ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ಅಗತ್ಯ: ರಮೇಶ್‌

| Published : Nov 23 2024, 12:30 AM IST

ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ಅಗತ್ಯ: ರಮೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಪ್ರವಾಸಿಗರಿಗೆ ಸಕಲ ಸೌಲಭ್ಯ ಕಲ್ಪಿಸಿದಾಗ ಮಾತ್ರ ರಾಜ್ಯ ಹಾಗೂ ದೇಶದಲ್ಲೇ ಪ್ರಕೃತಿದತ್ತ ಮಲೆನಾಡು ಮನ್ನಣೆಗಳಿಸಲು ಸಾಧ್ಯ ಎಂದು ಲೇಖಕ ಸಾ.ನಾ.ರಮೇಶ್ ಹೇಳಿದರು.

’ನಮ್ಮೂರು - ನಮ್ಮ ಪ್ರವಾಸೋದ್ಯಮ’ ಕುರಿತ ಚಿಂತನ ಮಂಥನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಪ್ರವಾಸಿಗರಿಗೆ ಸಕಲ ಸೌಲಭ್ಯ ಕಲ್ಪಿಸಿದಾಗ ಮಾತ್ರ ರಾಜ್ಯ ಹಾಗೂ ದೇಶದಲ್ಲೇ ಪ್ರಕೃತಿದತ್ತ ಮಲೆನಾಡು ಮನ್ನಣೆಗಳಿಸಲು ಸಾಧ್ಯ ಎಂದು ಲೇಖಕ ಸಾ.ನಾ.ರಮೇಶ್ ಹೇಳಿದರು.ನಗರದ ಬೈಪಾಸ್ ಸಮೀಪ ಜಿಲ್ಲಾ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಷನ್‌ ನಿಂದ ಕಾರ್ತಿಕ ಸಂಭ್ರಮದಂದು ಹಮ್ಮಿಕೊಂಡಿದ್ದ ’ನಮ್ಮೂರು - ನಮ್ಮ ಪ್ರವಾಸೋದ್ಯಮ’ ಕುರಿತ ಚಿಂತನ ಮಂಥನ ಉದ್ಘಾಟಿಸಿ ಮಾತನಾಡಿದರು.ವಿಶ್ವದ ಬ್ಯಾಂಕಾಂಕ್, ಥೈಲ್ಯಾಂಡ್ ದೇಶಗಳಲ್ಲಿ ಮಾನವ ನಿರ್ಮಿತದಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭೂಸ್ವರ್ಗದಂತೆ ನಿರ್ಮಾಣಗೊಂಡಿರುವ ಚಿಕ್ಕಮಗಳೂರಿಗೆ ಪ್ರಕೃತಿ ತಾನಾಗಿಯೇ ಒಲಿದು ಬಂದಿದ್ದು, ವರ್ಷದಲ್ಲಿ ಹಲವಾರು ದಿನ ಗಿರಿ ಪರ್ವತ ಶ್ರೇಣಿಗಳಲ್ಲಿ ನಿಷೇಧ ಹೇರಿ ಪ್ರವಾಸಿಗರಿಗೆ ಕ್ಷೀಣಿಸುವಂತೆ ಮಾಡಲಾಗುತ್ತಿದೆ ಎಂದರು.ಮಲೆನಾಡಿನಲ್ಲಿ ಪ್ರವಾಸಿಗರು ಹೆಚ್ಚಾದರೆ ನಗರ ಸೇರಿದಂತೆ ಗಿರಿಶ್ರೇಣಿಯಲ್ಲಿ ವಿಪರೀತ ವಾಹನಗಳ ದಟ್ಟಣೆ ಹಾಗೂ ಕಸದ ರಾಶಿ ಹೆಚ್ಚಾಗಲಿದೆ ಎಂಬ ಮಾತು ಸ್ಥಳೀಯರಲ್ಲಿದೆ. ಸ್ಥಳೀಯ ಆಡಳಿತ ಈ ಬಗ್ಗೆ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜೊತೆಗೆ ಪ್ರವಾಸಿಗರನ್ನೆ ನಂಬಿ ಬದುಕು ಕಟ್ಟಿಕೊಂಡ ವ್ಯಾಪಾರಸ್ಥರಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು. ಚಿಕ್ಕಮಗಳೂರು ನಗರಾಭಿವೃದ್ಧಿ ಹಾಗೂ ಪ್ರವಾಸೋದ್ಯಮದಲ್ಲಿ ಹಲವು ತೊಡಕುಗಳ ನಡುವೆ ಪುಟ್ಟ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಪ್ರವಾಸಿಗರು ಚಿಕ್ಕಮಗಳೂರಿನ ಸೌಂದರ್ಯ ಸವಿಯಲು ಅನೇಕ ನಿಯಮ ರೂಪಿಸುತ್ತಿರುವ ಹಿನ್ನೆಲೆ ಯಲ್ಲಿ ಪ್ರವಾಸಿಗರು ಮಡಿಕೇರಿ ಅಥವಾ ಕೇರಳ ರಾಜ್ಯದತ್ತ ಮುಖ ಮಾಡುತ್ತಿರುವ ಪರಿಣಾಮ ಹೋಂಸ್ಟೇ ಹಾಗೂ ರೆಸಾರ್ಟ್‌ ಮಾಲೀಕರ ಬದುಕಿಗೆ ಕೊಡಲಿಪೆಟ್ಟು ಬೀಳುತ್ತಿದೆ. ಹೀಗಾಗಿ ಜಿಲ್ಲಾಡಳಿತ ಸುಲಲಿತ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಮಲೆನಾಡು ಪ್ರದೇಶ ಕಲುಷಿತಗೊಳಿದಂತೆ ಕಟ್ಟುನಿಟ್ಟಿನ ಕ್ರಮ ಹಾಗೂ ಪ್ರವಾಸಿ ಗರಿಗೂ ಅನುಕೂಲವಾಗುವ ನಿಯಮ ರೂಪಿಸಬೇಕು. ಪ್ಲಾಸ್ಟಿಕ್ ತ್ಯಜಿಸಬೇಕು. ಗಾಜಿನ ಬಾಟಲ್‌ಗಳಲ್ಲಿ ನೀರು ಬಳಸಲು ಸೂಚಿಸ ಬೇಕು ಹಾಗೂ ಬಾಟಲ್ ಹಿಂತಿರುಗಿಸಿದರೆ ಬಹುಮಾನ ವಿತರಿಸುತ್ತೇವೆಂದು ಘೋಷಿಸಬೇಕು ಎಂದು ಹೇಳಿದರು.ಅಸೋಸಿಯೇಷನ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ, ಅನೇಕ ವರ್ಷಗಳಿಂದ ನಿರಂತರ ಚಟುವಟಿಕೆ ಯಲ್ಲಿ ಇಂಜಿನಿಯರ್‌ಗಳು ತೊಡಗಿಸಿದ್ದಾರೆ. ಸಮಾಜದ ಚಿಂತಕರಾಗಿ, ಸಾಮಾನ್ಯರೊಂದಿಗೆ ಬೆರೆಯುವ ಗುಣವನ್ನು ಇಂಜಿನಿಯರ್‌ಗಳು ಬೆಳೆಸಿ ಕೊಂಡಿದ್ದಾರೆ ಎಂದು ಹೇಳಿದರು.ಇಂಜಿನಿಯರ್ ವೃತ್ತಿಯಲ್ಲಿ ಪರಸ್ಪರ ಪರಿಚಯಿಸುವ ನಿಟ್ಟಿನಲ್ಲಿ ಅಸೋಸಿಯೇಷನ್ ಜಾಲತಾಣ ಬಿಡುಗಡೆಗೊಳಿಸಿದೆ. 100 ಸದಸ್ಯರ ಸಂಖ್ಯಾಬಲ ಹೊಂದಿರುವ ಅಸೋಸಿಯೇಷನ್‌ನಲ್ಲಿ ಪದಾಧಿಕಾರಿಗಳು, ಸದಸ್ಯರು ಸಂಪೂರ್ಣ ಮಾಹಿತಿ ಅಡಕ ಗೊಳಿಸಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಪಂ ಇಂಜಿನಿಯರ್ ತರೀಕೆರೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್. ದಯಾಶಂಕರ್, ಯು.ಎಸ್. ಕಮ್ಯೂನಿಕೇಷನ್ ಎಸ್.ಎಂ.ಕೆ.ಉಮಾಪತಿ, ನಗರಸಭೆ ಸಹಾಯಕ ಅಭಿಯಂತರ ಎಂ.ವಿ. ಲೋಕೇಶ್, ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ಕಬೀರ್, ಸಂಯೋಜಕ ಕೆ.ಜಿ.ವೆಂಕಟೇಶ್ ಉಪಸ್ಥಿತರಿದ್ದರು. 21 ಕೆಸಿಕೆಎಂ 2

ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸಿವಿಲ್ ಎಂಜಿನಿಯರ್ಸ್‌ ಅಸೋಸಿಯೇಷನ್‌ ನಿಂದ ಕಾರ್ತಿಕ ಸಂಭ್ರಮದಂದು ಹಮ್ಮಿಕೊಂಡಿದ್ಧ ’ನಮ್ಮೂರು - ನಮ್ಮ ಪ್ರವಾಸೋದ್ಯಮ’ ಕುರಿತ ಚಿಂತನ ಮಂಥನ ಕಾರ್ಯಕ್ರಮವನ್ನು ಲೇಖಕ ಸಾ.ನಾ.ರಮೇಶ್ ಉದ್ಘಾಟಿಸಿದರು. ಜಿ. ರಮೇಶ್‌, ಅಬ್ದುಲ್‌ ಕಬೀರ್‌, ವೆಂಕಟೇಶ್‌ ಇದ್ದರು.