ಎಡಪದವಿನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪ.ಪೂ. ಕಾಲೇಜು ಬಾಲಕರ ಹಾಗೂ ಬಾಲಕಿಯರ ತಂಡ ಎರಡೂ ವಿಭಾಗದಲ್ಲಿ ಚಾಂಪಿಯನ್ ಆಗಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ 10 ಅಂಕಗಳು ಹಾಗೂ ಬಾಲಕಿಯರ ವಿಭಾಗದಲ್ಲಿ 13 ಅಂಕಗಳೊಂದಿಗೆ ಆಳ್ವಾಸ್ ಈ ಸಾಧನೆ ಮೆರೆದಿದೆ.
ಮೂಡುಬಿದಿರೆ: ಎಡಪದವಿನ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪೂರ್ವ ಕಾಲೇಜುಗಳ ಗುಡ್ಡಗಾಡು ಓಟದಲ್ಲಿ ಆಳ್ವಾಸ್ ಪ.ಪೂ. ಕಾಲೇಜು ಬಾಲಕರ ಹಾಗೂ ಬಾಲಕಿಯರ ತಂಡ ಎರಡೂ ವಿಭಾಗದಲ್ಲಿ ಚಾಂಪಿಯನ್ ಆಗಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ 10 ಅಂಕಗಳು ಹಾಗೂ ಬಾಲಕಿಯರ ವಿಭಾಗದಲ್ಲಿ 13 ಅಂಕಗಳೊಂದಿಗೆ ಆಳ್ವಾಸ್ ಈ ಸಾಧನೆ ಮೆರೆದಿದೆ.ಬಾಲಕರ ವಿಭಾಗ: ಸಮರ್ಥ್ – ಪ್ರಥಮ, ಸಂತೋಷ್ - ದ್ವಿತೀಯ, ವರುಣ್ – ತೃತೀಯ, ಮಿಥುನ್ –ನಾಲ್ಕನೇ ಸ್ಥಾನ (ಆಳ್ವಾಸ್ ಪ.ಪೂ ಮೂಡುಬಿದಿರೆ), ಲಿತೇಶ್ – ಐದನೇ ಸ್ಥಾನ (ಎಸ್.ಡಿ.ಎಂ. ಕಾಲೇಜು ಉಜಿರೆ), ದರ್ಶನ್ – ಆರನೇ ಸ್ಥಾನ (ಆಳ್ವಾಸ್ ಪ.ಪೂ ಮೂಡುಬಿದಿರೆ)
ಬಾಲಕಿಯರ ವಿಭಾಗ : ನಾಗಿಣಿ- ಪ್ರಥಮ, ಪ್ರಿಯಾಂಕ - ದ್ವಿತೀಯ (ಆಳ್ವಾಸ್ ಪ.ಪೂ ಮೂಡುಬಿದಿರೆ), ಮೋಕ್ಷ – ತೃತೀಯ (ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜು), ಸ್ವಪ್ನಾ - ನಾಲ್ಕನೇ ಸ್ಥಾನ (ಆಳ್ವಾಸ್ ಪ.ಪೂ ಮೂಡುಬಿದಿರೆ), ಪ್ರಮೀಳಾ – ಐದನೇ ಸ್ಥಾನ (ನೂಜಿಬಾಳ್ತಿಲ ಬೆಥನಿ ಪ.ಪೂ. ಕಾಲೇಜು) ಜಿ ಕಿರಣ – ಆರನೇ ಸ್ಥಾನ (ಆಳ್ವಾಸ್ ಪ.ಪೂ ಮೂಡುಬಿದಿರೆ) ಸಾಧನೆ ಮಾಡಿದ್ದಾರೆ.ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.