ಸಾರಾಂಶ
ತಾಯಿ ಎದೆ ಹಾಲು ಪರಿಶುದ್ಧ ಹಾಗೂ ರೋಗಾಣು ರಹಿತವಾಗಿದೆ. ಮಗುವಿಗೆ ಯಾವುದೇ ರೋಗ ಬರದಂತೆ ಅನೇಕ ಸೋಂಕುಗಳಿಂದ ವಿಶೇಷವಾಗಿ ನ್ಯೂಮೋನಿಯಾ, ಅತಿಸಾರ ಭೇದಿಯಿಂದ ರಕ್ಷಿಸುತ್ತದೆ. ಜೊತೆಗೆ ತಾಯಿ ಮತ್ತು ಮಗುವಿನ ಮಧ್ಯ ಪ್ರೀತಿ, ಬಾಂಧವ್ಯ, ಮಮತೆ, ವಾತ್ಸಲ್ಯ ಹಾಗೂ ಕರುಣೆಗಳನ್ನು ಬೆಸೆಯುತ್ತದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಯಿ ಎದೆ ಹಾಲು ಮಗುವಿಗೆ ಅಮೃತವಿದ್ದಂತೆ. ತಾಯಂದಿರರು ಹೆರಿಗೆ ಆದ ಒಂದು ಗಂಟೆಯೊಗೆ ಮಗುವಿಗೆ ಸ್ತನ್ಯಪಾನ ಮಾಡಿಸಬೇಕು ಎಂದು ಮೈಸೂರು ವಿಭಾಗೀಯ ಸಹ ನಿರ್ದೇಶಕ ಡಾ.ಮಲ್ಲಿಕಾ ಸಲಹೆ ನೀಡಿದರು.ತಾಲೂಕಿನ ಕೊಡಿಯಾಲ ಆಯುಷ್ಮಾನ ಆರೋಗ್ಯ ಮಂದಿರದಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಪೌಷ್ಟಿಕ ಆಹಾರ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಯಿ ಎದೆ ಹಾಲು ಪರಿಶುದ್ಧ ಹಾಗೂ ರೋಗಾಣು ರಹಿತವಾಗಿದೆ. ಮಗುವಿಗೆ ಯಾವುದೇ ರೋಗ ಬರದಂತೆ ಅನೇಕ ಸೋಂಕುಗಳಿಂದ ವಿಶೇಷವಾಗಿ ನ್ಯೂಮೋನಿಯಾ, ಅತಿಸಾರ ಭೇದಿಯಿಂದ ರಕ್ಷಿಸುತ್ತದೆ. ಜೊತೆಗೆ ತಾಯಿ ಮತ್ತು ಮಗುವಿನ ಮಧ್ಯ ಪ್ರೀತಿ, ಬಾಂಧವ್ಯ, ಮಮತೆ, ವಾತ್ಸಲ್ಯ ಹಾಗೂ ಕರುಣೆಗಳನ್ನು ಬೆಸೆಯುತ್ತದೆ. ಆದ್ದರಿಂದ ತಾಯಂದಿರರು ಹೆರಿಗೆ ಆದ ಒಂದು ಗಂಟೆ ಒಳಗಾಗಿ ತಪ್ಪದೇ ಸ್ತನ್ಯಪಾನ ಮಾಡಿಸಬೇಕು ಎಂದು ಕಿವಿಮಾತು ಹೇಳಿದರು.ಸಭೆಯಲ್ಲಿ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ ಏರ್ಪಡಿಸಿ ಪೌಷ್ಟಿಕ ಆಹಾರದ ಮಹತ್ವ ಕುರಿತು ತಾಯಂದಿರಿಗೆ ಮಾಹಿತಿ ನೀಡಲಾಯಿತು.
ಸಿಡಿಪಿಒ ಧನಲಕ್ಷ್ಮೀ, ಮೈಸೂರು ವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ, ಜಿಲ್ಲಾ ಸಲಹೆಗಾರ ತಿಮ್ಮರಾಜು, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಜಿ.ಮೋಹನ್, ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ಟಿ. ಮಂಜುನಾಥ, ವೈದ್ಯಾಧಿಕಾರಿ ಡಾ.ಹೇಮಲತಾ, ಅಂಗನವಾಡಿ ಮೇಲ್ವಿಚಾರಕಿ ಆಶಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪುಷ್ಪಾ, ಆರೋಗ್ಯ ನೀರಿಕ್ಷಣಾಧಿಕಾರಿ ಶರಣಪ್ಪ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮೂದಾಯ ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಪೋಷಕರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.