ಬೆಳೆಯುತ್ತಿರುವ ಮೂಡುಬಿದಿರೆ ಪೇಟೆಯಲ್ಲಿ ಅಪಾಯಕಾರಿಯಾಗಿದ ಬೆಳೆದಿರುವ ವಾಹನಗಳ ಪಾರ್ಕಿಂಗ್, ನಿಯಮೋಲ್ಲಂಘನೆಯ ಅಬ್ಬರ ಸೇರಿದಂತೆ 32ಕ್ಕೂ ಅಧಿಕ ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಅಗತ್ಯ ಪರಿಹಾರ ಕಂಡುಕೊಳ್ಳಲು ತಹಶೀಲ್ದಾರ್ ಶ್ರೀಧ‌ರ್ ಮುಂದಲಮನಿ ಆ. 27 ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜೊತೆ ಜಂಟಿ ಸಭೆ ಕರೆದಿರುವುದಾಗಿ ತಿಳಿದು ಬಂದಿದೆ.

ಮೂಡುಬಿದಿರೆ: ಬೆಳೆಯುತ್ತಿರುವ ಮೂಡುಬಿದಿರೆ ಪೇಟೆಯಲ್ಲಿ ಅಪಾಯಕಾರಿಯಾಗಿದ ಬೆಳೆದಿರುವ ವಾಹನಗಳ ಪಾರ್ಕಿಂಗ್, ನಿಯಮೋಲ್ಲಂಘನೆಯ ಅಬ್ಬರ ಸೇರಿದಂತೆ 32ಕ್ಕೂ ಅಧಿಕ ಸಾರ್ವಜನಿಕ ಸಮಸ್ಯೆಗಳಿಗೆ ತುರ್ತು ಅಗತ್ಯ ಪರಿಹಾರ ಕಂಡುಕೊಳ್ಳಲು ತಹಶೀಲ್ದಾರ್ ಶ್ರೀಧ‌ರ್ ಮುಂದಲಮನಿ ಆ. 27 ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜೊತೆ ಜಂಟಿ ಸಭೆ ಕರೆದಿರುವುದಾಗಿ ತಿಳಿದು ಬಂದಿದೆ. ವರ್ಷಗಳಿಂದ ಪರಿಹಾರ ಕಾಣದ ಸಂಚಾರ ಹಾಗೂ ಇತರ ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ''''''''ನಮ್ಮ ಮೂಡುಬಿದಿರೆ ಫೋರಂ'''''''' ಬುಧವಾರ ತಹಶೀಲ್ದಾರ್ ಅವರನ್ನು ಭೇಟಿಯಾಗಿ 31 ರಂದು ಪ್ರತಿಭಟನೆ ನಡೆಸುವ ಬಗ್ಗೆ ಮನವಿ ಸಲ್ಲಿಸಿದ ವೇಳೆ ಈ ಮಾಹಿತಿ ಲಭಿಸಿದೆ. ''''''''ನಮ್ಮ ಮೂಡುಬಿದಿರೆ ಫೋರಂ'''''''' ಕಳೆದ ಹಲವು ವರ್ಷಗಳಿಂದ ಫೋರಂ ವತಿಯಿಂದ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯುತ್ತಲೇ ಇದೆ. ಮನವಿಗಳು, ಸಭೆಗಳು, ದೂರವಾಣಿ ಸಂಪರ್ಕ ಹಾಗೂ ಫೋಟೋ ಮತ್ತು ವೀಡಿಯೋ ಸಾಕ್ಷ್ಯಗಳ ಮೂಲಕ ಸಮಸ್ಯೆಗಳನ್ನು ತಿಳಿಸಲಾಗಿದ್ದು, ಒಟ್ಟು 32 ಪ್ರಮುಖ ಸಾರ್ವಜನಿಕ ಸಮಸ್ಯೆಗಳನ್ನು ಗುರುತಿಸಿ, ಅಗತ್ಯವಿರುವ ಪರಿಹಾರಗಳೊಂದಿಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯ ಬಳಿಕ 6 ಪ್ರಮುಖ ಸಮಸ್ಯೆಗಳಿಗೆ 10 ದಿನಗಳೊಳಗೆ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳು, ತಹಸೀಲ್ದಾ‌ರ್ ಹಾಗೂ ಮೂಡುಬಿದಿರೆ. ಸಮಿತಿಯನ್ನು ಒಳಗೊಂಡ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಹಲವು ಸಮಸ್ಯೆಗಳು ಇನ್ನೂ ಬಗೆಹರಿ ಉಳಿದಿವೆ ಎಂದು ಫೋರಂ ಅಸಮಾಧಾನ ವ್ಯಕ್ತಪಡಿಸಿದೆ.

ನಮ್ಮದು ಯಾವುದೇ ಇಲಾಖೆ ಅಥವಾ ವ್ಯಕ್ತಿಯ ವಿರುದ್ಧ ಹೋರಾಟವಲ್ಲ. ಜವಾಬ್ದಾರಿ, ಸಮನ್ವಯ ಮತ್ತು ಕಾರ್ಯರೂಪದ ಪರಿಹಾರ ಬೇಕಾಗಿದೆ. ಎಲ್ಲ ಇಲಾಖೆಗಳು ಒಟ್ಟಾಗಿ ಕುಳಿತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು'' ಎಂದು ಅಕ್ಷಯ್ ಕೆ. ಜೈನ್ ಕನ್ನಡ ಪ್ರಭಕ್ಕೆ ತಿಳಿಸಿದ್ದಾರೆ. ಇದು ರಾಜಕೀಯೇತರ ಹೋರಾಟವಾಗಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗುವುದೇ ಮುಖ್ಯ ಎಂದವರು ಹೇಳಿದ್ದಾರೆ.

ನಮ್ಮ ಮೂಡುಬಿದಿರೆ ಫೋರಂನ ಯಾಸೀರ್, ದಿನೇಶ್ ಶೆಣೈ , ಕೌಸ್ತುಬ್ ಜೈನ್, ಅಡ್ವಕೇಟ್ ಇರ್ಷಾ ಪ್ರಕಾಶ್ ಸಪಲಿಗ ಹಾಗೂ ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.

ಸಮಸ್ಯೆ ಪರಿಹಾರ ಕಾಣದಿದ್ದರೆ ಆ31 ಮೂಡುಬಿದಿರೆ ಬಂದ್? ಮೂಡುಬಿದಿರೆಯನ್ನು ಕಾಡುತ್ತಿರುವ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಹಾಗೂ ಸ್ಪಷ್ಟ ಕಾರ್ಯಯೋಜನೆ ನೀಡಿದರೆ ಫೋರಂ ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಲು ಸಿದ್ಧರಾಗಿದ್ದಾರೆ . ಆದರೆ ಮತ್ತೆ ವಿಳಂಬ ಧೋರಣೆ ವ್ಯಕ್ತವಾದರೆ ಆಗಸ್ಟ್ 31ರಂದು ಬೆಳಿಗ್ಗೆ 10.30ರಿಂದ 11.30ರವರೆಗೆ ಪಟ್ಟಣ ಬಂದ್‌ ನಡೆಸಿ, ನಿಶ್ಚಿತಾ ಸರ್ಕಲ್ ಬಳಿ ಶಾಂತಿಯುತ ಮೌನ ಪ್ರತಿಭಟನೆ ನಡೆಸಲು ಫೋರಂ ನಿರ್ಧರಿಸಿದೆ.