈ, ಉಡುಪಿ ಜಿಲ್ಲಾ ತರಬೇತಿ ಆಯುಕ್ತೆ ಸಾವಿತ್ರಿ ಮನೋಹರ್, ಶಿಬಿರ ನಾಯಕ(ಸಿ) ರಾಮರಾವ್, ಸಿಸ್ಟರ್ ಲೋರಿನ (ಎಫ್), ಬಂಟ್ವಾಳ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಬಿ.ಎಂ.ತುಂಬೆ, ಮಂಗಳೂರು ಉತ್ತರ ನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಕಿಣಿ, ಮೂಲ್ಕಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸರ್ವೋತ್ತಮ ಅಂಚನ್, ದೇವಿ ಪ್ರಸಾದ್ ಪುನರೂರು, ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಭಾರತಿ ಉಪಸ್ಥಿತರಿದ್ದರು.