ಸಾರಾಂಶ
ಭೀಮಸಮುದ್ರ ರೇಷ್ಮೆ ಬೆಳೆಗಾರ ಕೆ. ಉಮಾಪತಿ ತನ್ನ ಹೊಲದಲ್ಲಿ ನಿರ್ಮಿಸಿದ್ದ ರೇಷ್ಮೆ ಮನೆ ಸಂಪೂರ್ಣ ಬಿರುಗಾಳಿಗೆ ಉರುಳಿ ಬಿದ್ದು ಲಕ್ಷಾಂತರ ನಷ್ಟವಾಗಿದೆ.
ಕೂಡ್ಲಿಗಿ: ಅಖಂಡ ಕೂಡ್ಲಿಗಿ ತಾಲೂಕಿನಲ್ಲಿ ಗುರುವಾರ, ಶುಕ್ರವಾರ ಸಂಜೆ ಸುರಿದ ಭಾರೀ ಬಿರುಗಾಳಿ ಸಹಿತ ಮಳೆಗೆ 250ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು, ಕುರಿಹಟ್ಟಿ, ಭೀಮಸಮುದ್ರ, ಕಡೇಕೋಳ್ಳ, ಕರಡಿಹಳ್ಳಿಗೆ ಹತ್ತಾರು ವೀಳ್ಯೆದೆಲೆ ತೋಟಗಳು ಸೇರಿದಂತೆ ತಾಲೂಕಿನಲ್ಲಿ 50ಕ್ಕೂ ಹೆಚ್ಚು ವೀಳ್ಯೆದೆಲೆ ತೋಟಗಳು ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭೀಮಸಮುದ್ರ ರೇಷ್ಮೆ ಬೆಳೆಗಾರ ಕೆ. ಉಮಾಪತಿ ತನ್ನ ಹೊಲದಲ್ಲಿ ನಿರ್ಮಿಸಿದ್ದ ರೇಷ್ಮೆ ಮನೆ ಸಂಪೂರ್ಣ ಬಿರುಗಾಳಿಗೆ ಉರುಳಿ ಬಿದ್ದು ಲಕ್ಷಾಂತರ ನಷ್ಟವಾಗಿದೆ. ಅಲ್ಲದೆ ಭೀಮಸಮುದ್ರ ಗ್ರಾಮದ ಎತ್ತಿನ ವೀರಣ್ಣ, ಅಂಗಡಿ ಜಾತಪ್ಪ, ಕುರಿಹಟ್ಟಿ ಗುರುಸಿದ್ದಪ್ಪ, ಮಾಕನಡಕು ಬಸವರಾಜ, ಕರಡಿಹಳ್ಳಿ ಗೌಡ್ರು ಪಾಪಣ್ಣ ಎಂಬುವರ ವೀಳ್ಯೆದಲೆ ತೋಟ ಸೇರಿದಂತೆ ಹತ್ತಾರು ತೋಟಗಳು ಮುರಿದು ಬಿದ್ದಿವೆ. ಗಜಾಪುರದಲ್ಲಿ 2 ವೀಳ್ಯೆದಲೆ ತೋಟಗಳು ನೆಲಕ್ಕುರುಳಿವೆ. ಚಿಕ್ಕಜೋಗಿಹಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲೊಂದೇ ಶುಕ್ರವಾರ ಸಂಜೆ ಬಿರುಗಾಳಿ ಮಳೆಗೆ 30 ಮರಗಳು 7 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದುವೆ. ಗಜಾಪುರ ಸಮೀಪ 25ಕ್ಕೆ ಹೆಚ್ಚು ಮರಗಳು ನೆಲಕ್ಕುರುಳಿವೆ. ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ರಜೆಯಿರುವ ಕಾರಣ ತಮ್ಮ ಗ್ರಾಮಗಳಿಗೆ ಹೋಗಿರುವ ಕಾರಣ ಬಾರಿ ಅನಾಹುತದಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ. ವಿದ್ಯಾಲಯದ ಸಿಬ್ಬಂದಿ ವಸತಿಗೃಹದ ಮೇಲೆ ಮರ ಮುರಿದು ಬಿದ್ದರೂ ಸಿಬ್ಬಂದಿ ಅನಾಹುತದಿಂದ ಪಾರಾಗಿದ್ದಾರೆ.ಹಾರಿಹೋದ ಕುಡಿವ ನೀರಿನ ಘಟಕ: ಚಿಕ್ಕಜೋಗಿಹಳ್ಳಿಯಲ್ಲಿ ನಿರ್ಮಿಸಲಾಗಿದ್ದ ಶುದ್ಧ ಕುಡಿವ ನೀರಿನ ಘಟಕ ಬಿರುಗಾಳಿಗೆ ಹಾರಿಹೋಗಿದ್ದು , ಚೆನ್ನದಾಸರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಜೋಪಡಿ ಮೇಲೆ ಬಿದ್ದರು ಯಾವುದೇ ಆನಾಹುತ ಸಂಭವಿಸಿಲ್ಲ. ಆದರೆ ಹತ್ತಾರು ಚೆನ್ನದಾಸರ ಕುಟುಂಬಗಳು ನಿರ್ಮಿಸಿಕೊಂಡಿದ್ದ ಜೋಪಡಿಗಳ ಮೇಲೆ ಬಿದ್ದಿದ್ದರಿಂದ ಇಡೀ ರಾತ್ರಿ ಈ ಬಡಕುಟುಂಬಗಳು ನಿದ್ದೆ ಇಲ್ಲದೆ ಜಾಗರಣೆ ಮಾಡುವಂತಾಗಿದ್ದು ಅಧಿಕಾರಿಗಳಿಗೂ ಮತ್ತು ಜನಪ್ರತಿನಿಧಿಗಳು ಇಡೀ ಶಾಪ ಹಾಕಿದರು.
ಚಿಕ್ಕಜೋಗಿಹಳ್ಳಿ ಸುತ್ತಲ್ಲಿನ ಹಳ್ಳಿಗಳಲ್ಲಿ ಬಿರುಗಾಳಿ ಮಳೆಗೆ ವೀಳ್ಯೆದಲೆ ತೋಟಗಳು ನಾಶವಾಗಿದೆ ಮತ್ತು ಭೀಮಸಮುದ್ರಕ್ಕೆ ಕೂಡಲೆ ಭೇಟಿ ನೀಡುವೆ. ಜವಾಹರ್ ವಿದ್ಯಾಲಯದಲ್ಲಿ 30 ಮರಗಳು ಬಿದ್ದಿವೆ. ವಿದ್ಯಾರ್ಥಿಗಳು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುವೆ ಎಂದು ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ ತಿಳಿಸಿದ್ದಾರೆ.