ಸಾರಾಂಶ
ಕೊಪ್ಪಳ: ಹಲವಾರು ಹಿರಿಯರು ಹಾಗೂ ರಾಜಕೀಯ ಘಟಾನುಘಟಿಗಳಿಗೆ ಜೆಡಿಎಸ್ ಮಾತೃ ಪಕ್ಷವಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿದರು.
ನಗರದಲ್ಲಿ ಜರುಗಿದ ಕರ್ನಾಟಕ ಪ್ರದೇಶ ಜನತಾದಳದ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಯ ಕುರಿತು ಪ್ರಮುಖರೊಂದಿಗೆ ಚರ್ಚಿಸಿ ಇತಿಹಾಸ ಅವಲೋಕಿಸಿದಾಗ ಜೆಡಿಎಸ್ ಜಿಲ್ಲೆಯಾದ್ಯಂತ ಅನೇಕ ಘಟಾನುಘಟಿ ನಾಯಕರನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದೆ. ಈ ಹಿಂದೆಯೇ ನಮ್ಮ ಪಕ್ಷದಿಂದ ಅನೇಕ ನಾಯಕರು ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ಪ್ರತಿ ಬೂತ್ ನಲ್ಲೂ ಕಾರ್ಯಕರ್ತರಿದ್ದಾರೆ. ಅವರೆಲ್ಲರನ್ನು ಗುರುತಿಸಿ ಮತ್ತೆ ಕಾರ್ಯ ಪ್ರವೃತ್ತರನ್ನಾಗಿ ಮಾಡುವಂತೆ ನಾವೆಲ್ಲ ಶ್ರಮಿಸಬೇಕಾಗಿದೆ ಎಂದರು.ದೇಶಕ್ಕೆ ಈ ರಾಜ್ಯದಿಂದ ಪ್ರಧಾನಮಂತ್ರಿ ಕೊಟ್ಟಂತಹ ಪಕ್ಷ ನಮ್ಮದು. ರೈತ ಚಿಂತನೆ, ಜನಪರ ಹೋರಾಟ, ಸಾಮಾಜಿಕ ಕಳಕಳಿ ಹೊಂದಿರುವಂತಹ ಏಕೈಕ ಪ್ರಾದೇಶಿಕ ಪಕ್ಷ ಎಂದರು.ಜೆಡಿಎಸ್ ಬಿಜೆಪಿ ಸಹಯೋಗದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದಲೂ ಸಂಸದರನ್ನು ಗೆಲ್ಲಿಸಿ ಕಳಿಸುವ ನಿಟ್ಟಿನಲ್ಲಿ ಮೋದಿಜಿ ಕೈ ಬಲಪಡಿಸೋಣ. ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಂಘಟನೆ ಗಟ್ಟಿಗೊಳಿಸೋಣ ಎಂದರು.ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಂತ ಉತ್ಸಾಹಿ ಯುವ ಪಡೆ ಹಾಗೂ ಸಮರ್ಥ ನಾಯಕತ್ವ ದೊರೆತಿದೆ. ಈ ಎಲ್ಲ ನಾಯಕರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸಿ ರಾಜ್ಯ ಮಟ್ಟದಲ್ಲಿ ಕೊಪ್ಪಳವನ್ನು ಗುರುತಿಸುವಂತೆ ಮಾಡುವುದರ ಜತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಿಂದ ಸಿ.ವಿ. ಚಂದ್ರಶೇಖರ್ ಅವರನ್ನು ಸಂಸದರಾಗಿ ನೋಡುವ ಸೌಭಾಗ್ಯ ನಮ್ಮದಾಗಲಿ ಎಂದರು.
ಈ ವೇಳೆ ನೂತನ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ನೂತನ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಅವರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ದೇವಪ್ಪ ಅಳವಂಡಿ, ಈಶಪ್ಪ ಮಾದಿನೂರ, ಮಂಜುನಾಥ ಸೊರಟೂರ್, ವಸಂತಕುಮಾರ ಹಟ್ಟಿ, ಮಲ್ಲನಗೌಡ ಕೋನನಗೌಡ್ರು, ಗೋವಿಂದ ಗೌಡ ಮಾಲಿಪಾಟೀಲ್, ಮೌನೇಶ್ ವಡ್ಡಟ್ಟಿ, ಚೆನ್ನಪ್ಪ ಕೋಟ್ಯಾಳ, ಶರಣಪ್ಪ ಯಲಬುರ್ಗಿ, ಸೈಯದ್ ಮೊಹಮ್ಮದ್ ಹುಸೇನ್, ಶರಣಪ್ಪ ಜಡಿ, ಯಮನಪ್ಪ ಕಟಗಿ, ಸಂಗಮೇಶ ಡಂಬಳ ಇದ್ದರು.