ಮಹಿಳೆ, ಮಕ್ಕಳ ಕುರಿತ ಇನ್ನೂ ಹೆಚ್ಚಿನ ಕಾನೂನು ಬರಲಿ: ಬಿ. ಜಿ. ರಮಾ

| Published : Mar 11 2025, 12:49 AM IST

ಮಹಿಳೆ, ಮಕ್ಕಳ ಕುರಿತ ಇನ್ನೂ ಹೆಚ್ಚಿನ ಕಾನೂನು ಬರಲಿ: ಬಿ. ಜಿ. ರಮಾ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆ, ಮಕ್ಕಳ ಮೇಲೆ ಅಪರಾಥಗಳು ಹೆಚ್ಚುತ್ತಿವೆ. ಸ್ತ್ರೀಯರನ್ನು ಪೂಜಿಸುವ ನೆಲದಲ್ಲಿ ಅವಮಾನ ಆಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ನ್ಯಾಯಾಧೀಶರಾದ ಬಿ.ಜಿ. ರಮಾ ಹೇಳಿದರು.

ಧಾರವಾಡ: ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಹೆಚ್ಚಿನ ಕಾನೂನುಗಳು ಜಾರಿಯಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರು, ನ್ಯಾಯಾಧೀಶರಾದ ಬಿ.ಜಿ. ರಮಾ ಹೇಳಿದರು.

ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು,

ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸಾಕಷ್ಟು ಕಾನೂನುಗಳು ರಚನೆ ಆಗಿದ್ದರೂ ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಮಹಿಳೆ, ಮಕ್ಕಳ ಮೇಲೆ ಅಪರಾಥಗಳು ಹೆಚ್ಚುತ್ತಿವೆ. ಸ್ತ್ರೀಯರನ್ನು ಪೂಜಿಸುವ ನೆಲದಲ್ಲಿ ಅವಮಾನ ಆಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಮಹಿಳೆ ಪ್ರತಿ ಕ್ಷೇತ್ರದಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದಾಳೆ ಹಾಗೂ ಸಮಾಜದ ಸರ್ವಾಂಗಿಣ ಅಭಿವೃದ್ಧಿಗೋಸ್ಕರ ತೊಡಗಿಸಿಕೊಂಡಿದ್ದಾಳೆ. ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ದೊರೆಯಬೇಕು. ಭಾರತದ ಸಂವಿಧಾನ ಮಹಿಳೆಯರಿಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಇತರರಿಗೆ ಮಾದರಿಯಾಗುವಂತೆ ಕೆಲಸ ಮಾಡುತ್ತಿದ್ದಾಳೆ. ಇನ್ನೂ ಹೆಚ್ಚಿನ ಅವಕಾಶ, ಉದ್ಯೋಗಗಳ ಅಗತ್ಯವಿದೆ ಎಂದು ತಿಳಿಸಿದರು.

ನ್ಯಾಯಾಧೀಶರಾದ ಪೂರ್ಣಿಮಾ ಭಂಡಾರಕರ, ಪೂರ್ಣಿಮಾ ಪೈ, ಜರೀನಾ, ಹೇಮಶ್ರೀ ಡಿ., ವಿಜಯಲಕ್ಷ್ಮೀ ನಾಪುರ, ನಾಗರಾಜಪ್ಪ ಎ.ಕೆ. ಹಾಗೂ ರಾಜಕುಮಾರ ಸಿ., ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಮಹಿಳಾ ವಕೀಲರ ಸಂಘದ ಅಧ್ಯಕ್ಷರಾದ ದೀಪಾ ಡಿ. ದಂಡವತಿ ಇದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಸ್ವಾಗತಿಸಿದರು. ಪ್ಯಾನೇಲ್ ವಕೀಲ ಸೋಮಶೇಖರ ಎಸ್. ಜಾಡರ ನಿರೂಪಿಸಿದರು.