ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಶ್ರದ್ಧೆ, ನಂಬಿಕೆ ನಮಗೆ ನೈತಿಕ ಬಲವನ್ನು ತುಂಬುತ್ತದೆ, ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದನ್ನು ಮೈಗೂಡಿಕೊಂಡರೆ ಆ ಮೂಲಕ ಫಲ ದೊರಕಲಿದೆ ಎಂದು ಹಿರಿಯ ಸಾಹಿತಿ, ವಸುಧಾ ಪ್ರತಿಷ್ಠಾನದ ಮುಖ್ಯಸ್ಥ ತಾಳ್ತಜೆ ವಸಂತಕುಮಾರ್ ಹೇಳಿದರು.ಅವರು ಆ. 9ರಂದು ಉಪ್ಪಿನಂಗಡಿಯ ಇಂದ್ರಪ್ರಭ ಆಡಿಟೋರಿಯಂ ನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕ ಮತ್ತು ವಸುಧಾ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಳ್ಳಲಾದ ಕನ್ನಡ ಕಲರವ-2 ಕಾರ‍್ಯಕ್ರಮದಲ್ಲಿ ಮಾತನಾಡಿ ಸಾಹಿತ್ಯದಲ್ಲಿ, ಕಾವ್ಯ ರಾಶಿಯಲ್ಲಿ ಜೀವನ ಉತ್ತೇಜಕವಾದ ಅಂಶ ಇದೆ, ವಿದ್ಯಾರ್ಥಿಗಳು ಸಾಹಿತ್ಯದ ಭಾಗವನ್ನು ಮತ್ತು ಅದರಲ್ಲಿರುವ ಸಂಪತ್ತನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ ಚೇತನಗಳಾದ ಯಕ್ಷಕನ್ಯೆ ಪಾತಾಳ ವೆಂಕಟರಮಣ ಭಟ್, ವೈದ್ಯ ಕೆ. ಶೀನಪ್ಪ ಶೆಟ್ಟಿ, ಡಾ. ಮುದ್ರಜೆ ರಾಮಚಂದ್ರ ಭಟ್ ಇವರುಗಳ ಒಬ್ಬೊಬ್ಬರ ಸಾಧನೆ ಅತ್ಯಮೂಲ್ಯವಾಗಿತ್ತು ಮತ್ತು ಅವರು ಹೃದಯ ಸಂವಾದಕ್ಕೆ ಕಾರಣರಾಗಿದ್ದರು. ಇವರುಗಳ ಸ್ಥಾನವನ್ನು ತುಂಬಿಸಲು ಪರ‍್ಯಾಯ ವ್ಯಕ್ತಿ ಕಾಣುವುದಿಲ್ಲ ಎಂದರು. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಸಾಹಿತ್ಯದೊಂದಿಗೆ ಇದ್ದ 3 ಮಂದಿ ದಿಗ್ಗಜರು ಪ್ರೀತಿ, ಬದ್ಧತೆಯನ್ನು ತೋರುತ್ತಿದ್ದರು. ಇಂತಹ ಕಾರ‍್ಯಕ್ರಮಗಳ ಮೂಲಕ ಸಾಹಿತ್ಯ ಸಂಘಟನೆಗೂ ಇದು ಸಹಕಾರಿ ಆಗಿದೆ ಎಂದರು. ಉಪ್ಪಿನಂಗಡಿಯ ಡಾ. ಗೋವಿಂದಪ್ರಸಾದ್ ಕಜೆ ಅಗಲಿದ ಚೇತನಗಳಾದ ಯಕ್ಷಕನ್ಯೆ ಪಾತಾಳ ವೆಂಕಟರಮಣ ಭಟ್, ವೈದ್ಯ ಕೆ. ಶೀನಪ್ಪ ಶೆಟ್ಟಿ, ಡಾ. ಮುದ್ರಜೆ ರಾಮಚಂದ್ರ ಭಟ್ ಇವರುಗಳೆ ನುಡಿ ನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ ಘಟಕದ ವತಿಯಿಂದ ಸರಣಿ ಸಾಹಿತ್ಯ ಕಾರ‍್ಯಕ್ರಮ ನಡೆಸುತ್ತಿದ್ದು, ಅದರಲ್ಲೂ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ಹೆಚ್ಚು ಒತ್ತು ಕೊಡುತ್ತಿದ್ದೇವೆ ಎಂದರು. ಕಾರ‍್ಯಕ್ರಮದಲ್ಲಿ ಭಾಷಣ , ಸ್ವರಚಿತ ಕವನ ವಾಚನ, ಪ್ರಬಂಧ ಸ್ಪರ್ಧಾ ವಿಜೇತರಿಗೆ, ಬಹುಮಾನ ವಿತರಿಸಲಾಯಿತು. ಸಭಾ ಕಾರ‍್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು. ಸಮಾರಂಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ಎ. ಕೃಷ್ಣ ರಾವ್ ಅರ್ತಿಲ, ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪ್ರಮುಖರಾದ ಡಾ. ರಾಜಾರಾಮ್, ಡಾ. ಕೆ.ಜಿ. ಭಟ್, ಡಾ. ಸುಪ್ರೀತ್ ಲೋಬೋ, ಗೋಪಾಲ ಹೆಗ್ಡೆ, ಯು.ಜಿ. ರಾಧಾ, ಡಾ. ನಂದೀಶ್, ಡಾ. ಸಂತೋಷ್, ಪ್ರೋ ತೇಜಸ್ವಿ, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಿದ್ಯಾಧರ ಜೈನ್, ಲೋಕೇಶ್ ಬೆತ್ತೋಡಿ, ಜಯಪ್ರಕಾಶ್ ಕಡಮಾಜೆ, ವಂದನಾ ಶರತ್, ಸುಧಾಕರ ಶೆಟ್ಟಿ, ಸುಂದರ ಗೌಡ, ಸುನಿಲ್ ನಾಯಕ್ , ಹರಿರಾಮಚಂದ್ರ, ಕಂಘ್ವೆ ವಿಶ್ವನಾಥ ಶೆಟ್ಟಿ, ಸುಬ್ರಹ್ಮಣ್ಯ ಭಟ್ , ಅಂಬಪ್ರಸಾದ್ ಪಾತಾಳ, ಸುರೇಶ್ ಜಿ, ರಾಜಗೋಪಾಲ ಭಟ್, ನವೀನ್ ಬ್ರಾಗ್ಸ್, ಯು ರಾಜೇಶ್ ಪೈ, ಹರಿಣಾಕ್ಷಿ ಉಪಸ್ಥಿತರಿದ್ದರು. ಘಟಕದ ಕಾರ‍್ಯದರ್ಶಿ ಯು.ಎಲ್. ಉದಯಕುಮಾರ್ ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ಯುನಿಕ್ ವಂದಿಸಿದರು. ಶೀಲಾ ಹರೀಶ್, ಸುಂದರಿ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))