ದಾರ್ಶನಿಕರ ಸಂದೇಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು: ಜನಾಬ್ ಮುಹಮ್ಮದ್ ಕುಂಞ

| Published : Sep 28 2024, 01:23 AM IST

ದಾರ್ಶನಿಕರ ಸಂದೇಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು: ಜನಾಬ್ ಮುಹಮ್ಮದ್ ಕುಂಞ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ದಾರ್ಶನಿಕರ ಸಂದೇಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಕುಂಞ ಹೇಳಿದ್ದಾರೆ.

ತರೀಕೆರೆಯಲ್ಲಿ ಸೀರತ್ ಪ್ರವಚನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ದಾರ್ಶನಿಕರ ಸಂದೇಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಕುಂಞ ಹೇಳಿದ್ದಾರೆ.

ಬುಧವಾರ ತರೀಕೆರೆ ಜಮಾಅತೆ ಇಸ್ಲಾಮಿ ಹಿಂದ್‌ ನಿಂದಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ನಡೆದ ಸೀರತ್ ಪ್ರವಚನದಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಳ್ಳೆಯ ಮನುಷ್ಯರಾಗಿ ಬಾಳಬೇಕು. ಪ್ರವಾದಿ ಮುಹಮ್ಮದ್ (ಸ) ಅವರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲರೂ ಮನುಷ್ಯರೇ, ಶ್ರೀಮಂತರಿಗೆ ಎಷ್ಟು ಬೆಲೆ ಇದೆಯೋ ಅಷ್ಟೇ ಬೆಲೆ ಬಡವರಿಗೂ ಇದೆ. ಮಹಿಳೆಯರ ಬಗ್ಗೆ ದೃಷ್ಠಿಕೋನ ಬದಲಾಗಬೇಕು, ಅವರಿಗೆ ಸ್ವತಂತ್ರ, ಗೌರವ ಕೊಡಬೇಕು, ಮನುಷ್ಯರನ್ನು ಪ್ರೀತಿಸುವ, ಗೌರವಿಸುವ ಮೌಲ್ಯವನ್ನು ಪ್ರವಾದಿ ಮುಹಮ್ಮದ್ (ಸ) ನೀಡಿದರು, ಮೌಲ್ಯಗಳನ್ನು ಪೋಷಿಸಬೇಕು, ಒಳ್ಳೆಯ ಮನುಷ್ಯರಾಗಿ ಬದುಕಬೇಕು ಎಂದು ಹೇಳಿದರು.ಪ್ರವಾದಿ ಮುಹಮ್ಮದ್ (ಸ), ಬಸವಣ್ಣ, ನಾರಾಯಣ ಗುರು ಇವರನ್ನು ಪರಿಚಯಿಸುವ ಅಗತ್ಯವಿದೆ. ಜಮಾಅತೆ ಇಸ್ಲಾಮಿ ಹಿಂದ್ ದೇಶಾದ್ಯಂತ ಇಂತಹ ಕಾರ್ಯಕ್ರಮ ನಿರ್ವಹಿಸುತ್ತಿದೆ ಎಂದು ತಿಳಿಸಿದ ಅವರು ಚಿನ್ನಕ್ಕೆ ತುಕ್ಕು ಹಿಡಿಯುವ ಕಾಲ ಇದು, ಮಾಲಿನ್ಯ ಜಗತ್ತಿನ ದೊಡ್ಡ ಸವಾಲಾಗಿದೆ. ಅಮಲಿನ ಪದಾರ್ಥಗಳಿಂದ ದೂರ ಇರಬೇಕು ಎಂದು ಹೇಳಿದರು.ಕೊಪ್ಪ ಸಾಮಾಜಿಕ ಹೋರಾಟಗಾರರು, ನ್ಯಾಯವಾದಿ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿ ಹಲವಾರು ಜಾತಿ ಧರ್ಮಗಳ ಸಮ್ಮಿಶ್ರವೇ ಭಾರತದ ಸಂಸ್ಕೃತಿ, ಎಲ್ಲಾ ಧರ್ಮಗಳಲ್ಲಿರುವ ಒಳಿತನ್ನು ನಾವು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಬೇಕು. ಪ್ರವಾದಿ ಮುಹಮ್ಮದ್ (ಸ) ಅವರು ಈ ಜಗತ್ತಿಗೆ ಸಾರಿದ್ದು ಪ್ರೀತಿ, ಮಮತೆ ಮತ್ತು ಸಮಾನತೆ ಸಂದೇಶ. ಸತ್ಯ ಪ್ರೀತಿ ಶಾಂತಿ ಸಂದೇಶ ಸಾರಿದ ಮಹಾತ್ಮಾ ಗಾಂಧೀಜಿ ಪ್ರವಾದಿಗಳಿಂದ ಪ್ರೇರಿತರಾಗಿದ್ದರು ಎಂದು ಹೇಳಿದರು.ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿ ಇದು ಅರ್ಥಪೂರ್ಣ ಕಾರ್ಯಕ್ರಮ, ಎಲ್ಲರೂ ಸಹಬಾಳ್ವೆಯಿಂದಿರಬೇಕು ಎಂದು ಹೇಳಿದರು.ಪ್ರವಾದಿ ಮುಹಮ್ಮದ್(ಸ) ಅವರ ಲೇಖನ ಸಂಕಲನವನ್ನು ಬಿಡುಗಡೆಮಾಡಲಾಯಿತು.ಜಿಐಒನ ಬಾಲಕಿಯರು ಅಣಕು ನಾಟಕ ಪ್ರದರ್ಶಿಸಿದರು.

ಪುರಸಭೆ ಅದ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ,ಜಮಾಅತೆ ಇಸ್ಲಾಮಿ ಹಿಂದ್ ತರೀಕೆರೆ ಅಧ್ಯಕ್ಷ ಶೇಖ್ ಜಾವಿದ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮರ್ ಬಾದ್ ಷಹ ಎನ್.ಕೆ.ವಲಯ ಅರಣ್ಯಾಧಿಕಾರಿ ಆಸಿಫ್ ಅಹಮದ್, ಜಮಾಅತೆ ಇಸ್ಲಾಮಿ ಹಿಂದ್ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ರಿಜ್ವಾದ್ ಖಾಲಿದ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ ಮತ್ತಿತರರು ಭಾಗವಹಿಸಿದ್ದರು.

26ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನಿಂದ ನಡೆದ ಸೀರತ್ ಪ್ರವಚನದಲ್ಲಿ ಪ್ರವಾದಿ ಮುಹಮದ್(ಸ) ಅವರ ಲೇಖನ ಸಂಕಲನ

ಬಿಡುಗಡೆ ಮಾಡಲಾಯಿತು. ಕರ್ನಾಟಕ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಕುಂಞ ಪುರಸಭೆ ಅಧ್ಯಕ್ಷ ವಸಂತಕುಮಾರ್, ಪುರಸಭೆ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮ, ಜಮಾಅತೆ ಇಸ್ಲಾಮಿ ಹಿಂದ್ ತರೀಕೆರೆ ಅಧ್ಯಕ್ಷ ಶೇಖ್ ಜಾವಿದ್, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ, ಉಪವಿಬಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮತ್ತಿತರರು ಇದ್ದರು.