ಸಾರಾಂಶ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಮಹಾ ಸಮ್ಮೇಳನಕ್ಕೆ ತರೀಕೆರೆ ತಾಲೂಕಿನಲ್ಲಿ ಒಟ್ಟು ವಿವಿಧ ಇಲಾಖೆಗಳಿಂದ ೧೨೦೦ಕ್ಕೂ ಹೆಚ್ಚು ನೌಕರರಿದ್ದು, ಇದರಲ್ಲಿ ಇದೇ ಮೊದಲ ಬಾರಿಗೆ ಸುಮಾರು ೬೦೦ಕ್ಕೂ ಹೆಚ್ಚು ನೌಕರರು ಭಾಗವಹಿಸುತ್ತಿದ್ದೇವೆ ಎಂದು ಸಂಘಟನೆ ತಾಲೂಕು ಅಧ್ಯಕ್ಷ ಎಚ್. ನಾಗರಾಜ್ ಹೇಳಿದರು.
ಬೆಂಗಳೂರಲ್ಲಿ ಸಮ್ಮೇಳನ: ಎಚ್. ನಾಗರಾಜ್
ಕನ್ನಡಪ್ರಭ ವಾರ್ತೆ, ತರೀಕೆರೆಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಮಹಾ ಸಮ್ಮೇಳನಕ್ಕೆ ತರೀಕೆರೆ ತಾಲೂಕಿನಲ್ಲಿ ಒಟ್ಟು ವಿವಿಧ ಇಲಾಖೆಗಳಿಂದ ೧೨೦೦ಕ್ಕೂ ಹೆಚ್ಚು ನೌಕರರಿದ್ದು, ಇದರಲ್ಲಿ ಇದೇ ಮೊದಲ ಬಾರಿಗೆ ಸುಮಾರು ೬೦೦ಕ್ಕೂ ಹೆಚ್ಚು ನೌಕರರು ಭಾಗವಹಿಸುತ್ತಿದ್ದೇವೆ ಎಂದು ಸಂಘಟನೆ ತಾಲೂಕು ಅಧ್ಯಕ್ಷ ಎಚ್. ನಾಗರಾಜ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ೭ನೇ ವೇತನ ಆಯೋಗದ ವರದಿ ಅನುಷ್ಠಾನ, ಹಳೆ ಪಿಂಚಣಿ ಯೋಜನೆ ಮರುಜಾರಿ ಮತ್ತು ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆಗಳು ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಗಳಾಗಿದ್ದು, ಇವುಗಳನ್ನು ಸರ್ಕಾರದ ಗಮನಕ್ಕೆ ತರಲು ರಾಜ್ಯ ಸಮಿತಿ ನಿರ್ದೇಶನದಂತೆ ಭಾಗವಹಿಸುತ್ತಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವ ನೌಕರರಿಗೆ ೨ದಿನಗಳ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಯೋಗೀಶ್, ಖಜಾಂಚಿ ವಸಂತಕುಮಾರ್, ಎಂ.ಬಿ. ರಾಮಚಂದ್ರಪ್ಪ, ಕೆಂಪರಂಗಯ್ಯ, ಮಾಜಿ ಅಧ್ಯಕ್ಷ ಬಿ.ಎಂ. ಮುರುಗೇಶಪ್ಪ ಮೊದಲಾದವರಿದ್ದರು.26ಕೆಟಿಆರ್.ಕೆ.2ಃ
ತರೀಕೆರೆಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ನಾಗರಾಜ್ ಮಾತನಾಡಿದರು. ಮಾಜಿ ಅಧ್ಯಕ್ಷ ಬಿ.ಎಂ.ಮುರುಗೇಶಪ್ಪ, ಖಜಾಂಚಿ ವಸಂತಕುಮಾರ್ ಇದ್ದರು.