ಹುಬ್ಬಳ್ಳಿ ಧಾರವಾಡ ಆಗಮಿಸಿದ ಮೋರಿಸ್‌ ಗ್ಯಾರೇಜಸ್‌ನ ಇವಿ ಕಾರು

| Published : Jun 13 2024, 12:47 AM IST / Updated: Jun 13 2024, 12:48 AM IST

ಹುಬ್ಬಳ್ಳಿ ಧಾರವಾಡ ಆಗಮಿಸಿದ ಮೋರಿಸ್‌ ಗ್ಯಾರೇಜಸ್‌ನ ಇವಿ ಕಾರು
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಗ್ರಾಹಕಾರಿಗೆ ಸರ್ವ ರೀತಿಯಿಂದಲೂ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಈ ಇಲೆಕ್ಟ್ರಿಕ್ ಚಾಲಿತ ಕಾರುಗಳು ಜಿಲ್ಲೆಯಾದ್ಯಂತ ಮಾರಾಟವಾಗುತ್ತಿವೆ.

ಹುಬ್ಬಳ್ಳಿ:

ಶತಮಾನದ ಭವ್ಯ ಇತಿಹಾಸ ಹೊಂದಿರುವ ಬ್ರಿಟಿಷ್ ಆಟೋಮೊಬೈಲ್ ಬ್ರ್ಯಾಂಡ್ ಎಂಜಿ(ಮೋರಿಸ್ ಗ್ಯಾರೇಜಸ್) ಇಲೆಕ್ಟ್ರಿಕ್‌ ಕಾರುಗಳಾದ ಕಾಮೆಟ್ ಇವಿ ಮತ್ತು ಝಡ್ ಇವಿ ಡ್ರೈವ್ ಈಗ ಮಹಾನಗರಕ್ಕೆ ಆಗಮಿಸಿವೆ ಎಂದು ಎಂಜಿ ಮೋಟಾರ್ಸ್‌ ವ್ಯಾಪಾರದ ಮುಖ್ಯಸ್ಥ ಮಹಾದೇವ ಬೆಲ್ಲದ ಹೇಳಿದರು.

ರಾಯಪುರ ಬಳಿ ತೆರೆಯಲಾಗಿರುವ ಎಂಜಿ ಮೋಟಾರ್ಸ್‍ನ ನೂತನ ಶೋರೂಂನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಗ್ರಾಹಕಾರಿಗೆ ಸರ್ವ ರೀತಿಯಿಂದಲೂ ಕೈಗೆಟುಕುವ ದರದಲ್ಲಿ ಲಭ್ಯವಾಗುವ ಈ ಇಲೆಕ್ಟ್ರಿಕ್ ಚಾಲಿತ ಕಾರುಗಳು ಜಿಲ್ಲೆಯಾದ್ಯಂತ ಮಾರಾಟವಾಗುತ್ತಿವೆ. ಹುಬ್ಬಳ್ಳಿಯಂತಹ ನಗರಗಳಿಗೆ ಸುಸ್ಥಿರ, ಪ್ರಾಯೋಗಿಕ ಮತ್ತು ವೆಚ್ಚ-ಪರಿಣಾಮಕಾರಿ ಚಲನಶೀಲತೆ ಪರಿಹಾರವಾಗಿ ಎಲೆಕ್ಟ್ರಿಕ್ ವಾಹನಗಳ (ಇವಿ) ಬಗ್ಗೆ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ಎಂಜಿ ಮೋಟಾರ್ ಇಂಡಿಯಾ ತನ್ನ ಪ್ರಮುಖ ಇವಿಯ ಹೊಸ ರೂಪಾಂತರವಾದ ‘ಎಕ್ಸೈಟ್ ಪ್ರೊ'''''''' ನೊಂದಿಗೆ ಇವಿ ಗಳಿಗೆ ತನ್ನ ಬದ್ಧತೆ ಒತ್ತಿಹೇಳುತ್ತದೆ. ಎಂಜಿ ಝಡ್‍ಎಸ್ ಡ್ಯುಯಲ್ ಪೇನ್ ಪನೋರಮಿಕ್ ಸ್ಕೈ ರೂಫ್ ಜತೆಗೆ ₹19.98 ಲಕ್ಷದ ಆಕರ್ಷಕ ಬೆಲೆ ಮತ್ತು ವೇಗದ ಚಾರ್ಜಿಂಗ್ ಆಯ್ಕೆಯೊಂದಿಗೆ ಎಂಜಿ ಕಾಮೆಟ್, ಸ್ಮಾರ್ಟ್ ಇವಿ-ಎಂಜಿ ಕಾಮೆಟ್‍ನ ಶ್ರೇಣಿಯು ₹6.98 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಇದೀಗ ಎಕ್ಸ್‌ಕ್ಲೂಸಿವ್, ಎಕ್ಸ್‌ಕ್ಲೂಸಿವ್ ಎಫ್‍ಸಿ, ಎಕ್ಸೈಟ್, ಎಕ್ಸೈಟ್ ಎಫ್‍ಸಿ ಮತ್ತು ಎಕ್ಸಿಕ್ಯೂಟಿವ್ ಎಂಬ 5 ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಈಗಾಗಲೇ ಮಹಾನಗರ ಸೇರಿ ಧಾರವಾಡ ಜಿಲ್ಲೆಯಲ್ಲಿ 10ರಿಂದ 12 ಇವಿ ಕಾರುಗಳು ಮಾರಾಟವಾಗಿವೆ ಎಂದರು.

ಈ ವೇಳೆ ಶೋರೂಂ ಮ್ಯಾನೇಜರ್ ರಾಘವೇಂದ್ರ ರೇವಣಕರ, ಶೋರೂಂನ ಇವಿ ಎಕ್ಸ್‌ಫರ್ಟ್ ಅಲಿಶಾ ಬರಿದ್ವಾನ್, ಶಿವಕುಮಾರ, ಮಂಜುನಾಥ ದೇಶಪಾಂಡೆ, ನವೀನ ಚಿನ್ನದ ಕೈ ಸೇರಿದಂತೆ ಹಲವರಿದ್ದರು.