ಸಾರಾಂಶ
ಹೆಚ್ಚು ಹೆಚ್ಚು ವಾಹನ ಓಡಾಟ ವಾಣಿಜ್ಯ ಅಭಿವೃದ್ಧಿಗೆ ಪೂರಕ ಆಗಲಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ಅರಸೀಕೆರೆಯಲ್ಲಿ ಚಿಕ್ಕಮಗಳೂರು ಗಡಿವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಸ್ತೆ ಕಾಮಗಾರಿಗೆ ಭೂಮಿಪೂಜೆ
ಅರಸೀಕೆರೆ: ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಚೆನ್ನಾಗಿರಬೇಕು. ಹೀಗಿದ್ದಾಗ ಅಪಘಾತ ಸಂಭವಿಸುವುದು ಕಡಿಮೆಯಾಗುತ್ತದೆ. ಹೆಚ್ಚು ಹೆಚ್ಚು ವಾಹನ ಓಡಾಟ ವಾಣಿಜ್ಯ ಅಭಿವೃದ್ಧಿಗೆ ಪೂರಕ ಆಗಲಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಹೇಳಿದರು.ನಗರದಲ್ಲಿ ಲೋಕೋಪಯೋಗಿ ಇಲಾಖಾ ವತಿಯಿಂದ ೫ ಕೋಟಿ ರು. ವೆಚ್ಚದಲ್ಲಿ ಬಾಣಾವರದಿಂದ ಚಿಕ್ಕಣ್ಣನಕೊಪ್ಪಲು ಮಾರ್ಗವಾಗಿ ಚಿಕ್ಕಮಗಳೂರು ಗಡಿವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಬಾಣಾವರ ಹೋಬಳಿ ಚಿಕ್ಕಣ್ಣನಕೊಪ್ಪಲು ಗ್ರಾಮದಲ್ಲಿ ನಡೆದ ಕಾರ್ಯಕ್ರಮ ನಂತರ ಮಾತನಾಡಿದ ಶಾಸಕರು, ಈ ರಸ್ತೆ ಚಿಕ್ಕಮಗಳೂರು ಗಡಿಗೆ ಸಂಪರ್ಕ ರಸ್ತೆಯಾಗಿದೆ. ಹಲವು ವರ್ಷಗಳಿಂದ ದುರಸ್ತಿ ಕಾಣದೆ ಹಾಳಾಗಿತ್ತು. ಈ ರಸ್ತೆಯಲ್ಲಿ ಸಂಚಾರ ವಾಹನ ಸವಾರರು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಬೇಕಾಗಿತ್ತು. ಇದೀಗ ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸದಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲೂಕಿನ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗಿದೆ. ಕೆಲವೊಂದು ಕಡೆ ಕಾಮಗಾರಿ ಅವ್ಯವಸ್ಥೆ ಆಗಿದ್ದು, ಇದನ್ನು ಕೂಡಲೇ ಸರಿಪಡಿಸಿ ಸರಿಪಡಿಸಿ ನೀರು ಒದಗಿಸಲು ಇಲಾಖೆಯ ಎಂಜಿನಿಯರ್‌ಗೆ ತಾಕೀತು ಮಾಡಿದರು.
ಎತ್ತಿನಹೊಳೆ ಶುದ್ಧ ಕುಡಿಯುವ ನೀರಿನ ಯೋಜನೆಯ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಆಸೆ ಶೀಘ್ರವೇ ಕೈಗೂಡಲಿದೆ. ಈಗಾಗಲೇ ಮೊದಲ ಹಂತದ ನೀರೆತ್ತುವ ಯೋಜನೆಗೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಬಂಧಪಟ್ಟ ಸಚಿವರು ಚಾಲನೆ ನೀಡಿದ್ದಾರೆ. ಬೇಲೂರು ಬಳಿ ಸಣ್ಣಪುಟ್ಟ ಅಡಚಣೆಯಿಂದಾಗಿ ನಾಲೆ ಕಾಮಗಾರಿ ಮುಗಿಲು ಕೊಂಚ ಅಡ್ಡಿಯಾಗಿದೆ. ಮುಂದಿನ ವರ್ಷದೊಳಗೆ ಅರಸೀಕೆರೆಗೂ ನೀರು ಹರಿಯಲಿದೆ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಬಸವರಾಜು, ಮಹೇಶಪ್ಪ, ಶಿವಕುಮಾರ್, ದೇವರಾಜು, ಮುಖಂಡರಾದ ಬಾಣಾವರ ಜಯಣ್ಣ, ಸುರೇಶ, ವೀಣಾ ಸುರೇಶ, ಮಹಂತೇಶ, ಶಿವಶಂಕರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುನಿರಾಜು ಹಾಗೂ ಗ್ರಾಮ ಪಂಚಾಯತ್ ಎಇಇ ನಾಗರಾಜು, ಗ್ರಾಮಸ್ಥರು ಹಾಜರಿದ್ದರು.