ಸಾರಾಂಶ
ಗುರು ಬಸವಣ್ಣನವರು ಕೊಟ್ಟಂತ ಮಹಿಳಾ ಸ್ವಾತಂತ್ರ‍್ಯದ ಫಲವಾಗಿ ಜಗತ್ತಿನ ಯಾವ ಧರ್ಮದಲ್ಲೂ ಮಹಿಳೆಯರಿಗೆ ಸಿಗದ ಗುರುವಿನ ಪಟ್ಟ ಲಿಂಗಾಯತ ಧರ್ಮದಲ್ಲಿ ಸಿಕ್ಕಿದೆ.
ಯಲಬುರ್ಗಾ:
ಬಸವತತ್ವ, ವಚನ ಸಾಹಿತ್ಯ, ಲಿಂಗಾಯತ ಧರ್ಮದ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟದ್ದು ಡಾ. ಮಾತೆಮಹಾದೇವಿ ಎಂದು ಮನಗುಳಿಯ ವಿರಕ್ತ ಮಠದ ವಿರತೀಶಾನಂದ ಸ್ವಾಮೀಜಿ ಹೇಳಿದರು.ತಾಲೂಕಿನ ಗುಳೆ ಗ್ರಾಮದ ವಿಶ್ವಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಮತ್ತು ಅಕ್ಕನಾಗಲಾಂಬಿಕ ಮಹಿಳಾ ಗಣ ಹಾಗೂ ರಾಷ್ಟ್ರೀಯ ಬಸವ ದಳ ಯುವ ಘಟಕದ ವತಿಯಿಂದ ಆಯೋಜಿಸಿದ್ದ ಬಸವ ಧರ್ಮಪೀಠದ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆ ಮಹಾದೇವಿ ತಾಯಿಯವರ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಸವರಾಜ ಹೂಗಾರ ಪ್ರಾಸ್ತಾವಿಕ ಮಾತನಾಡಿ, ಗುರು ಬಸವಣ್ಣನವರು ಕೊಟ್ಟಂತ ಮಹಿಳಾ ಸ್ವಾತಂತ್ರ‍್ಯದ ಫಲವಾಗಿ ಜಗತ್ತಿನ ಯಾವ ಧರ್ಮದಲ್ಲೂ ಮಹಿಳೆಯರಿಗೆ ಸಿಗದ ಗುರುವಿನ ಪಟ್ಟ ಲಿಂಗಾಯತ ಧರ್ಮದಲ್ಲಿ ಸಿಕ್ಕಿದೆ. ಅದಕ್ಕೆ ಮೊಟ್ಟ ಮೊದಲು ಖಾವಿ ಧರಿಸಿ ಬಸವ ಧರ್ಮಪೀಠವನ್ನೇರಿದ ಪ್ರಥಮ ಮಹಿಳೆ ಮಾತೆ ಮಹಾದೇವಿ ತಾಯಿಯವರು ಎಂದರು.೧೯೭೦ರಲ್ಲಿ ಸ್ಥಾಪಿತವಾದ ಅಕ್ಕ ಮಹಾದೇವಿ ಅನುಭವ ಪೀಠ ವಿಶ್ವದ ಮೊಟ್ಟ ಮೊದಲ ಮಹಿಳಾ ಜಗದ್ಗುರು ಪೀಠವಾಗಿದೆ. ಇದರ ಪೀಠಾಧ್ಯಕ್ಷರಾಗಿ ಮಾತೆ ಮಹಾದೇವಿ ಅವರು ವಿಶ್ವದ ಮೊದಲ ಮಹಿಳಾ ಜಂಗಮರೆನಿಸಿದ್ದಾರೆ ಎಂದು ಹೇಳಿದರು.
ನಿವೃತ್ತಿ ಪಿಎಸ್‌ಐ ಬಸವನಗೌಡ ಪೊಲೀಸ್‌ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವದಳ ಮತ್ತು ಅಕ್ಕನಾಗಲಾಂಬಿಕ ಮಹಿಳಾ ಗಣ ಹಾಗೂ ರಾಷ್ಟ್ರೀಯ ಬಸವ ದಳ ಯುವ ಘಟಕದ ಅನೇಕ ಶರಣರು, ಶಿವಶರಣೆಯರು ಇದ್ದರು.