ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಸುಮಾರು 8 ಲಕ್ಷ ರು. ವೆಚ್ಚದಲ್ಲಿ ಜಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಸಿ ಎನ್ ಬಾಲಕೃಷ್ಣ ತಿಳಿಸಿದರು.ಹೋಬಳಿಯ ಅತ್ತಿಹಳ್ಳಿ ಗ್ರಾಮದ ಶ್ರೀ ದೊಡ್ಡಮ್ಮ ದೇವಾಲಯದ ಮುಂಭಾಗದಿಂದ ಚಿನ್ನೇನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಜಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಹೋಗಿ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುತ್ತಿಲ್ಲ ಕೇವಲ ವಿರೋಧ ಪಕ್ಷಗಳ ಶಾಸಕರ ಕೂಗಲ್ಲ ಆಡಳಿತ ಪಕ್ಷದ ಶಾಸಕರೇ ಈ ಬಗ್ಗೆ ಅಪಸ್ವರ ಎತ್ತುತ್ತಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ಗ್ರಾಮದಲ್ಲಿ ವಿವಿಧ ಕಾಂಕ್ರೀಟ್ ರಸ್ತೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಇದರ ಜೊತೆಗೆ ಲೋಕಸಭಾ ಸದಸ್ಯರ ನಿಧಿಯಿಂದ ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಲಾಗಿದ್ದು, ಇದರ ಜೊತೆಗೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರ ಒತ್ತಾಯದಂತೆ ಶ್ರೀ ದೊಡ್ಡಮ್ಮ ದೇವಾಲಯದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಗ್ರಾಮದಲ್ಲಿ ಶುದ್ಧಗಂಗಾ ನಿರ್ಮಾಣ ಮಾಡಲು ಆದ್ಯತೆ ನೀಡುವುದಾಗಿ ತಿಳಿಸಿದರು. ಸದ್ಯಕ್ಕೆ ಸುಮಾರು 8 ಲಕ್ಷ ವೆಚ್ಚದಲ್ಲಿ ಜಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚಿನ ಅನುದಾನ ದೊರೆತರೆ ಡಾಂಬರ್ ರಸ್ತೆ ನಿರ್ಮಾಣಕ್ಕೆ ಹೆಚ್ಚು ಗಮನಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹಿರಿಯಣ್ಣ ಗೌಡ, ಅನಿತಾ ಮಹೇಶ್, ಕೃಷಿ ಪತ್ತಿನ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಮುಖಂಡರಾದ ನಾಗರಾಜ್, ಮಂಜೇಗೌಡ್ರು, ಎಚ್ ಕೆ ಅಶೋಕ್ ಕುಮಾರ್, ಭರತ್, ಸಣ್ಣ ತಿಮ್ಮೇಗೌಡ, ಜಯರಾಮ್, ಮಂಜು, ಧನಂಜಯ, ಲೋಕೇಶ್, ಮಂಜು, ಚಂದ್ರೇಗೌಡ, ರಮೇಶ್, ನಾಗರಾಜ್, ಪುಟ್ಟಸ್ವಾಮಿ, ಪುಟ್ಟೇಗೌಡ, ಕಿರಣ್, ಪ್ರವೀಣ್, ಶೇಖರ್, ನಂಜಪ್ಪ, ಮನೋಜ್, ನಾಗ, ಕಂಬೇಗೌಡ, ನರಸಿಂಹೇಗೌಡ, ಕೃಷ್ಣೇಗೌಡ, ದೀಪು, ಪ್ರಭು, ಅಶೋಕ್, ನಾಗಣ್ಣ, ಚನ್ನಕೇಶವ, ವೇಣುಗೋಪಾಲ್ , ಕುಮಾರ್, ಸಂತೋಷ್, ಸ್ವಾಮಿ, ನಾಗೇಂದ್ರ, ರವಿ, ಮಂಜ ಶೆಟ್ಟಿ, ಶಿವರಾಜ್, ಈರೇಗೌಡ, ಮನೋಹರ್, ಕುಮಾರ್, ಅಶೋಕ್, ಸೇರಿದಂತೆ ಇತರರು ಹಾಜರಿದ್ದರು.ಫೋಟೋ:28ಎಚ್ಎಸ್ಎನ್6 : ನುಗ್ಗೇಹಳ್ಳಿ ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಸದಸ್ಯರುಗಳಾದ ಹಿರಿಯಣ್ಣ ಗೌಡ, ಅನಿತಾ ಮಹೇಶ್, ಕೃಷಿ ಪತ್ತಿನ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್ ಪಾಲ್ಗೊಂಡಿದ್ದರು.