ಮಕ್ಕಳಿಗೆ ಅಂಕಗಳಿಕೆ ಗಿಂತ ಸಂಸ್ಕಾರಗಳಿಕೆ ಬಹಳ ಮುಖ್ಯ: ಚಂದ್ರೇಗೌಡ

| Published : Aug 20 2025, 01:30 AM IST

ಮಕ್ಕಳಿಗೆ ಅಂಕಗಳಿಕೆ ಗಿಂತ ಸಂಸ್ಕಾರಗಳಿಕೆ ಬಹಳ ಮುಖ್ಯ: ಚಂದ್ರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪುಸ್ತಕ ದೂರ ಸರಿದು ಮಕ್ಕಳ ಕೈಯಲ್ಲಿ ಮೊಬೈಲ್‌ ಸಿಕ್ಕಿ ಆರೋಗ್ಯ ಭವಿಷ್ಯ ನಲುಗಿದೆ. ಮಕ್ಕಳಲ್ಲಿ ಸನ್ನಡತೆ ಮಾಯವಾಗಿದೆ. ಸಮುದಾಯ ಹಾಳಾಗುವ ಹಂತ ತಲುಪುವಂತಾಗಿದೆ. ಮಕ್ಕಳಿಗೆ ವಿನಯತೆ, ಶಿಸ್ತು, ಸಮಯ ಪ್ರಜ್ಞೆ ಮೊದಲು ಕಲಿಸಿಕೊಡಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಕ್ಕಳಿಗೆ ಹಿರಿಯರಲ್ಲಿನ ಗೌರವ, ಕಿರಿಯರ ಮೇಲಿನ ಪ್ರೀತಿ ಮರೆಯಾಗುತ್ತಿದೆ. ಸಂಸ್ಕಾರಕ್ಕೆ ಒತ್ತು ನೀಡಲು ಪೋಷಕರು ಮುಂದಾಗಬೇಕು ಎಂದು ಸಮಾಜ ಸೇವಾಕರ್ತ ಎಲ್.ಎನ್. ಚಂದ್ರೇಗೌಡ ಹೇಳಿದರು.

ಪಟ್ಟಣದ ಕೆಪಿಎಸ್‌ ಕನ್ನಡ ಮಾಧ್ಯಮ ಪ್ರೌಢಶಾಲಾ ವಿಭಾಗದಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಪುಸ್ತಕ ಮಸ್ತಕದ ಬೆಳವಣಿಗೆ ಸಹಕಾರಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಒಂದು ಅಂಕ ಕಡಿಮೆಯಾದರೂ ಚಿಂತೆ ಮಾಡದೆ ಸಂಸ್ಕಾರ ಶಿಕ್ಷಣವನ್ನು ಕಲಿಸಬೇಕು ಎಂದರು.

ಪುಸ್ತಕ ದೂರ ಸರಿದು ಮಕ್ಕಳ ಕೈಯಲ್ಲಿ ಮೊಬೈಲ್‌ ಸಿಕ್ಕಿ ಆರೋಗ್ಯ ಭವಿಷ್ಯ ನಲುಗಿದೆ. ಮಕ್ಕಳಲ್ಲಿ ಸನ್ನಡತೆ ಮಾಯವಾಗಿದೆ. ಸಮುದಾಯ ಹಾಳಾಗುವ ಹಂತ ತಲುಪುವಂತಾಗಿದೆ. ಮಕ್ಕಳಿಗೆ ವಿನಯತೆ, ಶಿಸ್ತು, ಸಮಯ ಪ್ರಜ್ಞೆ ಮೊದಲು ಕಲಿಸಿಕೊಡಬೇಕು ಎಂದರು.

ಐದಾರು ವರ್ಷಗಳಿಂದ ಪೋಷಕರಲ್ಲಿ ಖಾಸಗಿ ಶಾಲೆ ವ್ಯಾಮೋಹ, ಇಂಗ್ಲಿಷ್ ಮಾದ್ಯಮ ಭೂತ ಕಾಡುತ್ತಿದೆ. ಇದರಿಂದ ಸರ್ಕಾರಿಕನ್ನಡ ಶಾಲೆ ಒಂದೊಂದಾಗಿ ಮುಚ್ಚುವಂತಾಗಿದೆ. ಸರ್ಕಾರಿ ಶಾಲೆ ಉಳಿದರೆ ಮಾತ್ರ ಬಡಮಕ್ಕಳ ಭವಿಷ್ಯ ಉತ್ತಮವಾಗಲಿದೆ ಎಂದು ಎಚ್ಚರಿಸಿದರು.

ಈ ವೇಳೆ ಮುಖ್ಯ ಶಿಕ್ಷಕಿ ಬಿ.ಕೆ.ಮಮತಾ, ಸಮಾಜ ಸೇವಾಕರ್ತ ಅಯ್ಯನಕೊಪ್ಪಲು ರವಿಕುಮಾರ್, ಶಿಕ್ಷಕರಾದ ಎಸ್.ಆರ್.ಸುರೇಶ್, ಎಸ್. ವಿಷಕಂಠ, ದೀಪಕುಮಾರಿ, ಚೈತ್ರ, ಪುಷ್ಪಲತಾ, ಭಾಗ್ಯ ಇದ್ದರು.

ನಾಳೆ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನ ಮಹೋತ್ಸವ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಕಮಲ್ಯ ವಿಹಾರ್ ಬಡಾವಣೆಯಲ್ಲಿ ಆ.21ರಂದು ಕಮಲ್ಯ ವಿಹಾರ್ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಶ್ರೀ ವರಸಿದ್ದಿ ವಿನಾಯಕಸ್ವಾಮಿ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನ ಮಹೋತ್ಸವ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಜವರೇಗೌಡ ತಿಳಿಸಿದ್ದಾರೆ.

ಆಧ್ಯಾತ್ಮ ಚಿಂತಕರು, ಡಾ.ವಿ.ಭಾನುಪ್ರಕಾಶ್ ಶರ್ಮಾ ಹಾಗೂ ಶ್ರೀಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಕೃಷ್ಣಶರ್ಮ ಅವರ ನೇತೃತ್ವದಲ್ಲಿ ಅಂದು ಬೆಳಗ್ಗೆ 7.45 ರಿಂದ 8 ಗಂಟೆ ವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಆ.20 ರ ಸಂಜೆ 6೬ ಗಂಟೆಯಿಂದ ಗಣಪತಿ ಪೂಜೆ ಮತ್ತು ಹೋಮ, ಪುಣ್ಯಾಹ, ಪಂಚಗವ್ಯ, ರಕ್ಷಾ ಬಂಧನ, ವಾಸ್ತು ಮತ್ತು ರಾಕ್ಷೆಫ್ನ ಹೋಮ, ಆದಿವಾಸಿಗಳು, ವಾಸ್ತು, ರಾಕ್ಷೆಫ್ನ ಬಲಿ ಪ್ರದಾನ ನಂತರ ರಾತ್ರಿ 9 ಗಂಟೆಗೆ ಮಂಗಳಾರತಿ. ಅ.21 ರ ಗುರುವಾರ ಬೆಳಗ್ಗೆ ಕಳಸ ಪ್ರತಿಷ್ಠಾಪನೆ, ಗೋ ಪೂಜೆ, ನೇತ್ರೋನ್ಮಿಲನ, ವರಸಿದ್ಧಿ ವಿನಾಯಕ ಪ್ರಾಣ ಪ್ರತಿಷ್ಠೆ, ಕಲಾ ಹೋಮಗಳು, ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪೂರ್ಣಾಹುತಿ, ಕುಂಭಾಭಿಷೇಕ 11 ಗಂಟೆಗೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಸಕ ಎ.ಬಿ ರಮೇಶ ಬಂಡಿಸಿದ್ದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಬಿಜೆಪಿ ಮುಖಂಡ ಸಚ್ಚಿದಾನಂದ, ಪುರಸಭೆ ಪ್ರಭಾರ ಅಧ್ಯಕ್ಷ ಎಂ.ಎಲ್ ದಿನೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.