ತಾಲೂಕಿನಲ್ಲಿ ಬಹುತೇಕ ರಸ್ತೆ ನಿರ್ಮಾಣ ಪೂರ್ಣ

| Published : Jan 30 2025, 12:30 AM IST

ಸಾರಾಂಶ

ತಾಲೂಕಿನಲ್ಲಿ ಪ್ರತಿಯೊಂದು ಬಹುತೇಕ ರಸ್ತೆಗಳನ್ನು ನಿರ್ಮಾಣವಾಗಿದ್ದು ಹಾಗೂ ಸಣ್ಣಪುಟ್ಟ ಕೆಲಸಗಳು ಇದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನಲ್ಲಿ ಪ್ರತಿಯೊಂದು ಬಹುತೇಕ ರಸ್ತೆಗಳನ್ನು ನಿರ್ಮಾಣವಾಗಿದ್ದು ಹಾಗೂ ಸಣ್ಣಪುಟ್ಟ ಕೆಲಸಗಳು ಇದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ ಎಂದರು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.ಗುಬ್ಬಿ ತಾಲೂಕಿನ ಸೋಮಲಾಪುರದಲ್ಲಿ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸತತ ಐದನೇ ಭಾರಿಗೆ ಶಾಸಕರನ್ನಾಗಿ ಜನ ಆಶೀರ್ವಾದ ಮಾಡಿದ್ದು ಜನಪರ ಕೆಲಸಗಳನ್ನು ಮಾಡುತ್ತೇನೆ. ಸಮಾಜದಲ್ಲಿ ಶೋಷಿತ ವರ್ಗದ ಎಲ್ಲ ವರ್ಗದ ಜನರ ಮನಸ್ಸನ್ನು ಗೆಲ್ಲುವುದು ಕಷ್ಟ ಆದರೆ ಸತತ ಐದನೇ ಭಾರಿಗೆ ಮತ್ತೆ ಈ ಕ್ಷೇತ್ರದ ಜನ ಶಾಸಕರಾಗಿ ಆಶೀರ್ವಾದ ಮಾಡಿದ್ದು ಪ್ರತಿಯೊಬ್ಬ ರೈತರಿಗೂ ಸರಕಾರ ಯೋಜನೆಗಳು ಸಿಗಬೇಕು. ಸೋಮಲಾಪುರ ಗ್ರಾಮಕ್ಕೆ ಸಿಸಿ ರಸ್ತೆಗೆ ಶೀಘ್ರದಲ್ಲಿ ಪೂಜೆ ಮಾಡುತ್ತೇವೆ. ಶುದ್ದ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು. ಜೊತೆಗೆ ದೇವಾಲಯ ನಿರ್ಮಾಣಕ್ಕೆ ಅನುದಾನವನ್ನ ನೀಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಯ್ಯ , ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಎನ್ ಕೋಟೆ ಮೋಹನ್ ,ಸಿದ್ದರಾಮಣ್ಣ ,ಕಾಂತರಾಜು , ಸಿದ್ದಗಂಗಯ್ಯ , ರುಕ್ಷ್ಮಿಣಿ ಗೋವಿಂದರಾಜು ,ಪಟ್ಟಣ ಪಂಚಾಯಿತಿ ಸದಸ್ಯ ಮೋಹನ್ ಕುಮಾರ್ , ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾರಾಜು ಮುಖಂಡರಾದ ಸುಂದರ್ , ಸಿಬೇಗೌಡ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.