ಸಾರಾಂಶ
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ₹8,810 ಅಧಿಕ ಕೋಟಿಯ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೈನಾಪುರ ಗ್ರಾಮದ 50ಕ್ಕೂ ಅಧಿಕ ಸದಸ್ಯರು ಹಾಗೂ ನಾಗರಮುನ್ನೊಳಿ ಗ್ರಾಮದ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
ಚಿಕ್ಕೋಡಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ₹8,810 ಅಧಿಕ ಕೋಟಿಯ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜೈನಾಪುರ ಗ್ರಾಮದ ದುಂಡಪ್ಪ ಘರಬುಡೆ, ಈರಗೌಡ ಟೊಪುಗೊಳ, ರಾಜು ಭಾಕರೇ ರಾಮಗೌಂಡ ಸುಳಕುಡೆ ಅಲಗೊಂಡ ಬ್ಯಾಳಿ ರಾಜು ಮಠದ ಅರ್ಜುನ ಕಮತೆ ಹಾಗೂ ಅವರ ತಂಡದ ಸದಸ್ಯರು ಒಟ್ಟು 50ಕ್ಕೂ ಅಧಿಕ ಸದಸ್ಯರು ಹಾಗೂ ನಾಗರಮುನ್ನೊಳಿ ಗ್ರಾಮದ ಸಿದ್ದಪ್ಪ ಚೌಗಲಾ, ಬಸವರಾಜ ಯಾದಗುಡೆ, ಲಕ್ಷ್ಮಣ ಬಂಬಲವಾಡೆ ಸತ್ಯಪ್ಪ ಜುಲಪೆ, ಈರಪ್ಪ ಚೌಗಲಾ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶಶಿಕಲಾ ಜೊಲ್ಲೆಯವರು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಅರುಣ ಐಹೊಳೆ, ವಿಜಯ ಕೋಟಿವಾಳೆ ರಾಯಗೌಡ ಕೆಳಗಿನಮನಿ, ರವಿ ಹಿರೇಕುಡೆ, ಅಣ್ಣಾಸಾಬ ಖೇಮಲಾಪುರೆ, ಪ್ರಥ್ವಿರಾಜ ಜಾಧವ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.