ಕನ್ನಡಪ್ರಭ ವಾರ್ತೆ ಸರಗೂರುಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ಚನ್ನೈನ ಪ್ರೀಡಂ ಟ್ರಸ್ಟ್ ಮತ್ತು ಲೆನಾಕ್ಸ್, ಕ್ಸೆಲೆಮ್ ವಾಟರ್ಮಾರ್ಕ್ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ವಿಶೇಷಚೇತನರಿಗೆ ಕೃತಕ ಕಾಲುಗಳು ಮತ್ತು ಸಾಧನ ಸಲಕರಣೆಗಳ ಜೋಡಣೆ, ತರಭೇತಿ ಮತ್ತು ವಿತರಣಾ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದಲ್ಲಿ 180 ಕ್ಕೂ ಹೆಚ್ಚು ಮಂದಿ ವಿಶೇಷಚೇತನರು ಮೈಸೂರು ಜಿಲ್ಲೆಯ ವಿವಿದ ತಾಲೂಕುಗಳಿಂದ ಆಗಮಿಸಿ ಶಿಬಿರದ ಸದುಪಯೋಗನವನ್ನು ಪಡೆದುಕೊಂಡಿರುತ್ತಾರೆ.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಷಾ ಭಾರಧ್ವಾಜ್, ತಾಲೂಕು ಸಂಯೋಜಕ ಮಹದೇವಯ್ಯ ಭಾಗವಹಿಸಿದ್ದರು.ಯೋಜನಾ ನಿರ್ದೇಶಕ ಕೆ.ಆರ್. ಶಂಕರ ಅಧ್ಯಕ್ಷತೆ ವಹಿಸಿದ್ದರು. ವಿಶೇಷಚೇತನರಿಗಾಗಿ ಸಮಗ್ರ, ಆರೈಕೆ ಬೆಂಬಲ ಮತ್ತು ಚಿಕಿತ್ಸಾ ಕಾರ್ಯಕ್ರಮ. ಎಸ್.ವಿ.ವೈ.ಎಂ. ವಹಿಸಿದ್ದರು. ಹಿರಿಯ ವ್ಯವಸ್ಥಾಪಕ ಎಂ.ಪಿ. ರಮೇಶ್, ಯೋಜನಾ ವ್ಯವಸ್ಥಾಪಕ ಬೋರಯ್ಯ, ಸಹಾಯಕ ಶಾರೀರಿಕ ಚಿಕಿತ್ಸಕರಾದ ಪೂರ್ಣಿಮಾ ಸಿಬ್ಬಂದಿ ವರ್ಗದವರಾದ ಎಲ್ಲಾ ಪುನವರ್ಸತಿ ಸಂಪನ್ಮೂಲ ಸಂಯೋಜಕರು, ಯೋಜನಾ ಕಾರ್ಯಕರ್ತರುಗಳು ಮತ್ತು ಪ್ರೀಡಂ ಟ್ರಸ್ಟ್ ನ ಸಂಯೋಜಕ ಅಭಿಲಾಷ್ ಮತ್ತು ಸಿಬ್ಬಂದಿ ವರ್ಗ, ವಿಕಲಚೇತನರ ಇಲಾಖೆಯ ನಂಜನಗೂಡು ತಾಲೂಕು ಸಂಯೋಜಕ ರಂಗಸ್ವಾಮಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು, ವಿಶೇಷಚೇತನರ ತಾಲೂಕು ಒಕ್ಕೂಟಗಳ ಅಧ್ಯಕ್ಷ ನಾಗರಾಜು, ಚಾಮನಾಯಕ ಮತ್ತು ಪದಾಧಿಕಾರಿಗಳು ಇದ್ದರು.
ವಿಶೇಷಚೇತನರಿಗೆ ಕೃತಕ ಕಾಲುಗಳು ಮತ್ತು ಸಾಧನ ಸಲಕರಣೆಗಳ ಜೋಡಣೆ, ತರಬೇತಿ, ವಿತರಣೆ
ಮೈಸೂರು ಜಿಲ್ಲೆಯ ವಿವಿದ ತಾಲೂಕುಗಳಿಂದ ಆಗಮಿಸಿ ಶಿಬಿರದ ಸದುಪಯೋಗನ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.