ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 75 ಸಾವಿರಕ್ಕೂ ಅಧಿಕ ಸದಸ್ಯತ್ವ ನೋಂದಣಿ : ಸಿ.ಕೆ. ಸತೀಶ್

| Published : Sep 03 2024, 01:45 AM IST / Updated: Sep 03 2024, 09:05 AM IST

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ 75 ಸಾವಿರಕ್ಕೂ ಅಧಿಕ ಸದಸ್ಯತ್ವ ನೋಂದಣಿ : ಸಿ.ಕೆ. ಸತೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಮದ್ದೂರು ಕ್ಷೇತ್ರ ವ್ಯಾಪ್ತಿ ಐದು ಹೋಬಳಿಗಳ 185 ಗ್ರಾಮಗಳ ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 300 ಸದಸ್ಯತ್ವ ಗುರಿ ಗೊಂದಲಾಗಿದೆ. ಸೆ.2 ರಿಂದ ಅ.2ರವರೆಗೆ ಎರಡು ಹಂತದಲ್ಲಿ ನಿರಂತರವಾಗಿ ನಡೆಯುವ ಸದಸ್ಯತ್ವ ಅಭಿಯಾನದಲ್ಲಿ ಕ್ಷೇತ್ರದಿಂದ ಒಟ್ಟು 75,900 ಸದಸ್ಯತ್ವದ ಗುರಿ ಹೊಂದಲಾಗಿದೆ.

 ಮದ್ದೂರು :  ವಿಧಾನಸಭಾ ಕ್ಷೇತ್ರದಲ್ಲಿ 75 ಸಾವಿರಕ್ಕೂ ಮೀರಿ ಬಿಜೆಪಿ ಸದಸ್ಯತ್ವದ ನೋಂದಣಿ ಗುರಿ ಗೊಂದಲಾಗಿದೆ ಎಂದು ಪಕ್ಷದ ಮಂಡಲದ ಅಧ್ಯಕ್ಷ ಸಿ.ಕೆ.ಸತೀಶ್ ಸೋಮವಾರ ಹೇಳಿದರು.

ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಪಕ್ಷದ ಪದಾಧಿಕಾರಿಗಳೊಂದಿಗೆ ಚಾಲನೆ ನೀಡಿ ಮಾತನಾಡಿ, ಸಂಘಟನೆಯ ಚಟುವಟಿಕೆಯಲ್ಲಿ ಬಿಜೆಪಿ ಅತ್ಯಂತ ಮಹತ್ವದ ಪರಿಣಾಮವಾಗಿ ಸದಸ್ಯತ್ವದ ನೋಂದಣಿ ಅಭಿಯಾನ ಕೈಗೊಳ್ಳಲಾಗಿದೆ ಎಂದರು.

ನೋಂದಣಿ ಅಭಿಯಾನವನ್ನು ರಾಜ್ಯ, ಜಿಲ್ಲಾ ಮತ್ತು ಮಂಡಲ ಮೋರ್ಚಾ ಹಂತದಲ್ಲಿ ನಡೆಸಲು ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗಿದೆ. ಡಿಜಿಟಲ್ ವ್ಯವಸ್ಥೆ ಮೂಲಕ ಸದಸ್ಯತ್ವ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದರು.

ಮದ್ದೂರು ಕ್ಷೇತ್ರ ವ್ಯಾಪ್ತಿ ಐದು ಹೋಬಳಿಗಳ 185 ಗ್ರಾಮಗಳ ಪ್ರತಿ ಬೂತ್ ಮಟ್ಟದಲ್ಲಿ ಕನಿಷ್ಠ 300 ಸದಸ್ಯತ್ವ ಗುರಿ ಗೊಂದಲಾಗಿದೆ. ಸೆ.2 ರಿಂದ ಅ.2ರವರೆಗೆ ಎರಡು ಹಂತದಲ್ಲಿ ನಿರಂತರವಾಗಿ ನಡೆಯುವ ಸದಸ್ಯತ್ವ ಅಭಿಯಾನದಲ್ಲಿ ಕ್ಷೇತ್ರದಿಂದ ಒಟ್ಟು 75,900 ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.

ಬಿಜೆಪಿ ರಾಜ್ಯ ಹಾಲು ಪ್ರ ಕೋಸ್ಟದ ಸಹಸಂಚಾಲಕಿ ಎಂ.ರೂಪ ಮಾತನಾಡಿ, ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಕ್ಕಿಂತ ಮದ್ದೂರು ಕ್ಷೇತ್ರದಲ್ಲಿ ಹೆಚ್ಚಿನ ಸದಸ್ಯತ್ವ ನೋಂದಣಿ ಮಾಡುವ ಕಾರ್ಯಕರ್ತರ ತಂಡಕ್ಕೆ ಬಿಜೆಪಿ ಜಿಲ್ಲಾ ಮತ್ತು ಮಂಡಲ ದ ವತಿಯಿಂದ ತಲಾ ಒಂದು ಲಕ್ಷ ದಂತೆ 2 ಲಕ್ಷ ರು ಬಹುಮಾನ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಜಿಲ್ಲಾ ಉಪಾಧ್ಯಕ್ಷ ಎಂ. ಸತೀಶ್ ಬಿಜೆಪಿ ಶಕ್ತಿ ಕೇಂದ್ರದ ಮೇಲ್ವಿಚಾರಕರು ಮುಖಂಡರು ಮತ್ತು ಕಾರ್ಯಕರ್ತರ ತಂಡ ರಚನೆ ಮಾಡಿಕೊಂಡು ಪ್ರತಿ ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸಿ ನೋಂದಣಿಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷ ದ ಅಭ್ಯರ್ಥಿಗಳು ಗೆಲುವಿಗೆ ನಾಂದಿ ಹಾಡುವಂತೆ ಮನವಿ ಮಾಡಿದರು.

ಈ ವೇಳೆ ಬಿಜೆಪಿ ಮಹಿಳಾ ಘಟಕದ ಶ್ವೇತ, ಸೌಮ್ಯ, ರಂಜಿತಾ, ತ್ರಿವೇಣಿ, ಮಮತಾರಾಂಕಾ, ಲಲಿತಮ್ಮ, ಮುಖಂಡರಾದ ಕೆ. ಎಸ್. ಮಲ್ಲಿಕಾರ್ಜುನ್, ಎಂ.ಸಿ. ಸಿದ್ದು, ಯೋಗೇಶ್, ಬುಲೆಟ್ ಬಸವರಾಜು, ಮಧು ಕುಮಾರ್, ಯೋಗೇಶ್ ಸೇರಿದಂತೆ ಶಕ್ತಿ ಕೇಂದ್ರದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.