ಕೃಷಿ ವಲಯದ ಶ್ರಮಜೀವಿ ರೈತರನ್ನು ಗುರುತಿಸಿ ಸಮಾಜದಲ್ಲಿ ಅವರಿಗೆ ಸೂಕ್ತ ಗೌರವ ಹಾಗೂ ಮನ್ನಣೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಎಸ್‌ಕೆಎಫ್ ಎಲಿಕ್ಸಿರ್ ಸಂಸ್ಥೆಯ ಮುಖ್ಯಸ್ಥ ಹಾಗೂ ಖ್ಯಾತ ಕೃಷಿ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಸ್ಥಾಪಿಸಿರುವ ರೈತಪೀಠ 2027 ಪ್ರಶಸ್ತಿಗೆ ಅರ್ಹ ಹಾಗೂ ಸಾಧಕ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮೂಡುಬಿದಿರೆ: ಕೃಷಿ ವಲಯದ ಶ್ರಮಜೀವಿ ರೈತರನ್ನು ಗುರುತಿಸಿ ಸಮಾಜದಲ್ಲಿ ಅವರಿಗೆ ಸೂಕ್ತ ಗೌರವ ಹಾಗೂ ಮನ್ನಣೆ ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಎಸ್‌ಕೆಎಫ್ ಎಲಿಕ್ಸಿರ್ ಸಂಸ್ಥೆಯ ಮುಖ್ಯಸ್ಥ ಹಾಗೂ ಖ್ಯಾತ ಕೃಷಿ ಉದ್ಯಮಿ ಡಾ. ಜಿ. ರಾಮಕೃಷ್ಣ ಆಚಾರ್ ಸ್ಥಾಪಿಸಿರುವ ರೈತಪೀಠ 2027 ಪ್ರಶಸ್ತಿಗೆ ಅರ್ಹ ಹಾಗೂ ಸಾಧಕ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಸಂದರ್ಭ ರೈತಪೀಠ ಪ್ರಶಸ್ತಿಯ ಅಧಿಕೃತ ಲೋಗೋ ಅನಾವರಣ ಮಾಡಲಾಯಿತು.

ಪ್ರಶಸ್ತಿಯ ಆಶಯದ ಕುರಿತು ಮಾತನಾಡಿದ ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್, ಕೃಷಿ ಕ್ಷೇತ್ರದಲ್ಲೂ ಕಾರ್ಪೊರೇಟ್ ಮಟ್ಟದ ಸಾಧನೆ ಸಾಧ್ಯವಿದೆ. ಸಣ್ಣ ಹಿಡುವಳಿಯಲ್ಲೂ ಮೀನುಗಾರಿಕೆ, ನಾಟಿ ಕೋಳಿ ಸಾಕಣೆ, ಜೇನು ಕೃಷಿ ಅಥವಾ ನೂತನ ಯಂತ್ರೋಪಕರಣ-ತಂತ್ರಜ್ಞಾನವನ್ನು ಬಳಸಿ ಲಕ್ಷಾಂತರ ರೂಪಾಯಿ ದುಡಿಯುವ ಮಾದರಿ ಕೃಷಿಕರಿದ್ದಾರೆ. ಅಂತಹ ರೈತರನ್ನು ಮುಂಚೂಣಿಗೆ ತಂದು ಗೌರವಿಸುವುದು ನಮ್ಮ ಉದ್ದೇಶ ಎಂದರು.

ವಿವಿಧ ರಾಜ್ಯದ ರೈತರು: ಒಟ್ಟು ₹ 3 ಲಕ್ಷ ಮೊತ್ತದ ಈ ಪ್ರಶಸ್ತಿಗೆ ದಕ್ಷಿಣ ಭಾರತದ ಆರು ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಮೂವರು ಪ್ರಗತಿಪರ ಕೃಷಿಕರನ್ನು ಆಯ್ಕೆ ಮಾಡಿ, ತಲಾ ಒಂದು ಲಕ್ಷ ರು. ನಗದು ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಣ್ಣ ಮತ್ತು ಮಧ್ಯಮ ಜಮೀನಿನಲ್ಲಿ ಸುಸ್ಥಿರ, ಸಾವಯವ, ಗೋ-ಆಧಾರಿತ ಹಾಗೂ ತಂತ್ರಜ್ಞಾನಾಧಾರಿತ ಮಾದರಿ ಕೃಷಿ ಮಾಡುವ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 15 ಡಿಸೆಂಬರ್ 2026.

https://gaudhama.comನಲ್ಲಿ ಅರ್ಜಿ ನಮೂನೆ ಲಭ್ಯವಿದ್ದು, ಅರ್ಹ ರೈತರು ತಾವೇ ಆ ಅರ್ಜಿ ತುಂಬಿಸಿ ಕಳುಹಿಸಬಹುದು. ಅಥವಾ ಇತರರು ಅರ್ಹ ರೈತರನ್ನು ಗುರುತಿಸಿ ನಾಮ ನಿರ್ದೇಶನ ಮಾಡಬಹುದು. ಹೆಚ್ಚಿನ ಮಾಹಿತಿ 9164561789 ಅಥವಾ 9606429200 ಸಂಖ್ಯೆಯನ್ನು ಸಂಪರ್ಕಿಸಬಹುದು.

ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಕೃಷಿ ತಜ್ಞ, ಸಾಹಿತಿ ಡಾ. ನರೇಂದ್ರ ರೈ ದೇರ್ಲ, ಶಿಕ್ಷಣ ತಜ್ಞ ಮತ್ತು ಉದ್ಯಮಿ ದೇವಿಪ್ರಸಾದ್ ಶೆಟ್ಟಿ, ಎಸ್‌ಕೆಎಫ್ ಎಲಿಕ್ಸಿರ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಜ್ವಲ್ ಆಚಾರ್, ಸಂಸ್ಥೆಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಹಿರಿಯ ನಿರ್ದೇಶಕ ದೇವ್‌ರಾಜ್ ಎಸ್. ಉಪಸ್ಥಿತರಿದ್ದರು.