ಬೆಂಗಳೂರು ಅಪೋಲೋ ಆಸ್ಪತ್ರೆಯಲ್ಲಿ ಮೋಸೇಸ್‌- 2.0 ತಂತ್ರಜ್ಞಾನ: ಡಾ. ಟಿ ಮನೋಹರ

| Published : Jan 10 2024, 01:46 AM IST / Updated: Jan 10 2024, 02:09 PM IST

ಬೆಂಗಳೂರು ಅಪೋಲೋ ಆಸ್ಪತ್ರೆಯಲ್ಲಿ ಮೋಸೇಸ್‌- 2.0 ತಂತ್ರಜ್ಞಾನ: ಡಾ. ಟಿ ಮನೋಹರ
Share this Article
  • FB
  • TW
  • Linkdin
  • Email

ಸಾರಾಂಶ

ಮೂತ್ರಪಿಂಡದಲ್ಲಿ ಕಲ್ಲು ಹಾಗೂ ಪ್ರಾಸ್ಟೇಟ್‌ನ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಾಧುನಿಕ ಮೋಸೇಸ್ - 2.0 ತಂತ್ರಜ್ಞಾನವನ್ನು ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ಅಳವಡಿಸಿಕೊಂಡಿದ್ದು, ಇದು ದೇಶದಲ್ಲೇ ಮೊದಲ ಹಾಗೂ ವಿಶ್ವದಲ್ಲಿ 3ನೇ ಆಸ್ಪತ್ರೆ ಆಗಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಮೂತ್ರಪಿಂಡದಲ್ಲಿ ಕಲ್ಲು ಹಾಗೂ ಪ್ರಾಸ್ಟೇಟ್‌ನ ಶಸ್ತ್ರಚಿಕಿತ್ಸೆಯಲ್ಲಿ ಅತ್ಯಾಧುನಿಕ ಮೋಸೇಸ್ - 2.0 ತಂತ್ರಜ್ಞಾನವನ್ನು ಬೆಂಗಳೂರಿನ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಯಲ್ಲಿ ಅಳವಡಿಸಿಕೊಂಡಿದ್ದು, ಇದು ದೇಶದಲ್ಲೇ ಮೊದಲ ಹಾಗೂ ವಿಶ್ವದಲ್ಲಿ 3ನೇ ಆಸ್ಪತ್ರೆ ಆಗಿದೆ ಎಂದು ಮೂತ್ರಶಾಸ್ತ್ರಜ್ಞ ಹಾಗೂ ರೋಬೋಟಿಕ್ ಶಸ್ತ್ರಚಿಕಿತ್ಸಕ ಡಾ. ಟಿ. ಮನೋಹರ ಹೇಳಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಿರಂತರ ಸಂಶೋಧನೆಯಿಂದ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ 3 ತಿಂಗಳ ಹಿಂದೆಯೇ ಈ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. 

ಮೋಸೆಸ್ 2.0 ಎಂಬುದು ಹೋಲ್ಮಿಯಮ್ ಲೇಸರ್ ತಂತ್ರಜ್ಞಾನದಿಂದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವ, ನೋವು ರಹಿತ ಶಸ್ತ್ರಚಿಕಿತ್ಸೆಗೆ ನೇರವಾಗುತ್ತದೆ. ಅತ್ಯಂತ ಕಡಿಮೆ ಅವಧಿ ಮತ್ತು ನಿಖರ ಶಸ್ತ್ರಚಿಕಿತ್ಸೆ ನೇರವೇರಿಸಬಹುದಾಗಿದೆ ಎಂದರು.

ಈಗಾಗಲೇ ಆಸ್ಪತ್ರೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಈ ಸೇವೆ ಪ್ರಾರಂಭ ಮಾಡಿದ್ದು, 350 ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೂತ್ರಪಿಂಡದಲ್ಲಿ ಯಾವುದೇ ಗಾತ್ರದ ಕಲ್ಲು ಹಾಗೂ ಪ್ರಾಸ್ಟೇಟ್‌ ಅನ್ನು ತೆಗೆಯುವ ಸಾಮರ್ಥ್ಯ ಮೋಸೆಸ್ 2.0 ತಂತ್ರಜ್ಞಾನ ಹೊಂದಿದೆ ಎಂದರು.

ಇದು ವರೆಗೆ 758 ಪ್ರಾಸ್ಟೇಟ್ ಹಾಗೂ 7.6 ಎಂಎಂ ಕಲ್ಲನ್ನು ಪುಡಿ ಮಾಡಿ ಹೊರ ತೆಗೆಯಲಾಗಿದೆ. ಈ ತಂತ್ರಜ್ಞಾನದಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಶೇ. 98 ರಷ್ಟು ಯಶಸ್ವಿ ಶಸ್ತ್ರಚಿಕಿತ್ಸೆ ಸರಾಸರಿ ಫಲಿತಾಂಶವಿದೆ. ಇದನ್ನು ಜನರಿಗೆ ಕೈಗೆಟುಕುವ ದರದಲ್ಲಿ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ಚಿಕಿತ್ಸೆಗೆ ಒಳಪಟ್ಟ ರೋಗಿಗಳು ಒಂದೆರಡು ದಿನಗಳಲ್ಲಿ ಪುನಃ ಎಂದಿನಂತೆ ಸಹಜ ಜೀವನ ನಡೆಸಬಹುದು. ಈ ತಂತ್ರಜ್ಞಾನ ತಿಳಿವಳಿಕೆಗೆ ಹೆಚ್ಚಿಗೆ ಕೌಶಲ್ಯ ಅಗತ್ಯವಿದ್ದು, ಇದಕ್ಕಾಗಿ ಐದು ವರ್ಷದಿಂದ ನಿರಂತರವಾಗಿ ಅಧ್ಯಯನ ಮಾಡಿದ್ದೇನೆ ಎಂದ ಹೇಳಿಕೊಂಡರು.