ಸತೀಶ ಜಾರಕಿಹೊಳಿ ಫೌಂಡೇಶನ್‌ದಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ

| Published : Oct 01 2024, 01:36 AM IST

ಸತೀಶ ಜಾರಕಿಹೊಳಿ ಫೌಂಡೇಶನ್‌ದಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ
Share this Article
  • FB
  • TW
  • Linkdin
  • Email

ಸಾರಾಂಶ

ಸತೀಶ ಜಾರಕಿಹೊಳಿ ಫೌಂಡೇಶನ್‌ದಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸಹಾಯ- ಸಹಕಾರ ಪಡೆದು ರಾಷ್ಟ್ರೀಯಮಟ್ಟದಲ್ಲಿ ಮಿಂಚಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸತೀಶ ಜಾರಕಿಹೊಳಿ ಫೌಂಡೇಶನ್‌ದಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸಹಾಯ- ಸಹಕಾರ ಪಡೆದು ರಾಷ್ಟ್ರೀಯಮಟ್ಟದಲ್ಲಿ ಮಿಂಚಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.

ಇಲ್ಲಿನ ಗೋವಾವೆಸ್‌ ಮಹಾವೀರ ಭವನದಲ್ಲಿ ಭಾನುವಾರ ಸತೀಶ ಅಣ್ಣಾ ಪ್ಯಾನ್ಸ್‌ ಕ್ಲಬ್‌ ವತಿಯಿಂದ ಆಯೋಜಿಸಿದ್ದ ಸತೀಶ ಜಾರಕಿಹೊಳಿ ಓಪನ್‌ ಚೆಸ್‌ ಟೋರ್ನಾಮೆಂಟ್‌ ಕಾರ್ಯಕ್ರಮದಲ್ಲಿ ಚೆಸ್‌ ವಿಜೇತರಾಗಿ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಫುಟ್ಬಾಲ್, ಕಬ್ಬಡ್ಡಿ ಸೇರಿದಂತೆ ದೇಸಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿಲ್ಲ. ಸಮಾಜಮುಖಿ ಕಾರ್ಯಗಳನ್ನು ಮಾಡುವ ಜನರು ಸಹ ಮಕ್ಕಳಿಗೆ ಪ್ರೋತ್ಸಾಹಿಸಿ ಅವರಲ್ಲಿನ ಪ್ರತಿಭೆ ಬೆಳಕಿಗೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.ಪೋಷಕರು ತಮ್ಮ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಬೇಕು. ಕ್ರೀಡೆ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಬಾಲ್ಯದಿಂದಲೇ ಮಕ್ಕಳನ್ನು ಕ್ರೀಡಾಸಕ್ತರನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ಈಗಾಗಲೇ ಸತೀಶ ಜಾರಕಿಹೊಳಿ ಫೌಂಡೇಶನ್‌ದಿಂದ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಘಟಪ್ರಭಾದಲ್ಲಿ ಪೊಲೀಸ್‌, ಆರ್ಮಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಅಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪೊಲೀಸ್‌ ಹುದ್ದೆಗೆ, ಸೇನೆಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್‌ದಿಂದ ಬೃಹತ್‌ ಚೆಸ್‌ ಟೋರ್ನಾಮೆಂಟ್‌ ಕಾರ್ಯಕ್ರಮ ನಡೆಯಲಿ. ಮುಂದಿನ ವರ್ಷವೂ ವಿದ್ಯಾರ್ಥಿಗಳು ಸ್ಪರ್ಧಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳಬೇಕು ಎಂದು ಪ್ರಶಸ್ತಿ ಪಡೆದ ವೀಜೆತರಿಗೆ ಶುಭಾಶಯ ಕೋರಿದರು.ಚೆಸ್‌ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್‌ , ರಾಜಸ್ಥಾನ, ಗೋವಾ ಸ್ಪರ್ಧಾಳುಗಳು ಭಾಗಿವಹಿಸಿ ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳು ಸತೀಶ ಜಾರಕಿಹೊಳಿ ಓಪನ್‌ ಚೆಸ್‌ ಟೋರ್ನಾಮೆಂಟ್‌ ಆಯೋಜಿಸಿದ್ದು ಬಹಳಷ್ಟು ಸಂತಸವಾಗಿದೆ. ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಬಹಳಷ್ಟು ಅನೂಕುಲವಾಗಿದೆ. ಬಡಮಕ್ಕಳಿಗೆ ಸಹಕಾರ ನೀಡಿದಂತಾಗಿದೆ ಎಂದು ಸತೀಶ ಜಾರಕಿಹೊಳಿ ಫೌಂಡೇಶನ್‌ ಅಭಿನಂದನೆ ಸಲ್ಲಸಿದೆ.ಈ ಸಂದರ್ಭದಲ್ಲಿ ಡಾ.ಗೀರೀಶ ಸೋನವಾಲಕರ್‌, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಸತೀಶ ಪ್ಯಾನ್ಸ್‌ ಕ್ಲಬ್‌ ಅಧ್ಯಕ್ಷ ಇಮ್ರಾನ್‌ ತಪ್ಪಕೀರ, ದಿಕ್ಷಾ ಪೂಜಾರಿ, ನಿಕಿತಾ ತಾರಡೆ, ಪ್ರಶಾಂತ ಅನ್ವೇಕರ್, ಆಕಾಶ ಮಡಿವಾಳ, ಅಜೇಯ ದಾಮಣೆಕರ್, ಅಕ್ಬರ್ ಸರ್ಡೆಕರ್, ಶಾನವಾಜ್ ಕೀಲ್ಲೇದಾರ್ ಹಾಗೂ ಇತರರು ಇದ್ದರು.

ಪ್ರಶಸ್ತಿ ವೀಜೆತರು

ಚೆನ್ನೈ ರಾಜ್ಯದ ಚೆಸ್‌ ಸ್ಪರ್ಧಿ ಹರಿಕೃಷ್ಣಾ ಎ.ಆರ್. ಪ್ರಥಮ ಬಹುಮಾನ ₹1 ಲಕ್ಷ ನಗದು. ಮುಂಬೈ ರಾಜ್ಯದ ಚೆಸ್‌ ಸ್ಪರ್ಧಿ ಮೊಮಹ್ಮದ್‌ ಸೈಕ್‌ 2ನೇ ಬಹುಮಾನ ₹50 ಸಾವಿರ, ಗೋವಾದ ರಾಜ್ಯದ ಚೆಸ್‌ ಸ್ಪರ್ಧಿ ವಜ್‌ ಇತನ್‌, 3ನೇ ಬಹುಮಾನ ₹25 ಸಾವಿರ ಪ್ರಶಸ್ತಿಯನ್ನು ಮುಡಿಗೇಡಿಸಿಕೊಂಡರು.

ಬೆಳಗಾವಿಯ ಚೆಸ್‌ ಟೂರ್ನಾಮೆಂಟ್‌ದಲ್ಲಿ ರಾಷ್ಟೀಯ ಮಟ್ಟದ ಚೆಸ್‌ ಸ್ಪರ್ಧಾಳುಗಳು ಭಾಗವಹಿಸಿರುವುದು ಹೆಮ್ಮೆಯ ಪಡುವ ವಿಷಯ. 400 ವಿದ್ಯಾರ್ಥಿಗಳು ಹೊರರಾಜ್ಯದಿಂದ ಆಗಮಿಸಿರುವುದು ಸಂತಸವಾಗಿದೆ. ಇಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಬೇಕು ಅಂದಾಗಲೇ ಸತೀಶ ಜಾರಕಿಹೊಳಿ ಚೆಸ್‌ ಟೋರ್ನಾಮೆಂಟ್‌ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಸಾರ್ಥಕವಾಗುತ್ತದೆ.

-ರಾಹುಲ್‌ ಜಾರಕಿಹೊಳಿ, ಯುವ ನಾಯಕ.