ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಅಂಗವಾಗಿ ಶುಕ್ರವಾರ ಅಧಿದೇವತೆ ಶಾರದೆಗೆ ವೀಣಾಪಾಣಿಯಲಂಕಾರ ಮಾಡಲಾಗಿತ್ತು. ಮಹಾಕಾಳಿ,ಮಹಾಲಕ್ಷ್ಮಿಯಾಗಿ ಅನುಗ್ರಹಿಸಿದ ಶಾರದೆ ಮಹಾಸರಸ್ವತಿಯಾಗಿ ಕೈಯಲ್ಲಿ ವೀಣೆ ಹಿಡಿದು ಜಗತ್ತಿಗೆ ಜ್ಞಾನ ದೇವತೆಯಂತೆ ಭಕ್ತರನ್ನು ಅನುಗ್ರಹಿಸಿದಳು.
ತುಂಗೆಗೆ ಜಗದ್ಗುರುಗಳಿಂದ ಗಂಗಾಪೂಜೆ.
ಶೃಂಗೇರಿ: ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಅಂಗವಾಗಿ ಶುಕ್ರವಾರ ಅಧಿದೇವತೆ ಶಾರದೆಗೆ ವೀಣಾಪಾಣಿಯಲಂಕಾರ ಮಾಡಲಾಗಿತ್ತು.ಮಹಾಕಾಳಿ,ಮಹಾಲಕ್ಷ್ಮಿಯಾಗಿ ಅನುಗ್ರಹಿಸಿದ ಶಾರದೆ ಮಹಾಸರಸ್ವತಿಯಾಗಿ ಕೈಯಲ್ಲಿ ವೀಣೆ ಹಿಡಿದು ಜಗತ್ತಿಗೆ ಜ್ಞಾನ ದೇವತೆಯಂತೆ ಭಕ್ತರನ್ನು ಅನುಗ್ರಹಿಸಿದಳು. ನವರಾತ್ರಿ ಆರಂಭದಿಂದ ಮಳೆರಾಯ ಧಾರ್ಮಿಕ ಉತ್ಸವಗಳಿಂದ ದೂರ ಉಳಿದಿದ್ದರೂ ಶುಕ್ರವಾರ ಬೆಳಗಿನ ಜಾವ ಗುಡುಗು ಸಿಡಿಲು ಸಹಿತ ನಾಲ್ಕೈದು ಗಂಟೆಗಳ ಕಾಲ ಅಬ್ಬರಿಸಿದ. ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ಭಾರಿ ಮಳೆ ಸುರಿಯಿತು. ಮಧ್ಯಾಹ್ನದ ವೇಳೆ ಬಿಸಿಲು ಮೋಡ ವಾತವರಣವಿತ್ತು.
ಶ್ರೀ ಶಾರದೆ ಸನ್ನಿದಿಯಲ್ಲಿ ಬೆಳಿಗ್ಗೆಯಿಂದಲೇ ನವರಾತ್ರಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಶತಚಂಡೀಯಾಗದ ಪ್ರಯುಕ್ತ ಶಾಲಾಪ್ರವೇಶ, ಪುರಶ್ಚರಣಾರಂಭ ನಡೆಯಿತು. ಜಗದ್ಗುರುಗಳು ಶ್ರೀ ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಮೂಲನಕ್ಷತ್ರ ದಿನವಾಗಿದ್ದರಿಂದ ಸರಸ್ವತಿ ಪ್ರತಿಷ್ಠೆ ನಡೆಯಿತು. ದರ್ಬಾರಿನ ನಂತರ ಸ್ವರ್ಣ ಸಿಂಹಾಸನಕ್ಕೆ ಪೂಜೆ ನೆರವೇರಿತು.ಶ್ರೀಮಠದ ಅಕ್ಷರಭ್ಯಾಸ ಮಂಟಪದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. ಶಾರದಾ ಪ್ರತಿಷ್ಠೆ, ಪುಸ್ತಕ ಭಂಡಾರಕ್ಕೆ ವಿಶೇಷ ಪೂಜೆ ನೆರವೇರಿತು. ಶ್ರೀ ಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೈದರಾಬಾದಿನ ವಿಧುಷಿ ಎಮಾನಿ ಲಲಿತಾ ಕೃಷ್ಣ ತಂಡದವರಿಂದ ವೀಣಾವಾದನ ನಡೆಯಿತು.
ತುಂಗಾನದಿಯಲ್ಲಿ ಗಂಗಾಪೂಜೆ: ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ತುಂಗಾ ನದಿಯಲ್ಲಿ ನವರಾತ್ರಿ ಅಂಗವಾಗಿ ಗಂಗಾಪೂಜೆ ನೆರವೇರಿಸಿದರು. ಶ್ರೀ ಮಠದ ಆವರಣದ ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ,ಸಹಿತ ಎಲ್ಲಾ ದೇವಾಲಯಗಳಲ್ಲಿ ನವರಾತ್ರಿಯ ಪೂಜೆ ನಡೆಯಿತು.ರಾಜಬೀದಿ ಉತ್ಸವದಲ್ಲಿ ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ಶ್ರೀ ಮಠದ ಅಶ್ವ,ಗಜಪಡೆಗಳು, ಛತ್ರಿ ಚಾಮರ,ಕಲಾ ತಂಡಗಳು ವಿಶೇಷ ಮೆರಗು ನೀಡಿತು.ಶನಿವಾರ ಶಾರದೆಗೆ ಇಂದ್ರಾಣಿ ಅಲಂಕಾರ ನಡೆಯಲಿದೆ.
16 ಶ್ರೀ ಚಿತ್ರ 4-ಶೃಂಗೇರಿ ಶಾರದೆ ಶುಕ್ರವಾರ ವೀಣಾಪಾಣಿನಿಯಲಂಕಾರದಲ್ಲಿ ಭಕ್ತರನ್ನು ಅನುಗ್ರಹಿಸಿದಳು.
16 ಶ್ರೀ ಚಿತ್ರ 5-ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ತುಂಗಾ ನದಿಯಲ್ಲಿ ಗಂಗಾಪೂಜೆ ನೆರವೇರಿಸುತ್ತಿರುವುದು.