ಸಾರಾಂಶ
ದಾಬಸ್‍ಪೇಟೆ: ಕಳೆದ ಮೂರು ದಿನಗಳಿಂದ ಸುರಿಸುತ್ತಿರುವ ಬಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದಿದ್ದು ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾಬಸ್‍ಪೇಟೆ: ಕಳೆದ ಮೂರು ದಿನಗಳಿಂದ ಸುರಿಸುತ್ತಿರುವ ಬಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದಿದ್ದು ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಂಪುರ ಹೋಬಳಿಯ ಗೌರಾಪುರದಲ್ಲಿ ವೃದ್ಧೆ ತಿಮ್ಮರಾಜಮ್ಮ(62) ಮನೆ ಕುಸಿದಿದೆ. ತಿಮ್ಮರಾಜಮ್ಮ ಮತ್ತು ಭಾನುವಾರ ರಾತ್ರಿ ಮಲಗಿದ್ದ ಸಮಯದಲ್ಲಿ ಮನೆಯ ಶೀಟ್ ಕುಸಿಯುತ್ತಿದ್ದ ಶಬ್ದ ಮಗ ಎಚ್ಚರಗೊಂಡು, ತಾಯಿಯನ್ನು ಎಬ್ಬಿಸಿ ಮನೆಯಿಂದ ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಿಮ್ಮರಾಜಮ್ಮ ಹಣೆಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮನೆ ಕುಸಿದು ಬಿದ್ದ ವಿಷಯ ತಿಳಿಯುತ್ತಿದ್ದಂತೆ ಗ್ರಾಪಂ ಸದಸ್ಯ ದಿನೇಶ್ ನಾಯಕ್, ಗ್ರಾಮಲೆಕ್ಕಿಗ ಬಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಗ್ರಾಪಂ ಸಹಕಾರದೊಂದಿಗೆ ಶಾಸಕರ ಗಮನಕ್ಕೆ ತಂದು ಸರ್ಕಾರದಿಂದಲೂ ಹೆಚ್ಚಿನ ಪರಿಹಾರ ನೀಡಲು ಒತ್ತಾಯಿಸುತ್ತೇವೆ ಎಂದು ಗ್ರಾಪಂ ಸದಸ್ಯ ದಿನೇಶ್ ನಾಯಕ್ ತಿಳಿಸಿದರು.