ಹುಣಸೂರಿನಲ್ಲಿ ತಾಯಿ ಕನ್ನಂಬಾಡಮ್ಮನವರ ನೂತನ ದೇವಾಲಯ ಉದ್ಘಾಟನೆ

| Published : Nov 17 2024, 01:15 AM IST

ಹುಣಸೂರಿನಲ್ಲಿ ತಾಯಿ ಕನ್ನಂಬಾಡಮ್ಮನವರ ನೂತನ ದೇವಾಲಯ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಂಬಾಡಮ್ಮ ತಾಯಿಗೆ ಫಲಪಂಚಾಮೃತ ಅಭಿಷೇಕ, ಮಹಾನೈವೇದ್ಯ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಸಂಪನ್ನ ಗೊಂಡಿತು.

ಕನ್ನಡಪ್ರಭ ವಾರ್ತೆ ಹುಣಸೂರು

ಪಟ್ಟಮದ ಚಿಕ್ಕ ಹುಣಸೂರು ಬಡಾವಣೆಯಲ್ಲಿ ತಾಯಿ ಕನ್ನಂಬಾಡಮ್ಮ ನವರ ನೂತನ ದೇವಸ್ಥಾನ ಉದ್ಘಾಟನೆಯಾಯಿತು. ತಾಯಿಯ ಪ್ರತಿಷ್ಠಾಪನೆ, ಮಹಾಕುಂಭಾಭಿಷೇಕ ನ. 12ರಂದು ಆರಂಭಗೊಂಡು, ಎಲ್ಲ ಪೂಜಾ ಕೈಂಕಾರ್ಯಗಳು ಗುರುವಾರ ಪೂರ್ಣಗೊಂಡಿತು. ಕನ್ನಂಬಾಡಮ್ಮ ತಾಯಿಗೆ ಫಲಪಂಚಾಮೃತ ಅಭಿಷೇಕ, ಮಹಾನೈವೇದ್ಯ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಸಂಪನ್ನ ಗೊಂಡಿತು. ಚಿಕ್ಕಹುಣಸೂರಿನ ನಿವಾಸಿಗಳು, ಭಕ್ತಾದಿಗಳು ಅಮ್ಮನವರ ಕೃಪೆಗೆ ಪಾತ್ರರಾದರು. ಕೃಷ್ಣಸ್ವಾಮಿ ಆಚಾರ್ಯ, ವೆಂಕಟೇಶ್ ಭಟ್ಟಾಚಾರ್ಯ ಇವರ ನೇತೃತ್ವದ ತಂಡ ಪೂಜಾ ಕೈಂಕಾರ್ಯಗಳು ನೆರವೇರಿಸಿತು. ಗ್ರಾಮದ ಪರವಾಗಿ ವಿವಿಧ ಕೋಮಿನ ಮೂವರು ದಂಪತಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.