ಎಕ್ಸಲೆ೦ಟ್ ಮೂಡುಬಿದಿರೆ ನೀಟ್ ಪರೀಕ್ಷೆಯಲ್ಲಿ ಅಭೂತಪೂರ್ವ ಫಲಿತಾಂಶ

| Published : Jun 06 2024, 12:30 AM IST

ಸಾರಾಂಶ

ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ. ಪ್ರಶಾಂತ್ ಹೆಗಡೆ ಮತ್ತು ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ ನೀಟ್ ೨೦೨೪ ರ ಫಲಿತಾಂಶ ಪ್ರಕಟಗೊಂಡಿದ್ದು ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಯಶಸ್ಸು ಗಳಿಸಿದ್ದಾರೆ. ನಿಖಿಲ್ ಬಿ. ಗೌಡ (ಭಗವನ್ ಬಿ.ಎಂ. ಹಾಗೂ ಶೋಭ ಎಂ. ದಂಪತಿ ಮಗ ) ೭೧೦ ಅಂಕ ಪಡೆದು ರಾಷ್ಟ್ರ ಮಟ್ಟದಲ್ಲಿ ೩೮೩ (ಕೆ )ನೇ ರ‍್ಯಾಂಕ್ ಪಡೆದು ಅತ್ಯುನ್ನತ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ಸೂರಜ್ ಕೂಡಲಗಿಮಠ ೬೮೭, ನಿಶಾಂತ್ ಪಿ. ಹೆಗಡೆ ೬೮೫, ಶಿಶಿರ ಬಿ.ಇ. ೬೮೫, ಭಾರ್ಗವಿ ಎಂ.ಜೆ. ೬೮೦, ಸೃಜನ್ ಎಂ.ಆರ್. ೬೮೦, ಶಶಿಭೂಷಣ ೬೭೬, ಗೌರವ ಭಾರದ್ವಾಜ್ ೬೭೫, ರಿತೀಶ್ ಎಂ. ೬೭೧, ರೋಹಿತ್ ಗೌಡ ೬೭೧, ಹರ್ಶಿತ್ ಡಿ ೬೬೬, ಸುಹಾಸ್ ಎಂ ಎಸ್ ೬೬೫, ವಿಷ್ಣುಪ್ರಸಾದ್ ಎಸ್.ಆರ್. ೬೫೬, ಸಮರ್ಥ ಸಮ್ಯಮ್ ರಾಮಕೃಷ್ಣ ೬೫೫, ಶಶಾಂಕ್ ಎಂ. ೬೫೫, ಚಿನ್ಮಯ್‌ರಾಜ್ ಎಂ.ಎಸ್. ೬೫೦, ಶ್ರೀಶೈಲ ೬೫೦, ಶ್ರಾವ್ಯಾ ಡೋಂಗ್ರೆ ೬೪೮, ತನುಶ್ರೀ ಎಸ್. ಕಲ್ಕೋಟಿ ೬೪೩, ಶ್ರೆಯಸ್ ಎಸ್. ಮಾಲಿ ೬೪೨, ಭೀಮಶಂಕರ ೬೩೮, ಪವನ್ ಜಿ.ಎಸ್. ೬೩೭, ಕಾರ್ತಿಕ್ ಎಂ. ೬೩೬, ಶಶಾಂಕ್ ಎಸ್.ಎಸ್. ೬೩೬, ಸಂಗಮೇಶ್ ೬೩೬, ರೋಶನ್ ೬೩೩, ಸಾಕ್ಷಿತ್ ಎನ್.ಎಸ್. ಗೌಡ ೬೩೩, ವರ್ಷಾ ಬಡಿಗೇರ್ ೬೩೨, ಮೋಹನ್ ಗೌಡ ೬೩೦, ಕೆ.ಜಿ. ಪ್ರಣವ್ ಕಶ್ಯಪ್ ೬೨೭, ಚಿರಂತನ್ ಎಚ್.ಆರ್. ೬೨೬, ಸಚೀಂದ್ರ ಆರ್. ೬೨೫, ಅಂಕುಶ್ ಬಿ.ಎಂ. ೬೨೫, ಆದಿತ್ಯ ಜೆ.ಬಿ. ೬೨೩, ಸೃಷ್ಟಿ ಲಕ್ಷ್ಮಣ ೬೨೩, ಮಂಜುನಾಥ ಎಸ್ ೬೨೦, ಪಿ ಆಕಾಶ್ ರೆಡ್ಡಿ ೬೧೯, ಪ್ರಕೃತಿ ಸಿ. ೬೧೫, ಆಶ್ರಯಾ ಪಿ ೬೧೪, ಶ್ರೀತೇಜ್ ಎಸ್. ೬೧೪, ಗಿರಿ ತೇಜಸ್ವಿ ಟಿ. ೬೧೦, ವಿನೋದ್ ರೆಡ್ಡಿ ಪಾಟೀಲ್ ೬೦೭, ಹಿತೇಶ್ ವೈಷ್ಣವ್ ೬೦೫, ಅನಿರುದ್ಧ ಎನ್.ಎಂ. ೬೦೨, ಗಾಯತ್ರಿ ಮುಕುಂದ್ ಮೊಗೇರ್ ೬೦೨, ಮನೋಜ್ ಬಿ.ಎಲ್. ೬೦೨, ಕವನಾ ಪಾಟೀಲ್ ಜಿ ಬಿ ೬೦೧, ಸುಹಾಸ್ ಜಿ ೬೦೧, ಕರಿಬಸಪ್ಪ ಯಲಿಗಾರ್ ೬೦೦, ಶರಧಿ ಬಿ ಎಸ್ ೬೦೦ ಅಂಕಗಳನ್ನು ಗಳಿಸಿದ ಸಾಧಕ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆದು ಅರ್ಹತೆ ಗಳಿಸಿದ್ದಾರೆ.

೧೭ ವಿದ್ಯಾರ್ಥಿಗಳು ೬೫೦ ಕ್ಕಿ೦ತ ಹೆಚ್ಚಿನ ಅ೦ಕ, ೫೦ ವಿದ್ಯಾರ್ಥಿಗಳು ೬೦೦ಕ್ಕಿ೦ತ ಹೆಚ್ಚಿನ ಅ೦ಕವನ್ನು ಗಳಿಸಿರುತ್ತಾರೆ. ೧೦೫ ವಿದ್ಯಾರ್ಥಿಗಳು ೫೫೦ ಕ್ಕಿ೦ತಲೂ ಹೆಚ್ಚಿನ ಅ೦ಕ, ೧೫೨ ವಿದ್ಯಾರ್ಥಿಗಳು ೫೦೦ ಕ್ಕಿ೦ತ ಹೆಚ್ಚಿನ ಅ೦ಕ, ೧೮೬ ವಿದ್ಯಾರ್ಥಿಗಳು ೪೫೦ ಕ್ಕಿ೦ತ ಹೆಚ್ಚಿನ ಅ೦ಕ, ೨೧೧ ವಿದ್ಯಾರ್ಥಿಗಳು ೪೦೦ ಕ್ಕಿ೦ತ ಹೆಚ್ಚಿನ ಅ೦ಕಗಳಿಸುವ ಮೂಲಕ ಎಕ್ಸಲೆ೦ಟ್ ಸಂಸ್ಥೆಯ ಸ್ಪರ್ಧಾತ್ಮಕ ಮತ್ತು ಗುಣಮಟ್ಟದ ತರಬೇತಿಗೆ ಸಾಕ್ಷಿಯಗಿದೆ.

ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ ಕುಮಾರ್ ಶೆಟ್ಟಿ, ನೀಟ್ ಸಂಯೋಜಕ ಡಾ. ಪ್ರಶಾಂತ್ ಹೆಗಡೆ ಮತ್ತು ಉಪನ್ಯಾಸಕ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.