ಸುರಿಯುವ ಮಳೆಯಲ್ಲೇ ಮಾತೆಯರ ಪಾದಪೂಜೆ

| Published : May 16 2024, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಸುರಿಯುತ್ತಿದ್ದ ಮಳೆಯಲ್ಲಿಯೇ ತಾಯಂದಿರ ಪಾದ ಪೂಜೆ ಮಾಡಿ ಸ್ಥಳೀಯ ಕುಬಸದ ಗಲ್ಲಿ ಮಕ್ಕಳು ಅರ್ಥಪೂರ್ಣವಾಗಿ ವಿಶ್ವ ತಾಯಂದಿರ ದಿನ ಆಚರಿಸಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ ಸುರಿಯುತ್ತಿದ್ದ ಮಳೆಯಲ್ಲಿಯೇ ತಾಯಂದಿರ ಪಾದ ಪೂಜೆ ಮಾಡಿ ಸ್ಥಳೀಯ ಕುಬಸದ ಗಲ್ಲಿ ಮಕ್ಕಳು ಅರ್ಥಪೂರ್ಣವಾಗಿ ವಿಶ್ವ ತಾಯಂದಿರ ದಿನ ಆಚರಿಸಿದರು.

ಕುಬಸದ ಗಲ್ಲಿಯಲ್ಲಿ ಶ್ರೀ ವಿದ್ಯಾಶ್ರೀ ಮಹಿಳಾ ಸ್ವಸಹಾಯ ಸಂಘದ ವತಿಯಿಂದ ಈಚೆಗೆ ಆಯೋಜಿಸಿದ್ದ ಮಾತೃ ವಂದನಾ ಕಾರ್ಯಕ್ರಮದಲ್ಲಿ ಮಕ್ಕಳು ತಾಯಂದಿರನ್ನು ಕುರ್ಚಿಯ ಮೇಲೆ ಕೂಡ್ರಿಸಿ ತಾಯಂದಿರ ಪಾದಗಳಿಗೆ ವಿಭೂತಿ, ಕುಂಕುಮ ಹಚ್ಚಿ, ಊದುಬತ್ತಿ ಬೆಳಗಿ ಪಾದಗಳಿಗೆ ಹಣೆ ಹಚ್ಚಿ ನಮಿಸಿದರು. ಇದೇ ವೇಳೆಗೆ ಇದಕ್ಕೆ ಸಂತುಷ್ಟನಾದ ವರುಣದೇವ ಜೋರಾಗಿ ಮಳೆ ಸುರಿದನು, ಮಳೆಯಲ್ಲಿ ನೆನೆಯಿತ್ತಿದ್ದರೂ ಮಕ್ಕಳು ಹಿಂಜರಿಯದೆ ಮತ್ತಷ್ಟು ಉತ್ಸುಕರಾಗಿ ಪಾದಪೂಜೆ ಮಾಡಿ ಕೃತಾರ್ಥರಾದರು. ಮುದ್ದು ಮಕ್ಕಳ ಮಾತೃ ಭಕ್ತಿ ಹಾಗೂ ವರುಣ ದೇವನ ಮಳೆಯ ಸಿಂಚನದಿಂದ ಮೂಕವಿಸ್ಮಿತರಾದ ತಾಯಂದಿರು ಹೃದಯ ತುಂಬಿ ಹಾರೈಸುವ ಮೂಲಕ ಕಾರ್ಯಕ್ರಮ ಎಲ್ಲರ ಶ್ಲಾಘನೆಗೆ ಕಾರಣವಾಯಿತು.

ಶಿಕ್ಷಕ ಸಿದ್ಧಾರೂಢ ಮುಗಳಖೋಡ, ಪತ್ರಕರ್ತ ನಾರನಗೌಡ ಉತ್ತಂಗಿ ಮಾತನಾಡಿದರು, ಜೆಸಿ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ, ಬಾಗಲಕೋಟೆ ಜಿಲ್ಲಾ ನೇಕಾರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಪ್ಪ ಹಳ್ಳೂರ ವೇದಿಕೆ ಮೇಲಿದ್ದರು. ಕಲಾವಿದ ರಾಜು ಗಲಗಲಿ ಮಾತೃ ಭಕ್ತಿಯ ಗೀತೆಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ಗಿರಿಮಲ್ಲ ಯರಗಡ್ಡಿ, ಸಿದ್ದಪ್ಪ ವನಹಳ್ಳಿ, ಮಹಾಲಿಂಗ ಹನಗಂಡಿ, ಮಂಜು ಹಳ್ಳೂರ, ಚಂದ್ರು ಯರಗಟ್ಟಿ, ಮಲ್ಲು ಹುಣಶ್ಯಾಳ, ಪ್ರಕಾಶ ಬಿಲಕುಂದ, ಅಡಿವೆಪ್ಪ ಹುಣಶ್ಯಾಳ, ಮಹಾದೇವ ಗಲಗಲಿ, ಮಹಾಲಿಂಗ ನಡಕಟ್ನಿ, ಶ್ರೀಕಾಂತ ಜಗದಾಳ, ಶಂಕರ ಪಂಕಿ ಮುಂತಾದವರ ನೇತೃತ್ವದಲ್ಲಿ ಆಯೋಜಿದ್ದ ಕಾರ್ಯಕ್ರಮ ಜನರ ಗಮನ ಸೆಳೆಯಿತು. ನೂರಾರು ತಾಯಂದಿರು, ಮಕ್ಕಳು ಮತ್ತು ಇತರರಿದ್ದರು.