ನಿಟ್ಟೆ: ಎರಡು ದಿನಗಳ ಉದ್ಯಮ-ಶೈಕ್ಷಣಿಕ ಸಮಾವೇಶ

| Published : Feb 01 2024, 02:08 AM IST

ಸಾರಾಂಶ

ನವದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಸ್ಟೈನಬಲ್ ಡೆವಲಪ್ಮೆಂಟ್ ನ ಮಹಾನಿರ್ದೇಶಕ ಮತ್ತು ಭಾರತ ಸರ್ಕಾರದ ರಾಷ್ಟ್ರೀಯ ಹವಾಮಾನ ಬದಲಾವಣೆ ಮಿಷನ್ ಸದಸ್ಯ ಡಾ.ಶ್ರೀಕಾಂತ್ ಕೆ. ಪಾಣಿಗ್ರಾಹಿ ಕಾರ್ಯಕ್ರಮ ಉದ್ಘಾಟಿಸಲಿರುವರು.

ಕನ್ನಡಪ್ರಭ ವಾರ್ತೆ ನಿಟ್ಟೆ

ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಫೆ. 2 ಮತ್ತು 3 ರಂದು ಉದ್ಯಮ-ಶೈಕ್ಷಣಿಕ ಸಮಾವೇಶ 2024 ನಡೆಯಲಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮತ್ತು ನಿಟ್ಟೆ (ಡೀಮ್ಡ್ ಟು ಯುನಿವರ್ಸಿಟಿ) ಕುಲಾಧಿಪತಿ ಎನ್. ವಿನಯ ಹೆಗ್ಡೆ ವಹಿಸಲಿದ್ದು, ನವದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸಸ್ಟೈನಬಲ್ ಡೆವಲಪ್ಮೆಂಟ್ ನ ಮಹಾನಿರ್ದೇಶಕ ಮತ್ತು ಭಾರತ ಸರ್ಕಾರದ ರಾಷ್ಟ್ರೀಯ ಹವಾಮಾನ ಬದಲಾವಣೆ ಮಿಷನ್ ಸದಸ್ಯ ಡಾ.ಶ್ರೀಕಾಂತ್ ಕೆ. ಪಾಣಿಗ್ರಾಹಿ ಕಾರ್ಯಕ್ರಮ ಉದ್ಘಾಟಿಸಲಿರುವರು. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ 300 ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸುರತ್ಕಲ್ ನ ಎನ್ ಐಟಿ-ಕೆ ನಿರ್ದೇಶಕ ಡಾ.ಬಿ.ರವಿ (ಆರೋಗ್ಯ ರಕ್ಷಣೆ), ಬಾಷ್ ಲಿಮಿಟೆಡ್ ನ ಸುಸ್ಥಿರತೆ ಸಲಹೆಗಾರ ಹಾಗೂ ಮಾಜಿ ಹಿರಿಯ ಜನರಲ್ ಮ್ಯಾನೇಜರ್ ಕೆ.ಪಿ.ಮೂರ್ತಿ (ಸುಸ್ಥಿರತೆ ಕುರಿತು), ಬಯೋಕಾಡ್ ಬೆಂಗಳೂರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ರಾವ್ ಸಿ.ಎ. (ಫಾರ್ಮಾ ಕುರಿತು), ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ದುಶ್ಯಂತ್ ಕುಮಾರ್ (ಕೃಷಿ) ತಜ್ಞರ ಉಪನ್ಯಾಸ ನೀಡಲಿದ್ದಾರೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.