ಮೂಡುಮಾರ್ನಾಡು ಗಣೇಶೋತ್ಸವ: ಧಾರ್ಮಿಕ ಸಭೆ

| Published : Sep 09 2024, 01:32 AM IST

ಮೂಡುಮಾರ್ನಾಡು ಗಣೇಶೋತ್ಸವ: ಧಾರ್ಮಿಕ ಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡು ಮಾರ್ನಾಡು ಗಣೇಶ್ ಪ್ರಸಾದ್ ವಿಘ್ನೇಶ್ವರ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಅಂಗೇರಿ ಲಕ್ಷ್ಮೀ ನಾರಾಯಣ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡುಮಾರ್ನಾಡು ನೇತೃತ್ವದಲ್ಲಿ ಮೂಡು ಮಾರ್ನಾಡು ಗಣೇಶ್ ಪ್ರಸಾದ್ ವಿಘ್ನೇಶ್ವರ ಭಜನಾ ಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಅಂಗೇರಿ ಲಕ್ಷ್ಮೀ ನಾರಾಯಣ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ನಡೆಯಿತು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ್ ರಾವ್ ಪಾಡಿಮನೆ ವಹಿಸಿದ್ದರು. ಉದ್ಯಮಿ ಭಾಸ್ಕರ್ ಎಸ್. ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಹೊಯ್ಪಾಲ ಬೆಟ್ಟ ಅನುವಂಶೀಯ ಮೊಕ್ತೇಸರ ರಾಜೇಶ್ ಬಲ್ಲಾಳ್, ವಿಶ್ರಾಂತ ಮುಖ್ಯ ಅಧ್ಯಾಪಕ ನೋರ್ಬಟ್ ಪಿರೇರಾ, ಎಸ್.ಕೆ.ಎಫ್. ನಿರ್ದೇಶಕರಾದ ಪ್ರಜ್ವಲ್ ಆಚಾರ್, ಜ್ಞಾನವಿಕಾಸ ಸಂಯೋಜಕಿ ವಿದ್ಯಾ, ಮೂಡ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಚಂದ್ರಹಾಸ್ ಸನಿಲ್, ರಾಯರ ಮನೆ ಹೇಮರಾಜ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.

ಶನೀಶ್ವರ ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಪಣರೊಟ್ಟು, ವಿಘ್ನೇಶ್ವರ ಫ್ರೆಂಡ್ಸ್ ಅಧ್ಯಕ್ಷ ಆಶಿಸ್ ಕುಮಾರ್, ಭಜನಾ ಮಂಡಳಿ ಅಧ್ಯಕ್ಷ ರಾಘು ಜಾರಿಗೆದಡಿ, ಮಹಿಳಾ ಮಂಡಳಿ ಅಧ್ಯಕ್ಷ ಸುರೇಖಾ, ಫ್ರೆಂಡ್ಸ್ ಅಧ್ಯಕ್ಷ ಸುಧಾಕರ್, ಚೇತನ ಯುವಕ ಮಂಡಲ ಅಧ್ಯಕ್ಷ ನಾಗೇಶ್ ಆಚಾರ್ಯ, ಭಜನಾ ಮಂಡಳಿ ಪ್ರಧಾನ ಅರ್ಚಕ ಓಬಯ ಸುವರ್ಣ ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಊರಿನ ಬಾಲ ಕಲಾವಿದ ಅಭೀಷ್ ಪೂಜಾರಿ, ನಾಟಿ ವೈದ್ಯೆ ಗುಲಾಬಿ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ಪೃಥ್ವಿ ಆರ್. ಶೆಟ್ಟಿ, ಸುನೀಕ್ಷ ಪೂಜಾರಿ, ಗಾನವಿ ಪೂಜಾರಿ, ಅನ್ವಿತಾ ಪೂಜಾರಿ, ತನಿಷಾರನ್ನು ಗೌರವಿಸಲಾಯಿತು. ಗಣೇಶೋತ್ಸವ ಕಾರ್ಯಕ್ರಮಗಳಿಗೆ ಸಹಕರಿಸಿದ ದಾನಿಗಳನ್ನು ಅಭಿನಂದಿಸಲಾಯಿತು.

ಗೌರವಾಧ್ಯಕ್ಷ ದೇವರಾಜ್ ಸುವರ್ಣ ಪೊಸಲಾಯಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಮೋದ್ ಕರ್ಕೇರ ವರದಿ ಮಂಡಿಸಿದರು. ಸಂಚಾಲಕ ನವೀನ್ ಬಂಗೇರ ನಿರೂಪಿಸಿದರು. ಹರಿದೀಪ್ ಬಿಲ್ಲುಗುಡ್ಡೆ ದಾನಿಗಳ ಪಟ್ಟಿ ವಾಚಿಸಿದರು. ಸಂತೋಷ, ಅನಿಲ್ ಅಂಚನ್ ಸನ್ಮಾನ ಪತ್ರ ಓದಿದರು. ಕೋಶಾಧಿಕಾರಿ ಸುಜಿತ್ ವಂದಿಸಿದರು.