ಸಾರಾಂಶ
ಸಿಬಿಎಸ್ಇ (ಡಿಸ್ಟ್ರಿಕ್ ಹಬ್) ಶಾಲೆಗಳ ಹಾವೇರಿ ಬಾಲಕಿಯರ ವಿಭಾಗದ ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕ್ರೀಡಾಪಟುಗಳು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಬ್ಯಾಡಗಿ: ಸಿಬಿಎಸ್ಇ (ಡಿಸ್ಟ್ರಿಕ್ ಹಬ್) ಶಾಲೆಗಳ ಹಾವೇರಿ ಬಾಲಕಿಯರ ವಿಭಾಗದ ಜಿಲ್ಲಾ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕ್ರೀಡಾಪಟುಗಳು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ರಾಣೆಬೆನ್ನೂರಿನ ಕರೂರು ಗ್ರಾಮದ ಎಜ್ಯೂ ಏಷ್ಯಾ ಶಾಲೆಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ನಿಟ್ಟೂರು ಸೆಂಟ್ರಲ್ ಸ್ಕೂಲ್ ತಂಡವನ್ನು 33 ಅಂಕಗಳಿಂದ (42-09) ಬಹುತೇಕ ಏಕಪಕ್ಷೀಯವಾಗಿದ್ದ ಪಂದ್ಯದ ಮೊದಲಾರ್ಧದಲ್ಲಿ 16 (19-03) ಅಂಕಗಳ ಮುನ್ನಡೆ ಸಾಧಿಸಿತ್ತು. ತಂಡದ ಪ್ರಮುಖ ಆಟಗಾರ್ತಿ ನಿವೇದಾ ಜಲಾಟಿಗೌಡ್ರ ಕರಾರುವಕ್ಕಾದ ದಾಳಿಯ ನೆರವಿನಿಂದ ಬಳ್ಳಾರಿ ರುದ್ರಪ್ಪ ಶಾಲಾ ತಂಡವು ಎದುರಾಳಿ ತಂಡದ ಆಟಗಾರ್ತಿಯರನ್ನು ಮಣಿಸುವಲ್ಲಿ ಯಶಸ್ವಿಯಾದರು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ 22 ಅಂಕಗಳಿಂದ (37-15) ರಾಣೆಬೆನ್ನೂರಿನ ರೈನ್ ಬೋ ತಂಡವನ್ನು ಮಣಿಸಿತ್ತು, ಪಂದ್ಯಾಳಿಯಲ್ಲಿ ಆಡಿದ ಯಾವುದೇ ಪಂದ್ಯವನ್ನು ಸೋಲದೇ ಅಜೇಯರಾಗಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು, ವಿಜೇತ ಕ್ರೀಡಾಪಟುಗಳಿಗೆ ದೈಹಿಕ ನಿರ್ದೇಶಕ ನಿಂಗಪ್ಪ ಮಡಿವಾಳರ ತರಬೇತಿ ನೀಡಿದ್ದರು.
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪ್ರಾಚಾರ್ಯರಾದ ಶಾರದಾ ಬಳ್ಳಾರಿ ಮಾರ್ಗರೇಟ ರಾಣಿ ಸೇರಿದಂತೆ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.ಫೊಟೋ-06ಬಿವೈಡಿ6-ಬ್ಯಾಡಗಿ ಟ್ರೋಫಿಯೊಂದಿಗೆ ಗೆಲುವಿನ ನಗೆ ಬೀರಿದ ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕ್ರೀಡಾಪಟುಗಳು.