ತನ್ನ ಮೂವರು ಹೆಣ್ಮಕ್ಕಳಿಗೆ ವಿಷದ ಮಾತ್ರೆ ಉಣ್ಣಿಸಿ, ತಾನೂ ಸಹ ವಿಷ ಸೇವಿಸಿದ್ದ ತಾಯಿ ಸೇರಿದಂತೆ ಒಂದು ಮಗು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಇನ್ನುಳಿದ ಇಬ್ಬರು ಮಕ್ಕಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಧಾರವಾಡ:
ತನ್ನ ಮೂವರು ಹೆಣ್ಮಕ್ಕಳಿಗೆ ವಿಷದ ಮಾತ್ರೆ ಉಣ್ಣಿಸಿ, ತಾನೂ ಸಹ ವಿಷ ಸೇವಿಸಿದ್ದ ತಾಯಿ ಸೇರಿದಂತೆ ಒಂದು ಮಗು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ಇನ್ನುಳಿದ ಇಬ್ಬರು ಮಕ್ಕಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.ಸಮೀಪದ ಕರಡಿಗುಡ್ಡ ಗ್ರಾಮದಲ್ಲಿ ಶನಿವಾರ ನಡೆದ ಈ ದುರ್ಘಟನೆಯಲ್ಲಿ ತಾಯಿ ಸವಿತಾ ಮಲ್ಲಿಕಾರ್ಜುನ ಕುರಗುಂದ (38) ಹಾಗೂ ಎಂಟು ವರ್ಷದ ಗದಿಗೆವ್ವ ಕುರಗುಂದ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಆರು ವರ್ಷದ ಭಾಗ್ಯಶ್ರೀ ಹಾಗೂ ಎರಡು ವರ್ಷದ ಹರ್ಷ ಎಂಬ ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವು -ಬದುಕಿನ ಮಧ್ಯೆ ಹೋರಾಡುತ್ತಿವೆ.
ಆತ್ಮಹತ್ಯೆ ಮಾಡಿಕೊಂಡಿರುವ ಸವಿತಾ ಅವರು ಬೇರೆ ಬೇರೆ ಕಾರಣಕ್ಕಾಗಿ ವಿವಿಧ ಸಂಘ ಹಾಗೂ ಖಾಸಗಿಯಾಗಿ ಕೈಗಡವಾಗಿ ₹ 2.5 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಮಾನಕ್ಕೆ ಅಂಜಿ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಪ್ರಾಥಮಿಕ ಮಾಹಿತಿ ಇದೆ.ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಮನಕಲಕುವ ಘಟನೆ ಕಣ್ಣಾರೆ ಕಂಡ ಗ್ರಾಮಸ್ಥರು ತಾನು ಮಾಡಿದ ತಪ್ಪಿಗೆ ಮಕ್ಕಳಿಗೆ ವಿಷ ಉಣ್ಣಿಸಿ ಕೊಲ್ಲುವ ಶಿಕ್ಷೆ ಕೊಡಬಾರದಿತ್ತು ಎಂದು ತಾಯಿ ಸವಿತಾಳಿಗೆ ಹಿಡಿಶಾಪ ಹಾಕುತ್ತಿದ್ದರು.