ಸಾರಾಂಶ
ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ನೇತೃತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ವಿಶ್ವನಾಥ್ ಅವರನ್ನು ಅಭಿನಂದಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ತೋಡಾರುವಿನಲ್ಲಿ ಖಾಸಗಿ ಬಸ್ ಸ್ಕೂಟರ್‌ಗೆ ಡಿಕ್ಕಿಯಾಗಿ ನೆಲಕ್ಕೆ ಬಿದ್ದ ಸವಾರ ಗಾಯಾಳುವನ್ನು ರಕ್ಷಿಸಲು ಬಸ್ ಮುಂಭಾಗಕ್ಕೆ ತನ್ನ ರಿಕ್ಷಾ ಅಡ್ಡ ಇಟ್ಟು ಸಾಹಸ ಮೆರೆದ ಮತ್ತು ಗಾಯಳುವನ್ನು ಆಸ್ಪತ್ರೆಗೆ ಸಾಗಿಸಿದ ರಿಕ್ಷಾ ಚಾಲಕ ವಿಶ್ವನಾಥ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ನೇತೃತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ವಿಶ್ವನಾಥ್ ಅವರನ್ನು ಅಭಿನಂದಿಸಲಾಯಿತು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ಮಾತನಾಡಿ ರಾತ್ರಿ ಹಗಲೆನ್ನದೆ ವೃತ್ತಿ ನಿರ್ವಹಿಸುವ ರಿಕ್ಷಾ ಚಾಲಕರು ತೋರುವ ಸೇವೆ, ಮಾನವೀಯ ಮೌಲ್ಯ ಶ್ರೇಷ್ಠವಾದುದು. ವಿಶ್ವನಾಥ್ ಪೂಜಾರಿಯವರ ಹೃದಯವಂತಿಕೆ ಬೆಳಕಿಗೆ ಬಂದಂತಾಗಿದೆ ಎಂದರು.
ಹಿಂಜಾವೇ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಮಾತನಾಡಿ, ತನ್ನ ಪ್ರಾಣ ಲೆಕ್ಕಿಸದೆ ವಿಶ್ವನಾಥ್ ಅವರು ತೋರಿದ ಕಾಳಜಿ ಮಾದರಿ ಎಂದರು. ಖಾಸಗಿ ಬಸ್ಸುಗಳ ಚಾಲಕರ ಅಜಾಗರುಕತೆಯ ಚಾಲನೆಯಿಂದ ಪ್ರಾಣಕ್ಕೆ ಕಂಟಕವಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೋಡಂಗಲ್ಲು, ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ.ಸಿ., ಮಾಜಿ ಅಧ್ಯಕ್ಷ ಸಂದೀಪ್ ಹೆಗ್ಡೆ, ಸಹ ಸಂಯೋಜಕರಾದ ಶರತ್ ಮಿಜಾರು, ಸಂತೋಷ್ ಜೈನ್, ದರೆಗುಡ್ಡೆ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಭಾರತೀಯ ಮಜದೂರು ಸಂಘದ ಅಧ್ಯಕ್ಷ ರಾಜೇಶ್ ಸುವರ್ಣ ಉಪಸ್ಥಿತರಿದ್ದರು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ್ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ನಿರೂಪಿಸಿದರು.