ಕನ್ನಡ ಜಾಗೃತಿ ಸಮಿತಿಯು ತನ್ನದೆ ಆದಂತಹ ಸಾಮಾಜಿಕವಾದ ಸೇವೆಗಳನ್ನು ಮಾಡುತ್ತ ನಲ್ಲೂರು ಗ್ರಾಮದಲ್ಲಿ ತಾಲೂಕಿನಲ್ಲಿ ತನ್ನದೇ ಆದ ವರ್ಚಸ್ಸು, ಗೌರವ ಹೊಂದಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಕನ್ನಡ ಜಾಗೃತಿ ಸಮಿತಿಯು ತನ್ನದೆ ಆದಂತಹ ಸಾಮಾಜಿಕವಾದ ಸೇವೆಗಳನ್ನು ಮಾಡುತ್ತ ನಲ್ಲೂರು ಗ್ರಾಮದಲ್ಲಿ ತಾಲೂಕಿನಲ್ಲಿ ತನ್ನದೇ ಆದ ವರ್ಚಸ್ಸು, ಗೌರವ ಹೊಂದಿದೆ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.ತಾಲೂಕಿನ ನಲ್ಲೂರು ಗ್ರಾಮದಲ್ಲಿರುವ ಕನ್ನಡ ಜಾಗೃತಿ ಸಮಿತಿಯ ವತಿಯಿಂದ ಏರ್ಪಡಿಸಿದ್ದ 31ನೇ ವರ್ಷದ ಕನ್ನಡ ನಾಡೋತ್ಸವ ಮತ್ತು ಜನಪದೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಿತಿಯು ಆರಂಭಗೊಂಡು 31ವರ್ಷಗಳು ತುಂಬುತ್ತಿವೆ ಎಂದರು.
ವಿಷಯ ಸಂಪನ್ಮೂಲ ವ್ಯಕ್ತಿ ಕಾಕನೂರು ಎಂ.ಬಿ.ನಾಗರಾಜ್ ಮಾತನಾಡಿ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಅನುಭವಿಸುತ್ತೀರುವ ವಿಚಾರ ಕುರಿತಂತೆ ಸಮಗ್ರವಾಗಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಮತ್ತು ಕನ್ನಡ ಧ್ವಜಾರೋಹಣವನ್ನು ಸಮಿತಿಯ ಅಧ್ಯಕ್ಷ ಬಾಗಜ್ಜಿ ಆರ್.ಮಂಜಪ್ಪ ನೆರವೇರಿಸಿದರು. ಸಮಾರಂಭದಲ್ಲಿ 10ನೇ ತರಗತಿಯಲ್ಲಿ ಕನ್ನಡ ಪಠ್ಯ ವಿಷಯದಲ್ಲಿ 125 ಅಂಕಗಳನ್ನು ಪಡೆದ ಲಕ್ಷ್ಮಿ ಮತ್ತು ವರ್ಷಿತಾ, ಸಮಾಜ ವಿಜ್ಞಾನ ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ರಮೇಶ್, ವಾಗೀಶ್ ಅವರನ್ನು ಗೌರವಿಸಲಾಯಿತು.
ಸಮಾರಂಭಕ್ಕೂ ಮುನ್ನ ಕನ್ನಡ ಭುವನೇಶ್ವರಿಯ ಭಾವಚಿತ್ರವನ್ನು ಅಲಂಕೃತಗೊಂಡ ಬೆಳ್ಳಿಯ ಸಾರೋಟಿನಲ್ಲಿ ಕುಳ್ಳಿರಿಸಿಕೊಂಡು ವಿವಿಧ ವಾಧ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ಗ್ರಾಪಂ ಅಧ್ಯಕ್ಷೆ ರೂಪಾ, ನಿವೃತ್ತ ಮುಖ್ಯ ಶಿಕ್ಷಕ ಲಕ್ಷ್ಮಿನಾರಾಯಣ್, ರುದ್ರೇಶ್ ಗೌಡ, ಗುತ್ತಿಗೆದಾರ ಆರ್.ಪರಮೇಶ್ವರಪ್ಪ, ವಿಶ್ವನಾಥ್, ಉಸ್ಮಾನ್ ಷರೀಪ್, ಪರಸಪ್ಪ, ಚೇತನ್, ಬಿ.ಎಂ.ಶಿವಪ್ಪ, ಬೂರ್ ವೇಲ್ ಸ್ವಾಮಿ, ಶಂಕರಮೂರ್ತಿ, ಜನಾರ್ಧನ್, ಸಮಿತಿಯ ಸದಸ್ಯರು ಭಾಗವಹಿಸಿದ್ದರು.