ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜ್ಞಾನ, ಸಾಧನೆಯ ಹಸಿವು ತಣಿಸಲು ಅಧ್ಯಾಪನವನ್ನೇ ಮಾಧ್ಯಮವಾಗಿಸಿಕೊಂಡ ಯುವರಾಜ್ ಜೈನ್ - ರಶ್ಮಿತಾ ಜೈನ್ ದಂಪತಿ ಗುರುಕುಲ ಮಾದರಿಯ ಶಿಕ್ಷಣ ನೀಡುವುದಕ್ಕಾಗಿ 2012ರಲ್ಲಿ ಹುಟ್ಟು ಹಾಕಿದ ಸಂಸ್ಥೆಯೇ ಎಕ್ಸಲೆಂಟ್.ಮೂಡುಬಿದಿರೆಯಿಂದ ವೇಣೂರು ಮಾರ್ಗದಲ್ಲಿ ೪ ಕಿ.ಮೀ ದೂರದಲ್ಲಿ ೫೦ ಎಕರೆಯಲ್ಲಿ ಎಕ್ಸಲೆಂಟ್ ಪ್ರೌಢಶಾಲೆ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವಕಾಲೇಜು, ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಎಲ್ಲವೂ ಅರಳಿ ನಿಂತಿದೆ.
ಇಲ್ಲಿನ ಉಪನ್ಯಾಸಕ ವರ್ಗ, ಇವರೆಲ್ಲರ ಅವಿರತ ಪ್ರಯತ್ನಕ್ಕೆ ಗ್ರಾಮೀಣ ಪ್ರತಿಭೆಗಳೂ ಇಲ್ಲಿ ಸಾಧಕರಾಗಿ ಅರಳಿವೆ.೧೮೫ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಎಕ್ಸಲೆಂಟ್ ಇದೀಗ ೨೫೦೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಜ್ಞಾನ ತಾಣವಾಗಿದೆ.೬ರಿಂದ ೧೦ನೇ ತರಗತಿಯವರೆಗೆ ಆಂಗ್ಲಮಾಧ್ಯಮ ಪ್ರೌಢಶಾಲೆ/ಕೇಂದ್ರಿಯ(ಸಿಬಿಎಸ್ಸಿ) ಪ್ರೌಢಶಾಲೆಯನ್ನು ಐಐಟಿ/ನೀಟ್ ಫೌಂಡೇಶನ್‌ನೊಂದಿಗೆ ಕಳೆದ ವರುಷಗಳೊಂದಿಗೆ ನಡೆಸುತ್ತಾ ಬಂದಿದೆ.ದಾಖಲೆಯ ಸಾಧನೆ!: ಪಿಯುಸಿಯಲ್ಲಿ ಈ ಬಾರಿ 1೫ ವಿದ್ಯಾರ್ಥಿಗಳು ಮೊದಲ ೧೦ ರ‍್ಯಾಂಕ್ ಪಡೆದಿದ್ದು, ವಿಜ್ಞಾನ ವಿಭಾಗದ ಗುಣಸಾಗರ್ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾರೆ.
ರಾಷ್ಟ್ರೀಯ ಜೆಇಇ ಮೈನ್ಸ್ ಪರೀಕ್ಷೆ ಬರೆದ ೧೩೦ ವಿದ್ಯಾರ್ಥಿಗಳ ಪೈಕಿ ೭೮ ವಿದ್ಯಾರ್ಥಿಗಳು ಉತ್ತಮ ಪರ್ಸೆಂಟೈಲ್ ದಾಖಲಿಸಿದ್ದಾರೆ. ಜೆಇಇಅಡ್ವಾನ್ಸ್ ಪರೀಕ್ಷೆಯಲ್ಲಿ ನಿಶಾಂತ್ ಪಿ. ಹೆಗ್ಡೆ ಜನರಲ್ ಮೆರಿಟ್ ವಿಭಾಗದಲ್ಲಿ ೪೩೪೯ ರ‍್ಯಾಂಕ್ ಪಡೆದಿದ್ದಾರೆ. ಕೆಟಗರಿ ವಿಭಾಗದಲ್ಲಿ ೫ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ನೊಂದಿಗೆ ಅರ್ಹತೆ ಪಡೆದಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ನಿಖಿಲ್ ಗೌಡ ೮ನೇ ರ‍್ಯಾಂಕ್, ಶ್ರೀಶೈಲ ೨ನೇ ರ‍್ಯಾಂಕ್ ಹಾಗೂ ನೂರರ ಒಳಗೆ ೧೧ ರ‍್ಯಾಂಕ್, ಐದುನೂರರ ಒಳಗೆ ೪೪, ಸಾವಿರದ ಒಳಗೆ ೯೨ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಸಂಸ್ಥೆಯ ನಿಖಿಲ್ ಬಿ. ಗೌಡ (೭೧೦ ಅಂಕ) ೩೮೩ (ಕೆ) ನೇ ರ‍್ಯಾಂಕ್ ಗಳಿಸಿ ಅತ್ಯುನ್ನತ ಸಾಧನೆ ಮಾಡಿದ್ದಾರೆ. ೫೦ ವಿದ್ಯಾರ್ಥಿಗಳು ೬೦೦ಕ್ಕಿಂತಲೂ ಹೆಚ್ಚಿನ, ೧೦೫ ವಿದ್ಯಾರ್ಥಿಗಳು ೫೫೦ ಕ್ಕಿಂತಲೂ ಹೆಚ್ಚಿನ, ೧೫೨ ವಿದ್ಯಾರ್ಥಿಗಳು ೫೦೦ಕ್ಕಿಂತ ಹೆಚ್ಚಿನ ಅಂಕಗಳಿಸಿರುವುದು ಎಕ್ಸಲೆಂಟ್‌ನ ಗುಣಮಟ್ಟದ ತರಬೇತಿಗೆ ಸಾಕ್ಷಿಯಗಿದೆ.
ಲಾಂಗ್ ಟರ್ಮ್ ನೀಟ್ ವಿಭಾಗದಲ್ಲಿ ಗೌರವ್ ೬೭೫ ಅಂಕ, ೨೪ ವಿದ್ಯಾರ್ಥಿಗಳು ೬೦೦ ಕ್ಕಿಂತಲೂ ಹೆಚ್ಚು ಅಂಕ ಪಡೆದಿದ್ದು ಲಾಂಗ್‌ಟರ್ಮ್ ನೀಟ್ ಬ್ಯಾಚ್‌ಗಳ ದಾಖಲಾತಿ ಈಗಾಗಲೇ ಆರಂಭವಾಗಿದೆ.ಗುರುಕುಲ ಮಾದರಿ ಶಿಕ್ಷಣ: ಬರೇ ಕಲ್ಲುಗಳಿಂದ ಆವೃತವಾಗಿದ್ದ ಕಲ್ಲಬೆಟ್ಟು ಇಂದು ಕಲ್ಲರಳಿ ಹೂವಾಗಿದೆ. ಎಕ್ಸಲೆಂಟ್ ಗುರುಕುಲ ಮಾದರಿ ಶಿಕ್ಷಣ ಪದ್ಧತಿಯಲ್ಲಿ ವರ್ಷವೂ ಅತ್ಯುತ್ತಮ ಫಲಿತಾಂಶ, ಶೈಕ್ಷಣಿಕ ದಾಖಲೆಯೊಂದಿಗೆ ಸಮಾಜಕ್ಕೆ ಸುಸಂಸ್ಕೃತ ವಿದ್ಯಾರ್ಥಿಗಳನ್ನು ನೀಡುತ್ತಾ ಬಂದಿದೆ.ಎಕ್ಸಲೆಂಟ್ ಶಿಕ್ಷಣ...!
ಆಯ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಉಚಿತ ಶಿಕ್ಷಣ.ವೈಯಕ್ತಿಕ ಗಮನ , ಹೆತ್ತವರಿಗೆ ನಿರಂತರ ಪ್ರಗತಿ ವರದಿ.
ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತರಗತಿಗಳು.ಶಿಕ್ಷಣಕ್ಕೆ ಪೂರಕ ಕೈಗಾರಿಕೆ ಕೇಂದ್ರಗಳ ಭೇಟಿ, ವಸ್ತು ಪ್ರದರ್ಶನ, ರಸಪ್ರಶ್ನೆ, ಸಾಹಿತ್ಯ, ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳು.
ಕಲಿಕೆಗೆ ಪೂರಕ ಗಣಿತ ಪ್ರಯೋಗಾಲಯ,ವೈಜ್ಞಾನಿಕ ಸಂಶೋದನೆಗಾಗಿ ಅಟಲ್‌ಟಿಂಕರಿಂಗ್ ಲ್ಯಾಬ್ತಂತ್ರಜ್ಞಾನ ಆಧಾರಿತ ತರಗತಿ ವ್ಯವಸ್ಥೆ
ವಿಶಾಲ ಒಳ ಹಾಗೂ ಹೊರ ಕ್ರೀಡಾಂಗಣಗಳು, ವಿಸ್ತಾರಗ್ರಂಥಾಲಯತಜ್ಞ ಉಪನ್ಯಾಸಕರೊಂದಿಗೆ ಸಂವಾದ
ಎಲ್ಲ ಕೊಠಡಿಗಳಲ್ಲೂ ಸ್ನಾನಗೃಹ ಹಾಗೂ ಬಿಸಿ ನೀರಿನ ಸೌಲಭ್ಯದಿನದ 24 ಗಂಟೆಯೂ ವಿದ್ಯುತ್, ಶುದ್ಧಕುಡಿಯುವ ನೀರು ಹಾಗೂ ಹಾಗೂ ವೈದ್ಯಕೀಯ ಚಿಕಿತ್ಸಾ ಸೌಲಭ್ಯ, ಸಸ್ಯಹಾರಿ ಪೌಷ್ಟಿಕ ಆಹಾರ
ಕಡ್ಡಾಯ ಓದಿನ ವ್ಯವಸ್ಥೆಗೆ ಹಾಸ್ಟೆಲ್‌ನಲ್ಲೇ ಉಪನ್ಯಾಸಕರ ಲಭ್ಯತೆ. ಶೈಕ್ಷಣಿಕ , ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶೇ.೧೦೦ ಫಲಿತಾಂಶ. ಜೀರೋ ವೇಸ್ಟ್ ಕ್ಯಾಂಪಸ್.