ಪ್ರಸ್ತುತ ಶಿಕ್ಷಣದಲ್ಲಿ ನೈತಿಕತೆಗೆ ಮಹತ್ವ ಕಡಿಮೆಯಾಗುತ್ತಿದೆ: ಷಡಾಕ್ಷರಿ

| Published : Jul 12 2024, 01:30 AM IST

ಪ್ರಸ್ತುತ ಶಿಕ್ಷಣದಲ್ಲಿ ನೈತಿಕತೆಗೆ ಮಹತ್ವ ಕಡಿಮೆಯಾಗುತ್ತಿದೆ: ಷಡಾಕ್ಷರಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪ್ರಸ್ತುತ ನೀಡಲಾಗುತ್ತಿರುವ ಶಿಕ್ಷಣದಲ್ಲಿ ನೈತಿಕತೆಗೆ ಮಹತ್ವ ಕಡಿಮೆಯಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್. ಷಡಾಕ್ಷರಿ ಹೇಳಿದ್ದಾರೆ.

ನಗರದ ಜೆವಿಎಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಭಾರತ್ ಸ್ಕೌಟ್‌ ಆ್ಯಂಡ್‌ ಗೈಡ್ಸ್‌ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಸ್ತುತ ನೀಡಲಾಗುತ್ತಿರುವ ಶಿಕ್ಷಣದಲ್ಲಿ ನೈತಿಕತೆಗೆ ಮಹತ್ವ ಕಡಿಮೆಯಾಗುತ್ತಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್. ಷಡಾಕ್ಷರಿ ಹೇಳಿದ್ದಾರೆ.ನಗರದ ಜೆವಿಎಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಬುಧವಾರ ನಡೆದ ಭಾರತ್ ಸ್ಕೌಟ್‌ ಆ್ಯಂಡ್‌ ಗೈಡ್ಸ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಕೌಟ್‌ ಒಂದು ಚಿಕ್ಕ ಸಂಸ್ಥೆಯಾಗಿ ಪ್ರಾರಂಭವಾಯಿತು, ಓರ್ವ ಮಾಜಿ ಸೈನಿಕ ಇದನ್ನು ಸ್ಥಾಪಿಸಿದರು. ಇದರ ಉದ್ದೇಶ ಸಾಮಾಜಿಕ ಜೀವನದಲ್ಲಿ ಎಲ್ಲರೂ ಸಹ ಬಾಳ್ವೆಯಿಂದ ಬದುಕಬೇಕೆಂಬುದು ಆಗಿದೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಎಲ್ಲಾ ಸ್ಥರದ ಜನ ಜೀವನ ಅಸ್ತವ್ಯಸ್ಥವಾಗಿತ್ತು, ಮಕ್ಕಳು ಮನೆಯಲ್ಲಿ ಮಾತು ಕೇಳುತ್ತಿಲ್ಲ ಎಂದು ಕೆಲವು ಪೋಷಕರು ಹೇಳುತ್ತಿದ್ದರು, ಮಕ್ಕಳನ್ನು ಶಾಲೆಗೆ ಕಳುಹಿಸಿ ಶಾಂತಿಯಿಂದ ಸಮಯ ಕಳೆಯಲು ಆಗುತ್ತಿಲ್ಲ ಎಂದು ಹೇಳುತ್ತಿದ್ದರು ಎಂದರು. ಪ್ರಸ್ತುತ ಪದವಿ ಪಡೆದ ಶಿಕ್ಷಣವಂತ ನಿರುದ್ಯೋಗಿ ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳುತ್ತಾರೆ. ಬರೀ ಪರೀಕ್ಷೆಗೋಸ್ಕರ ಪುಸ್ತಕದಲ್ಲಿ ಇರುವುದನ್ನು ಅಧ್ಯಯನ ಮಾಡಿರುತ್ತಾರೆ ಎಂದು ವಿಶ್ಲೇಷಿಸಿದ್ದಾರೆ. ಸಮಾಜದಲ್ಲಿ ಹೇಗೆ ಬದುಕ ಬೇಕು ಎಂಬ ಬಗ್ಗೆ ತಿಳಿದುಕೊಂಡಿರುವುದಿಲ್ಲ ಎಂದು ವಿಷಾಧಿಸಿದರು.ದಿನನಿತ್ಯದ ಜೀವನದಲ್ಲಿ ಇವುಗಳನ್ನು ಕಲಿಸಿರುವುದಿಲ್ಲ. ಹಿರಿಯರ ಜೊತೆ ಹೇಗೆ ನಡೆದುಕೊಳ್ಳಬೇಕು, ಸಮಾಜದಲ್ಲಿ ನಿನ್ನ ಕರ್ತವ್ಯ ಏನು, ಇಡೀ ಪ್ರಪಂಚದಲ್ಲಿ ನೀನು ಒಬ್ಬ ವಿಶ್ವಮಾನವನಾಗಿ ಹೇಗೆ ಬದುಕುವುದು ಎಂಬ ಈ ಉದಾತ್ತ ವಿಷಯಗಳನ್ನು ಶಿಕ್ಷಣ ಕಲಿಸುತ್ತಿಲ್ಲ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ದೇಶದ ಇತಿಹಾಸ, ಮಣ್ಣಿನ ಮಹತ್ವ ತಿಳಿಸುತ್ತಿಲ್ಲ, ಸಣ್ಣ ಸಣ್ಣ ವಿಷಯಗಳು ಸಂಕುಚಿತದಿಂದಾಗಿ ಸ್ವಾರ್ಥ ಹೆಚ್ಚಾಗಿ ಜಗತ್ತಿನಲ್ಲಿ ಒಬ್ಬರಿಗೊಬ್ಬರಿಗೆ ದ್ವೇಷ, ಅಸೂಯೆಯಿಂದ ಬದುಕುತ್ತಿದ್ದಾರೆಂದು ಹೇಳಿದರು.ಇವುಗಳನ್ನು ತೊಡೆದು ಹಾಕಬೇಕಾದರೆ ಚಿಕ್ಕಂದಿನಿಂದಲೇ ಒಳ್ಳೆಯ ಹವ್ಯಾಸಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿ ಕೊಳ್ಳಬೇಕು, ಸ್ಕೌಟ್‌ನಲ್ಲಿ ಒಂದು ನಿಯಮವಿದೆ. ದಿನಕ್ಕೊಂದು ಒಳ್ಳೆಯ ಕೆಲಸ ಮಾಡು ಎಂಬುದೇ ಅದು ಎಂದು ತಿಳಿಸಿದರು.ದಾರಿಯಲ್ಲಿ ಯಾವುದೋ ಒಂದು ವಸ್ತು ಬಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ ಅದನ್ನು ಎತ್ತಿ ಹಾಕುವುದು, ಸರಿ ಇಲ್ಲದ್ದನ್ನು ಸರಿಪಡಿಸುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಕೌಟ್ ಸಮವಸ್ತ್ರ ಧರಿಸಿದ ಮೇಲೆ ಬೇರೆಯವರಿಗಿಂತ ವಿಭಿನ್ನವಾಗಿರಬೇಕೆಂದು ಹೇಳಿದರು. ಉದಾತ್ತ ಧ್ಯೇಯಗಳಿಂದ ಈ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಉಪಯೋಗಿಸಿ ಸಮಾಜ ಪರಿವರ್ತನೆಯಲ್ಲಿ ಹೇಗೆ ಬದುಕ ಬೇಕೆಂಬುದು ಸಾಧ್ಯ ಎಂಬುದರ ಬಗ್ಗೆ ಪೋಷಕರಲ್ಲಿ ವಿದ್ಯಾರ್ಥಿಗಳು ವಿಚಾರ ವಿನಿಮಯ ಮಾಡಿಕೊಳ್ಳಬೇಕಾಗಿರುವುದು ಅತ್ಯಗತ್ಯ ಎಂದು ಹೇಳಿದರು.ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಸಿ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮೊದಲಿಗೆ ಸ್ಪರ್ಶ ಸ್ವಾಗತಿಸಿದರು, ವಿದ್ಯಾರ್ಥಿಗಳಾದ ಹರ್ಷವರ್ಧನ್, ನಿತ್ಯಾನಂದ ಮಾತನಾಡಿದರು. ಜೆವಿಎಸ್ ಶಾಲೆ ಸ್ಕೌಟ್ಸ್ ಶಿಕ್ಷಕ ಎಚ್‌.ವಿ. ಶಶಿಧರ್ ವಂದಿಸಿದರು.ಕಾರ್ಯಕ್ರಮದಲ್ಲಿ ಶಾಲೆ ಜಂಟಿ ಕಾರ್ಯದರ್ಶಿ ಕೆ.ಕೆ. ಮನುಕುಮಾರ್, ಸ್ಕೌಟ್ಸ್ ಸಂಸ್ಥೆ ಕಿರಣ್‌ಕುಮಾರ್, ಮುಖ್ಯೋಪಾಧ್ಯಾಯ ವಿಜಿತ್, ಕುಳ್ಳೇಗೌಡ, ವ್ಯವಸ್ಥಾಪಕ ತೇಜಸ್‌ ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 10 ಕೆಸಿಕೆಎಂ 6ಚಿಕ್ಕಮಗಳೂರಿನ ಜೆವಿಎಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ ಭಾರತ್ ಸ್ಕೌಟ್‌ ಆ್ಯಂಡ್‌ ಗೈಡ್ಸ್‌ ಕಾರ್ಯಕ್ರಮವನ್ನು ಎಂ.ಎನ್‌. ಷಡಾಕ್ಷರಿ ಉದ್ಘಾಟಿಸಿದರು.