ಸಾರಾಂಶ
ಚಿಕ್ಕೋಡಿ : ಗಡಿಯಲ್ಲಿ ಕನ್ನಡದ ಹಣತೆ ಹಚ್ಚಿ ಜ್ಞಾನದ ಜ್ಯೋತಿ ಬೆಳಗಿ ಸಂಸ್ಕಾರವಂತ ಮಕ್ಕಳನ್ನು ನಿರ್ಮಿಸುತ್ತಿರುವ ನಿಸರ್ಗ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಮಿಥುನ ಅಂಕಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಗಡಿಯಲ್ಲಿ ಕನ್ನಡದ ಹಣತೆ ಹಚ್ಚಿ ಜ್ಞಾನದ ಜ್ಯೋತಿ ಬೆಳಗಿ ಸಂಸ್ಕಾರವಂತ ಮಕ್ಕಳನ್ನು ನಿರ್ಮಿಸುತ್ತಿರುವ ನಿಸರ್ಗ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ.ಮಿಥುನ ಅಂಕಲಿ ಹೇಳಿದರು.ಅವರು ಸಮೀಪದ ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದ ನಿಸರ್ಗ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪಾಲಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ, ಗಡಿಯಲ್ಲಿ 30 ವರ್ಷಗಳ ಹಿಂದೆ ಕನ್ನಡದ ಹಣತೆ ಹಚ್ಚಿ ಕನ್ನಡ ಮಕ್ಕಳಿಗಾಗಿ ಹಗಲಿರುಳು ಶ್ರಮಿಸುತ್ತಿರುವ ನಿಸರ್ಗ ಶಾಲೆಯ ಕಾಯಕ ಶ್ಲಾಘನೀಯ. ಇಂದು ಆಚಾರವಂತ, ಸುಸಂಸ್ಕೃತ, ಆದರ್ಶ ಮಕ್ಕಳ ನಿರ್ಮಾಣವಾಗಬೇಕಾಗಿದೆ. ಪಾಲಕರು ಮಕ್ಕಳ ಕಡೆಗೆ ಗಮನ ಹರಿಸಿ ಆದರ್ಶ ಸಮಾಜ ಕಟ್ಟುವ ಪಣ ತೊಡಬೇಕು ಎಂದರು.
ಲೌಕಿಕ ಶಿಕ್ಷಣಕ್ಕಿಂತ ನೈತಿಕ ಶಿಕ್ಷಣ ನೀಡಿ ಉನ್ನತ ವಿಚಾರಧಾರೆಗಳನ್ನು ಧಾರೆ ಎರೆಯಬೇಕು. ಶಾಲೆಗಳು ಸಂಸ್ಕಾರದ ಕೇಂದ್ರಗಳಾದಾಗ ಮಾತ್ರ ಸುಭದ್ರ ಸಮಾಜ ನಿರ್ಮಾಣ ಸಾಧ್ಯ. ಹಲವು ಸವಾಲುಗಳ ಮಧ್ಯೆ ಜ್ಞಾನದಾಸೋಹಗೈಯುತ್ತಿರುವ ಈ ಶಾಲೆ ಹೆಮ್ಮರವಾಗಿ ಬೆಳೆಯಲಿ. ಕನ್ನಡಪರ ಸಂಘಟನೆಗಳ ಸಹಕಾರ ಸದಾ ಇರಲಿದೆ ಎಂದು ಹಾರೈಸಿದರು.ಸಂಸ್ಥೆಯ ಅಧ್ಯಕ್ಷ ರಾಜು ಪಾಟೀಲ ಅತ್ಯಂತ ಸಂಕಟದ ಸಮಯದಲ್ಲಿ 30 ವರ್ಷಗಳಿಂದ ಈ ಸಂಸ್ಥೆ ಮುನ್ನಡೆಸುತ್ತ ಮುನ್ನಡೆಸುತ್ತ ಹೊರಟಿದ್ದೇವೆ. ಸಂಸ್ಥೆಯ ಮೂಲಕ ಉನ್ನತ ಶಿಕ್ಷಣ ಕೇಂದ್ರಗಳನ್ನು ತೆರೆಯುವ ವಿಚಾರ ಮಾಡಲಾಗಿದೆ ಎಂದರು.
ಸಮಾರಂಭದಲ್ಲಿ ಕನ್ನಡದ ದೀಪ ಹಚ್ಚಿ ಕನ್ನಡ ತಾಯಿಗೆ ವಂದನೆ ಸಲ್ಲಿಸಲಾಯಿತು. ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉದ್ಯಮಿ ರಾಜು ಪವಾರ ಉಪಾಧ್ಯಕ್ಷ ಜಿ.ಎಲ್.ಹತ್ರೋಟೆ, ಬಾಳು ಪಿಸೂತ್ರೆ, ಆರ್.ಡಿ.ಚೌಗಲೆ ಇದ್ದರು.